ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ

ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ

ನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ 

ಅಲುಗೆ ಕುರುಳ್ ತೊಡವು ಪಳಂ
ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್
ಕಳಹಂಸಗಮನೆ ಕಾಮನ
ತೊಳಗುವ ಕೂರಂಬಿನಂತೆ ಪದಪಿಂ ಬಂದಳ್

ಪಳಂಚಲೆ = ಎದುರಿಸಿ ಹೊಡೆದಲುಗಿಸು, ತಾಗು
ಕುರುಳ್  = ಹೆಣೆದ ಕೂದಲು, ನವಿರ್ಗೂದಲು
ಅಲುಗು = ಮೆತ್ತಗೆ ಅಲ್ಲಾಡು
ಪೊಳೆಯೆ = ಹೊಳೆವ
ತೊಳಗುವ = ಮಿನುಗುವ
ಕೂರಂಬು = ಕೂರ್+ಅಂಬು= ಬೇಟರಾಯನ/ಕಾಮನ/ಮನ್ಮತನ  ಬಾಣ

(ನಮ್ಮ ಸುನಿಲನ 'ಕೂರ್ ಬೇಕೆ ಕೂರ್' ಬರಹಗಳನ್ನು ನೆನಪಿಸಿಕೊಳ್ಳಿ)
ಪದಪಿಂ = ಬೆಡಗಿನಿಂದ
ತಳತ್ತಳಿಸಿ -> ಅನುಕರಣಪದ (ಹೊಳೆಯುವುದನ್ನ ಒತ್ತು ಕೊಟ್ಟು ಹೇಳಲು)

ತಿರುಳು:-

ಅಲಗುವ ಹೆಣೆದಿರುವ ಕೂದಲು ಒಂದಕ್ಕೊಂದು ತಾಗುವ/ಎದುರಿಸುವ ತೊಡೆಗಳು ತಳಿತಳಿಸಿ ಹೊಳೆಯುವ ಚೆಂದವಾಗಿರುವ ಒಬ್ಬಳು ಹಂಸದಂತೆ ನಡೆದು, ಬೇಟರಾಯನ ಮಿನುಗುವ ಬಿಲ್ಲಿನಂತೆ ಬೆಡಗಿನಿಂದ ಬಂದಳ್

Rating
No votes yet