ತ್ಯಾಂಪ ಮತ್ತು ಹೊಸ ಜಾಹಿರಾ--ಥೂ

ತ್ಯಾಂಪ ಮತ್ತು ಹೊಸ ಜಾಹಿರಾ--ಥೂ

ಪಟಪಟನೆ ದಬದಬನೆ ಬೀಳುತ್ತಿದ್ದವು ಪೆಟ್ಟುಗಳು ಅವನ ಮೇಲೆ ಎಲ್ಲೆಂದರಲ್ಲಿ.
ಯಾಕೋ ಬುದ್ದಿಗಿದ್ದೀ ನೆಟ್ಟಗಿದೆಯೇನೋ, ಹೆಣ್ಣೂ ಹೊರಗಡೆ ಮಕ್ಕಳ ಜತೆ ಯಾವ ರೀತಿ ವ್ಯವಹರಿಸಬೇಕೂ ಗೊತ್ತಿಲ್ಲವಾ?
ಪಕ್ಕದಿಂದ ಪುನ ಯಾರೋ" ಇನ್ನೂ ಹಾಕ್ರೀ ನಾಲ್ಕು, ನೋಡಿದ್ರೆ ಸಂಭಾವಿತನ ತರ ಕಾಣ್ಸತ್ತೆ, ಇದೇನಾ ಮಾಡೊಕೆಲ್ಸ"
"ಇಂತವರೇ ಗೋಮುಖ ವ್ಯಾಘ್ರರ ತರಹ ಇನ್ನೂ ಎರಡ್ ನನ್ ಕಡೆಯಿಂದಾನೂ ಮಡಗ್ರೀ" ,ಪಕ್ಕದಲ್ಲಿಂದ ಬಂತು ದನಿ, ನೋಡ್ತಾನೆ ತ್ಯಾಂಪ, ಮುದುಕಪ್ಪ ಕೂತಲ್ಲಿಂದ ಎಳೋಕಾಗೊಲ್ಲ ಆದರೂ ಹೇಳ್ತಾ ಇದ್ದಾನೆ." ಬಿಡ್ಬಾರ್ದು..ಇಂತವರಿಗೆ ಕೈ ಕಾಲು ಮುರ್ದ್ ಹಾಕ್ಬೇಕು,....".
ಇನ್ನೂ ತರಹೇವಾರಿ ಮಾತುಗಳು, ಕಂಠಗಳು, ಧ್ವನಿಗಳು ಮುಖಗಳು.....
"ಯಾಕೆ ಏನಾಯ್ತು? ಕೇಳಿದವು" ಕೆಲವು ಆಲಸೀ ದನಿಗಳು, 
"ಮತ್ತಿನ್ನೇನು ಹೆಂಗಸನ್ನು ನೋಡಿ ಬಾಯ್ ಬಾಯ್ ಬಿಡ್ತಾ ಇದ್ದಾನೆ ನೋಡಿ", 
"ಬಸ್ಸಲ್ಲಿ ಇಂತದ್ದೆಲ್ಲಾ ಆಗ್ತಾನೇ ಇರತ್ತೆ, ನಾವೇ ಸ್ವಲ್ಪ ಜಾಗೃತೆಯಲ್ಲಿರಬೇಕು, ಅಷ್ಟಿದ್ರೆ ಬಸ್ಸಲ್ಲಿ ಯಾಕೆ ಬರ್ಬೇಕೂ"
"ಅದೇನ್ರೀಹೀಗ್ಗ್ಯಾಕೆ ಹೇಳ್ತೀರಾ? ನಾವೇನು ಕೈಲಾಗದವರು ಅಂದ್ಕೊಂಡ್ರಾ?.. 
ಇಲ್ಲಿಯೇ ಇದ್ದರೆ ಸದನದ ಪರಿಸರ ಗ್ಯಾರಂಟೀ.
ತ್ಯಾಂಪ ಆತನನ್ನ ಬದಿಗೆ ಕರೆದೆಳೆದ.
"ಏನಪ್ಪಾ ಯಾಕೆ ಹೀಗ್ಮಾಡ್ದೆ?, ನೋಡ್ಲಿಕ್ಕೆ ಒಳ್ಳೆ ಸಂಸಾರಸ್ಥರ ತರಹ ಕಾಣ್ಸ್ತಾ ಇದ್ದೀಯಾ..??"
"ತಪ್ಪು ನಂದಲ್ಲ ಸಾರ್?", 
"ಮತ್ತೆ.... ?"
"ಆ ಮದ್ದಿಂದೂ..?
"ಮದ್ದಾ.. ಯಾವ ಮದ್ದು...?" ಗುಜು ಗುಜು ನಿಂತಿತೇ..?
ನೋಡಿ ಆ ಕಂಬದ ಪಕ್ಕದಲ್ ಕುತ್ಕೊಂಡಿದ್ದಾನಲ್ಲಾ ನೇಪಾಳದ ಮದ್ದಿಟ್ಕೊಂಡಿದ್ದಾನೆ, ಅವನು ಶಕ್ತಿ ಮದ್ದು ಕೊಡ್ತಾ ಇದ್ದಾನೆ, ಅದನ್ನ ನೋಡೋಣಾ ಅಂತ ತಕ್ಕೊಂಡೆ, 
ಅದಕ್ಕೇ...
ನಂಗೇನಾಯ್ತೋ ಗೊತ್ತಿಲ್ಲ ಸಾರ್, ಒಂದ್ ಮಾತ್ರೆಯೊಳ್ಗೇ ಎಂಥಾ ಪವರ್ ಅಂತ್ರೀ, ನಂಗೇ ಗೊತ್ತಾಗ್ದ್ ಹಾಗೇ ಆಕರ್ಷಣೆ ಆಯ್ತ್ ಸರ್, ಅವ್ಳ್ ಪಕ್ಕ ಹೋದ್ ನಿಜ ಸಾರ್, ನನ್ನಾಣೆ ದೇವ್ರಾಣೆ ನಂದಲ್ಲ ತಪ್ಪು ಸರ್.
ನೋಡ್ಲಿಕ್ಕೆ ಒಳ್ಳೆಯನ್ ತರಾ ಇದ್ದೀಯಾ, ಹಿಂಗಾ ಮಾಡೋದು, ಸಂಜೆ ರಾತ್ರೆಯಾದ ಮೇಲೆ ತಕೊಂಡ್ರಾಗ್ತಿತ್ ಅಲ್ವಾ.. ಪಕ್ಕದಲ್ಲಿರೋನ್ನ ಕೇಳೋಕ್ ಹೋದ, ಯಾರಿದ್ದಾರೆ ಪಕ್ಕ...?
ಎಲ್ಲಾ ಆ ಮದ್ದಿನೋನ್ ಪಕ್ಕನ್ನಾ.....
"ಅಂದ ಹಾಗೇ ಯಾವ ಮದ್ದದು?" ಕೇಳಿದ ಸೀನ
"ನಂಗೂ ಸಿಕ್ಕಿಲ್ಲ ಕಣೋ, ನಾನ್ ಅವ್ನ್ ಹತ್ರ ಮಾತಾಡ್ತಾ ಇದ್ದಹಾಗೇ ನನ್ನನ್ನೆಲ್ಲಾ ಬಿಟ್ಟು ಆ ಮದ್ದಿನೋನ ಹತ್ರ ಹೋಗಿ ಬಿಸಿ ವಡೆ ತಕಂಡ್ ಹಾಗೆ ಖಾಲೀ ಮಾಡ್ಬಿಟ್ರ್ಯು. ಎಲ್ಲಾ ಬಿಟ್ಟು ಆಕೈ ಕಾಲಿಲ್ದೇ ಇರೋನ್ ತರ ಇದ್ದ್ನಲ್ಲಾ, ಆ ಮುದುಕ.... ಅವ್ನಿಗೂ ಸಿಕ್ತು ಕಣೋ, ನಂಗೇ ಸಿಗ್ಲಿಲ್ಲ..." 
ನಂತ್ರ..?
ಅಲ್ಲಾ ಅವ್ನ ಕಥಿ..
ಅದು ಬೇರೆಯೇ ಬಿಡು
ಏನದು?
ಅಲ್ಲಯ್ಯಾ ನಾನು ನಿನ್ನ ತಪ್ಸ್ದೇ ಇದ್ರೆ ಏನಾಗ್ತಿ ಗೊತ್ತಾ..?ತ್ಯಾಂಪ.
"ಏನಾಗ್ಲಿಕ್ಕಿಲ್ಲ ಬಿಡೀ ಸಾರ್.."
"ಯಾಕೋ ಜನ ತಾರಾಮಾರ್ ಹೊಡ್ದು ಪೋಲೀಸು ಜೈಲು...."
"ಅಯ್ಯೋ ದಿನಾ ಅಳೋರಿಗೇ...?"
"ಏನರ್ಥ?"
"ಪೋಲೀಸ್ರ್ ಹಿಡ್ದ್ರೆ ಬಿಡಿಸಿ ತರೋಕೆ ಜನ ಇದ್ದಾರೆ ಸಾರ್"
"ಯಾರಿದ್ದಾರಪ್ಪಾ...?"
"ನಮ್ ಹೆಂಡ್ರೂ..."
ಅವಳಿಗೇನಪ್ಪಾ ..ಗ್ರಾಚಾರ..?"
"ಯಾಕೆ ಸಾರ್ ಹಂಗಂತೀರಾ, ಅವ್ರೇ ನನ್ ಹೆಂಡ್ರೂ.."
"ಯಾರು..? ಎಲಾ ಇವ್ನ. ಯಾಕೋ ಹಿಂಗಂತೀ.."
"ಅಯ್ಯೋ ಬಿಡೀ ಶಿವ್ನೇ ಇದೇ ನಮ್ ಕೆಲ್ಸ, ಹೆಂಗೆ ಮುಕ್ರಕೊಂಡವ್ರೆ ಜನ.. ನೋಡಿದ್ರಾ..?" 
"ಅಂದ್ರೆ.......?" ತ್ಯಾಂಪ ಬೆಸ್ತು.
"ನಮ್ ಮದ್ದು ಮಾರಾಟ ಮಾಡೋ ಇಧಾನ..ಇದೇಯಾ ಸಾರ್"
" ಏನೂ....ಜಾಹೀರಾಥೂ..... ಆ ಮದ್ದಿಂದಾ..?"

 


 

 

Rating
No votes yet

Comments

Submitted by venkatb83 Mon, 02/11/2013 - 20:05

"ಮುದುಕಪ್ಪ ಕೂತಲ್ಲಿಂದ ಎಳೋಕಾಗೊಲ್ಲ ಆದರೂ ಹೇಳ್ತಾ ಇದ್ದಾನೆ." ಬಿಡ್ಬಾರ್ದು..ಇಂತವರಿಗೆ ಕೈ ಕಾಲು ಮುರ್ದ್ ಹಾಕ್ಬೇಕು,....".
ಇನ್ನೂ ತರಹೇವಾರಿ ಮಾತುಗಳು, ಕಂಠಗಳು, ಧ್ವನಿಗಳು ಮುಖಗಳು.....
"ಯಾಕೆ ಏನಾಯ್ತು? ಕೇಳಿದವು" ಕೆಲವು ಆಲಸೀ ದನಿಗಳು, "

;()00000

ಅಬ್ಬಾ...!! ಹೇಗೋ ಉಂಟು...!!
ಕೆಂಪೇಗೌಡ ಬಸ್ ಸ್ಟೇಶನ್ ಮತ್ತಿತರ ಕಡೆ ಈ ತರಹದ ಹಲವು ನಾಟಕಗಳನ್ನು ನಾ ನೋಡಿರುವೆ...!!
ಇಬ್ಬರು ಜಗಳವಾಡುವ ಹಾಗೆ ನಾಟಕ ಮಾಡಿ-ಜನರಿಂದ ಹಣ ಪಡೆದು ಒಬ್ಬರಿಗೆ ಒಬ್ಬರು ಶಾಪಿಸುತ್ತ ಹೋಗಿ ದೂರದಲ್ಲಿ ಮತ್ತೆ ಒಂದಾಗಿ ಮತ್ತೊಂದು ನಾಟಕಕ್ಕೆ ರೆಡಿ ಆಗುವುದು...!!
ಹೀಗೆ ಬದುಕೋಕೆ ಏನೇನೋ ನಾಟಕ ಮಾಡುವ ಜನರನ್ನ ನೋಡಿ ನೋಡಿ ಈಗೀಗ ನಿಜವಾದ-ಕಷ್ಟದಲ್ಲಿರುವ ಜನರಿಗೂ ಸಹಾಯ ಮಾಡಲು ಮನ ಹಿಂಜರಿಯುತ್ತಿದೆ...;(೦೦೦೦

ಶುಭವಾಗಲಿ...

\।