ನನ್ನಿನಿಯ
ದೂರವಿದ್ದೇ
ಮೈಯ ಸುಟ್ಟನು;
ಅವನ ಸೇರಲು
ನನ್ನ ಅಂಗಗಳೇ
ಕರುಬುವುವು
ಒಂದರ ಮೇಲೊಂದು
ಕಣ್ಣಿಗೆ ಬಿದ್ದೊಡನೆ
ಎನ್ನೆದೆಯ ಕಸಿದ ;
ಸೋಕಿದರೆ
ಅಂಕೆ ತಪ್ಪುವುದೊಡಲು
ಅವನ ಪಡೆದರೂ
ಚಣದ ಸುಖ
ತೆರಳುವುದು
ಅವನೊಡನೆಯೇ
ಇದಕೂ ಮೀರಿದ
ಅಚ್ಚರಿಯೊಂದಿದೆ
ಇಂತಿದ್ದರೂ ಅವನೇ
ನನ್ನಿನಿಯ!
ಸಂಸ್ಕೃತ ಮೂಲ ( ಅಮರುಕನ ಅಮರುಶತಕದ್ದೆಂದು ವಿದ್ಯಾಧರನ ಸುಭಾಷಿತ ರತ್ನಕೋಶ (೭೩೪)ದಲ್ಲಿ ಕೊಟ್ಟಿದೆ):
ದಹತಿ ವಿರಹೇಷ್ವಂಗಾನೀರ್ಷ್ಯಾ ಕರೋತಿ ಸಮಾಗಮೇ
ಹರತಿ ಹೃದಯಂ ದೃಷ್ಟಃ ಸ್ಪೃಷ್ಟಃ ಕರೋತ್ಯವಶಾಂ ತನುಮ್
ಕ್ಷಣಮಪಿ ಸುಖಂ ಯಸ್ಮಿನ್ ಪ್ರಾಪ್ತೇ ಗತೇ ಚ ನ ಲಭ್ಯತೇ
ಕಿಂ ಅಪರಂ ಅತಶ್ಚಿತ್ರಂ ಯನ್ಮೇ ತಥಾಪಿ ಸ ವಲ್ಲಭಃ
दहति विरहेष्व्ङ्गानीर्ष्यां करोति समागमे
हरति हृदयं दृष्टः स्पृष्टः करोत्य्वशां तनुम्
क्षणम् अपि सुखं यस्मिन्प्राप्ते गते च न लभ्यते
किमपरम् अतश्चित्रं यन्मे तथापि स वल्लभः २२.३५ (७३४)
-ಹಂಸಾನಂದಿ
ಕೊ: ಅಮರುಕನದ್ದು ಅಮರು ಶತಕವಾದ್ದರಿಂದ ನೂರು ಪದ್ಯಗಳು ಇರಬೇಕಾಗಿದ್ದರೂ, ಅಮರುಶತಕದ್ದೇ ಬೇರೆ ಬೇರೆ ಪ್ರತಿಗಳಲ್ಲಿ, ಟೀಕೆಗಳಲ್ಲಿ ಸಿಗುವುದನ್ನು ಸೇರಿಸಿದರೆ ಅದಕ್ಕಿಂತ ಹೆಚ್ಚು ಪದ್ಯಗಳು ಇವೆ. ಇದಕ್ಕೂ ಮಿಗಿಲಾಗಿ, ಇನ್ನು ಕೆಲವು ಬೇರೆ ಪದ್ಯ ಸಂಗ್ರಹಗಳಲ್ಲಿ ಅಮರುಕನದ್ದೆಂದು ಹೇಳಲಾಗಿರುವ ಹಲವು ಪದ್ಯಗಳು, ಅಮರುಶತಕದ ಟೀಕೆಗಳಲ್ಲೇ ಇಲ್ಲ.ಹಾಗಾಗಿ, ಈ ಪದ್ಯ ಪ್ರಕ್ಷಿಪ್ತವೂ ಇರಬಹುದು. ಆದರೂ ವಿದ್ಯಾಕರನು ಅಮರುಕನದ್ದೆಂದು ಹೇಳಿರುವುದರಿಂದ ನಾನೂ ಅದನ್ನೇ ಉದ್ಧರಿಸಿದ್ದೇನೆ.
ಚಿತ್ರ ಕೃಪೆ: ವಿಕಿಪೀಡಿಯ (http://en.wikipedia.org/wiki/File_talk:Ananthabhadram_Kavya.jpg#mediavie...)
Comments
ಉ: ನನ್ನಿನಿಯ
ಮನೋತುಮುಲದ ಯಶಸ್ವೀ ಚಿತ್ರಣ. ಧನ್ಯವಾದಗಳು.
ಉ: ನನ್ನಿನಿಯ
ಸುಮಧುರ ತುಮುಲಗಳ ಕುಸುರಿ ಸಾಲುಗಳು, ಸುಂದರವಾಗಿವೆ