ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!

 

ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ
ಸುರಿಯುತ್ತಾ ಇತ್ತಂತೆ ತುಂತುರು ಮಳೆ
ಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ
ದಾಂಡಿಗರ ಓಟಗಳ ಭರ್ಜರಿ ಸುರಿಮಳೆ

ಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ
ಸೆಹವಾಗ, ತೆಂಡೂಲ್ಕರ್ ಮತ್ತು ಯುವರಾಜ
ಮಳೆಯನ್ನೇ ಸುರಿಸಲಿ ಗಂಭೀರ, ವಿರಾಟ,
ರೈನಾ ಹಾಗೂ ಧೋನಿ ಎಂಬ ಮಹಾರಾಜ

ಹರಭಜನ ಜಹೀರರ ಎಸೆತಗಳಿಗೆ ನುಚ್ಚು
ನೂರಾಗಿ "ಶಹೀದ"ರಾಗಲಿ ಆಫ್ರಿದಿ ಪಡೆ
ಪ್ರತಿಯೊಬ್ಬ ಭಾರತೀಯನೂ ನುಡಿಯಲಿ
"ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ"

ಆಟ ನೋಡಲು ಬಂದಿಹ ನೆರೆಮನೆಯವರೆಲ್ಲಾ
ಶಾಂತಚಿತ್ತರಾಗಿ ತಮ್ಮ ತವರಿಗೆ ಮರಳಿಬಿಡಲಿ
ಇಲ್ಲೆಲ್ಲೊ ಅವಿತು ಕೂತು ಮುಂದೊಮ್ಮೆ ನಮ್ಮ
ಮನೆಯ ಶಾಂತಿಯನ್ನು ಕದಡದೇ ಇರಲಿ!
-ಆತ್ರಾಡಿ ಸುರೇಶ ಹೆಗ್ಡೆ
 

Rating
No votes yet

Comments