ನನ್ನ ಕನ್ನಡ ಕಲಿಕೆ -೧

ನನ್ನ ಕನ್ನಡ ಕಲಿಕೆ -೧

ಹಿಂದೊಮ್ಮೆ 'ನಾನು ಈಗ ಕನ್ನಡ ಕಲಿಯುತ್ತಿದ್ದೇನೆ ' ಎಂಬ ಬ್ಲಾಗ್ ಲೇಖನ ಬರೆದಿದ್ದುದು ನೆನಪಿನಲ್ಲಿರಬಹುದು. ಮೊದಲಿಗೆ ಭೋಗಾದಿ ಮಹೇಶರು , ಅನಗತ್ಯ ಸಂಸ್ಕೃತ ಶಬ್ದಗಳ ಬಳಕೆ ಕುರಿತು ಕಣ್ತೆರೆಸಿದರು , ಜತೆಜತೆಗೆ ಸಂಗನಗೌಡರ ಕೆಲವು 'ಇಚಾರ' ಇಲ್ಲೇ ಸಂಪದದಲ್ಲಿ ಓದಿದೆ. ಒತ್ತಕ್ಷರ ಕುರಿತಾದ ಅವರ ವಿಚಾರ ಓದಿ ಆರ್ಕಿಮಿಡೀಸ್ 'ಯುರೇಕಾ ' ಎಂದಂತೆ 'ಹೌದಲ್ಲಾ' ಎಂದುದ್ಗರಿಸಿದೆ. ಹಿಂದೊಂದು ಸಲ ಡಿ. ಎನ್. ಶಂಕರಭಟ್ಟರ ' ಕನ್ನಡಪದ ರಚನೆ' ಎಂಬ ಪುಸ್ತಕವನ್ನು ಓದಿದ್ದೆ. ಇದೆಲ್ಲದರ ಪರಿಣಾಮವಾಗಿ ಶಬ್ದಕೋಶವೊಂದನ್ನಿಟ್ಟುಕೊಂಡು ಓದಲಾರಂಭಿಸಿದ್ದೇನೆ. ಅ,ಆ,ಇ,ಈ .... ಆಗಿ ಕ ಅಕ್ಷರಕ್ಕೆ ಬಂದಿದ್ದೇನೆ.

ಬನ್ನಿ , ನಾನು ಕಂಡುಕೊಂಡ ವಿಷಯಗಳೇನು? ತಿಳಿದುಕೊಳ್ಳಿ.

ಅಂಕುರ,ಅಂಕುರಿಸು - ಮೊಳಕೆ , ಮೊಳಕೆಯೊಡೆ
ಅಂಗುಷ್ಟ - ಹೆಬ್ಬೆರಳು
ಅಂಚುಮಟ - ಅಂಚಿನವರೆಗೆ (ನೋಡಿ. ಕಂಟ(ಠ)ಮಟ, ಅಲ್ಲಿಮಟಾ )
ಅಂಜು , ಅಂಜಿಸು , ಅಂಜುಕು(ಗು)ಳಿ
ಅಂಟು , ಅಂಟಿಸು , ಅಂಟುರೋಗ
ಅಂದ , ಅಂದಗೊಳಿಸು , ಅಂದಗೇಡಿ , ಅಂದಗೆಡಿಸು
ಅಂತರ್ದೃಷ್ಟಿ - ಒಳನೋಟ
ಅಂಧಶ್ರದ್ಧೆ - ಕುರುಡುನಂಬಿಕೆ
ಅಂಬಾಡಿಯೆಲೆ- ನೀಳವಾದ ವೀಳ್ಯದೆಲೆ
ಅಕ್ಕಡಿಕಾಳು- ಬೇಳೆಕಾಳು
ಅಕ್ಕರ , ಅಕ್ಕರತೆ , ಅಕ್ಕರೆ
ಅಕ್ಷತಾರೋಪಣ - ಅಕ್ಕಿಕಾಳು ಹಾಕುವದು.
ಅಕ್ಷರಶ: - ಅಕ್ಷರ ಅಕ್ಷರ ವಾಗಿ
ಅಗಳಿ - ಬೋಲ್ಟು
ಅಗಾವು( ಹಿಂದಿ ಮೂಲ)- ಮುಂಗಡ
ಅಗ್ನಿ, ಅಗ್ಗಿಷ್ಟಿಕೆ - ಅಗ್ಗಿ , ಅಗ್ಗಿಟಿಕೆ
ಅಚ್ಚ - ಸ್ಪಷ್ಟವಾದ, ಸರಿಯಾದ
ಅಚ್ಚರಿ-ಆಶ್ಚರ್ಯ
ಅಚ್ಚಳಿ- ಹಾಳಾಗು
ಅಚ್ಚುಕಟ್ಟು
ಅರಣ್ಯ- ಅಡ(ಟ)ವಿ

ಅಟ್ಟು - , ಅಟ್ಟಿಸು, ಅಟ್ಟುಗೂಳು(ಬೇಯಿಸಿದ ಅನ್ನ) , ಅಟ್ಟುಣ್ಣು
ಅಡಿಗೆ , ಅಡು , ಅಡುಗೂಳು(ಬೇಯಿಸಿದ ಅನ್ನ) ,ಅಡುಗಬ್ಬು- (ಉರುವಲ ಕಟ್ಟಿಗೆ), ಅಡುಗೂಲಜ್ಜಿ (ಇತರರರಿಗೆ ಅಡಿಗೆ ಮಾಡಿ ಹಾಕುವಾಕೆ) , ಅಡುಬಾಣಲೆ
ಅಡಕ , ಅಡಕಗೊಳಿಸು
ಅಡವಿ , ಅಡವಿಗಿಚ್ಚು , ಅಡವಿಪಾಲು , ಅಡವಿಬೀಳು ( ದಾರಿತಪ್ಪು , ಅಡ್ಡಹಾದಿಹಿಡಿ- ನೋಡಿ- ಆಡಾಡುತ್ತ ಅಡವಿಬಿದ್ದರಂತೆ)
ಇಂಧನ - ಉರುವಲು ,
ಅಡಿ , ಅಡಿಗ ( ದೇವರ ಪಾದದ ಬಳಿ ಇರುವವ - ಅರ್ಛಕ) , ಅಡಿಕೆಡು , ಅಡಿಗಾಣು , ಅಡಿಗಲ್ಲು , ಅಡಿಗಡಿಗೆ , ಅಡಿಮುಟ್ಟ , ಅಡಿಯಿಡು , ಅಡಿಯ ( ಸೇವಕ , ಆಳು), ಅಡಿಯಿಂದ ಮುಡಿಯವರೆಗೆ.

Rating
No votes yet