ಧಾರವಾಡ ಕನ್ನಡ- ಹೊಸ ಸರಣಿ

ಧಾರವಾಡ ಕನ್ನಡ- ಹೊಸ ಸರಣಿ

ಅದೆಷ್ಟೋ ಬಗೆಯ ಕನ್ನಡಗಳು ನಮ್ಮಲ್ಲಿವೆ - ಸುಮಾರು ಎಪ್ಪತ್ತು . ನಾವು ಕನ್ನಡದ ಬಗೆಗಳನ್ನು ಅರಿಯಬೇಕಲ್ಲದೆ , ಅವುಗಳ ಬಗ್ಗೆ ಸಹನೆಯನ್ನೂ ಗೌರವವನ್ನೂ ಬೆಳೆಸಿಕೊಳ್ಳಬೇಕು .
ಈ ನಿಟ್ಟಿನಲ್ಲಿ ನನ್ನದೊಂದು ಕಿರುಪ್ರಯತ್ನ ಒಂದು ಸರಣಿಯ ರೂಪದಲ್ಲಿ ಬರಲಿದೆ ...
ಧಾರವಾಡದ ಸುತ್ತಮುತ್ತಲಿನ ಜನ ಆಡುವ ಕನ್ನಡದ ಬಗ್ಗೆ ಒಂದಿಷ್ಟು ಬರೆಯೋಣ ಎನ್ನಿಸಿದೆ .. ಅಲ್ಲಿ ಕೂಡ ಜಾತಿವಾರು ವ್ಯತ್ಯಾಸಗಳಿವೆ ...ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ . ನಾನು ಆಡುವ ಕನ್ನಡವನ್ನು ಪ್ರಮುಖವಾಗಿ ತಿಳಿಸುವೆ .
ಪ್ರಮಾಣ ( ಪುಸ್ತಕ) ರೂಪದ ಕನ್ನಡಕ್ಕೆ ಹೋಲಿಸಿ ಕಂತುಗಳಲ್ಲಿ ಬರೆಯುವೆ .

ಇದೇ ತರಹ ... ಗುಲ್ಬರ್ಗ ಕನ್ನಡ ... ಮಂಡ್ಯ ...ಹಳೇ ಮೈಸೂರ್ ... ಹಳ್ಳಿ ಮೈಸೂರ್ ... ಐನಾಪುರ ಕನ್ನಡ ... ಇತ್ಯಾದಿಗಳನ್ನು ಯಾರಾದರೂ ಬರೆಯತೊಡಗಿದರೆ ಚೆನ್ನಾಗಿರುತ್ತದೆ ಅಲ್ಲವೇ ? ಕುಂದಗನ್ನಡದ ಬಗೆಗೆ ಒಂದು ಬ್ಲಾಗ್ ಈಗಾಗಲೇ ಇದೆ.

ನಿರೀಕ್ಷಿಸಿ.

Rating
No votes yet