ನಮ್ಮ ಸತ್ಸಂಗದ ಬಗ್ಗೆ....

ನಮ್ಮ ಸತ್ಸಂಗದ ಬಗ್ಗೆ....

೧೧/೧/೨೦೧೦.


 


ನಮ್ಮ  ಸತ್ಸಂಗದ  ಬಗ್ಗೆ,,,,,,,,,,


ನಾನು ಪ್ರತಿದಿನ ಸಂಜೆ  ೬..೭.ರವರೆಗೆ  ಸತ್ಸಂಗ ನಡೆಯುವುದು.  ಅಲ್ಲಿ ನಮ್ಮ ಗುರುಗಳಾದ   ಶ್ರೀ ಎಮ್. ಬಿ. ರಾಟೀಮನಿಯವರು,ಮತ್ತು ನ್.  ಡಿ. ಜವಳಿ ಗುರುಗಳು  ದಿನವೂ ನಮಗೆ  ಒಳ್ಳೆಯ ಪ್ರವಚನ  ಹೇಳುವರು.   ಇಲ್ಲಿ ಮುಖ್ಯವಾಗಿ  ಶ್ರೀ ಶ್ರೀ ಶಂಕರಾಚಾರ್ಯ್ ರ  ಅದ್ವೈತವನ್ನೇ  ಸಾರುವ ಕೃತಿಗಳಾದ.


ಶ್ರೀ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ, ಸಿದ್ಧಂತ ಶಿಖಮಣಿ, ಶ್ರೀ ಸಿದ್ಧರೂಢರ ಚರಿತ್ರೆ, ಉಪನಿಶತ್ತು, ಭಗವದ್ ಗೀತೆ, ರಾಮಾಯಣ, ಪಂಚದಶಿ ಯೋಗ ವಾಶಿಷ್ಠ ಹೀಗೆ ಅನೇಕ ಕೃತಿಗಳ ಆಧರದಿಂದ ಪ್ರವಚನವನ್ನು ಗುರುಗಳು ನಮಗೆ ಅತ್ಯಂತ ಪ್ರಸನ್ನತೆಯಿಂದ, ಯುಕ್ತಿ, ಉಪಮೆಗಳಿಂದ, ಕಳಕಳಿಯಿಂದ ತಿಳಿಯುವ ಹಾಗೆ ಹೇಳುವರು. ಇಂಥ ಸದ್ಗುರುಗಳು ಸಿಕ್ಕಿದ್ದು ನಮ್ಮ ಸುಕೃತವೇ ಸರಿ!


 ದಿನವೂ ಬಿಟ್ಟು ಬಿಡದೆ ನಮ್ಮ ಸತ್ ಸಂಘವು ೪ ವರ್ಷಗಳಿಂದ ಸತತವಗಿ ನಡೆದು ಬಂದಿದೆ. ಶಿಷ್ಯರ ಸಂಖೆ ಹೆಚ್ಚಗಿದ್ದರೂ, ಕಡಿಮೆ ಇದ್ದರೂ ಮಳೆ ಚಳಿ ಎನ್ನದೆ ಗುರುಗಳ ಉಪದೇಶ ನಡೆದಿರುತ್ತದೆ. ವಯಸ್ಸಾದ ಗುರುಗಳು ತಮ್ಮ ಆಯಾಸ ಶ್ರ ಮವನ್ನು  ಲೆಕ್ಕಿಸದೇ ನಮಗೋಸ್ಕರವಾಗಿ ತಮಗೋಸ್ಕರ   ಏನನ್ನೂ


ಅಪೇ ಕ್ಷಿಸದೇ,  ಸತ್ಸಂಗದ  ಜನರ ಉದ್ಢಾರಕ್ಕೆಂದೇ, ಪ್ರವಚನ  ನೀಡುತ್ತಿದ್ದಾರೆ.  ಇಂಥಾ ಅಮೂಲ್ಯವಾದ ಜೀವನ ಸಾರ್ಥಕ್ಯದ ,ಉಪದೇಶದ ಸದುಪಯೋಗವನ್ನು


ನಾವು  ನೀವೆಲ್ಲರೂ, ಕೇಳಿ ಉದ್ಧಾರವಾಗಬೇಕಾಗಿದೆ.  ನನಗಂತೂ ಸತ್ಸ್ಂಗದಿಂದ ಮನಸ್ಸಿಗೆ ಶಾಂತಿ,  ನೆಮ್ಮದಿ, ಸಮಾಧಾನ  ದೊರೆತಿದೆ.  ಕಾರಣ ಇಂತಹ


ಸತ್ಸಂಗಗಳು ಎಲ್ಲಾ ಊರಿನಲ್ಲೂ,  ಅಲ್ಲಲ್ಲಿ,  ನಡೆದಿರುತ್ತವೆ.  ನಾವು ದಿನದ ಸ್ವಲ್ಪ ಸಮಯವನ್ನು ನಿಜವಾಗಿಯೂ ಸದುಪಯೋಗ  ಪಡೆಯಲು,ಸತ್ಸಂಗದಲ್ಲಿ


ಭಾಗವಹಿಸಿದಾಗಲೆ ಅದರ  ಮಹತ್ವವು ತಿಳಿಯುತ್ತದೆ.    ಸದ್ಗುರುವು ನಮ್ಮ  ಶ್ರಧ್ದೆ, ಭಕ್ತಿ ಯನ್ನು ನೋಡಿ  ಎಲ್ಲರಿಗೂ ಒಂದೇ ರೀತಿಯಾಗಿ ಬೋಧಿಸುವನು.


            ನಮ್ಮ ಸತ್ಸಂಗದಲ್ಲಿ  ಅನೇಕ ಮಹನೀಯರು,  ಮಹಿಳೆಯರು ಇರುವರು.  ಅವರಲ್ಲಿ ನನ್ನೊಂದಿಗೆ[ಅಂಬುಜ] ಉಮ. ಗಿರಿಜ, ಹೊಸೂರ್.ಸಂಗನ್ನವರು, ಇನ್ನೂ ಅನೇಕರಿದ್ದಾರೆ.  ಇಂಥಾ  ಸತ್ಸ್ಂಗದ ಉಪಯೋಗವನ್ನು  ನಾವು ನೀವೆಲ್ಲರೂ ಪಡೆದು ಧನ್ಯರಾಗೋಣ.


ಅಂಬುಜಾ ಜೋಶಿ.

Rating
No votes yet

Comments