ನಾಗಭೂಷಣರ "ವಸಿಷ್ಠರು ಮತ್ತು ವಾಲ್ಮೀಕಿಯರು"

ನಾಗಭೂಷಣರ "ವಸಿಷ್ಠರು ಮತ್ತು ವಾಲ್ಮೀಕಿಯರು"

ಸ್ಥಳ: ಸಂಸ್ಕೃತ ಭವನ, ಹಾಸನ
ದಿನಾಂಕ: ಮಾರ್ಚ್ ೨೩, ೨೦೦೯
ಸಮಯ: ಸಂಜೆ ೫:೩೦

ನಾಗಭೂಷಣರು ಕಳೆದೆರಡು ವರ್ಷಗಳಿಂದ ಸಂಪದದ ಓದುಗರಿಗೂ ಪರಿಚಿತರು. ಅವರು ಇಲ್ಲಿ ಪ್ರಕಟಿಸಿರುವ ಬಹುಪಾಲು ಲೇಖನಗಳನ್ನೊಳಗೊಂಡ ಪುಸ್ತಕ ನಾಳೆ ಹಾಸನದಲ್ಲಿ ಬಿಡುಗಡೆಯಾಗಲಿದೆ.

ಪುಸ್ತಕಕ್ಕೆ ಪ್ರಾತಿನಿಧಿಕವಾಗಿ ಇಟ್ಟಿರುವ ಲೇಖನ ಇಲ್ಲಿದೆ:
http://sampada.net/article/11929

ಸಂಪದದಲ್ಲಿನ ಅವರ ಎಲ್ಲಾ ಲೇಖನಗಳಿಗಾಗಿ:
http://sampada.net/user/d_s_nagabhushana

ಕನ್ನಡದ ಅಂತರ್ಜಾಲ ಲೋಕಕ್ಕೆ ನಾಡಿನ ವಿಭಿನ್ನ ಸ್ಥಿತಿಗತಿಗಳನ್ನು, ವಿವಿಧ ವೈಚಾರಿಕ ನೆಲೆಗಳನ್ನು ಪರಿಚಯಿಸುವ ಕೆಲಸಗಳು ದೊಡ್ಡ ಮಟ್ಟದಲ್ಲಿ ಆರಂಭವಾಗಿದ್ದೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ. ನಾಡಿನ ಬಹುತೇಕ ಪ್ರಗತಿಪರ ಲೇಖಕರು ಅಂತರ್ಜಾಲವನ್ನು ಮುಟ್ಟಿಸಿಕೊಳ್ಳದೆ ದೂರವಿಟ್ಟಿದ್ದಂತಹ ದಿನಗಳಲ್ಲಿ ನಾಗಭೂಷಣರ ಬಹಳಷ್ಟು ಲೇಖನಗಳು ಇಲ್ಲಿ ಪ್ರಕಟವಾಗಿ, ಚರ್ಚೆಗೂ ಒಳಪಟ್ಟಿರುವುದು, ಮತ್ತು ಅಂತಹ ಚರ್ಚೆಗಳಲ್ಲಿ ಅವರೂ ಪಾಲುಗೊಂಡಿದ್ದು ನಾವು ಗಮನಿಸಬೇಕಾದ ಮುಖ್ಯ ವಿಚಾರ. ದೇಶಪ್ರೇಮ ಎಂದರೆ ಮತಪ್ರೇಮ, ಅಭಿವೃದ್ಧಿ ಮತ್ತು ಜಾಗತೀಕರಣವೇ ನಮ್ಮಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಎನ್ನುವಂತಹವು ಸ್ಥಾಪಿತ ಸಿದ್ಧಾಂತವಾಗಿ ಕನ್ನಡ ಅಂತರ್ಜಾಲದಲ್ಲಿ ತಳವೂರಿದ್ದಾಗ ನಾಗಭೂಷಣರ ಲೇಖನಗಳು ಅನೇಕ ಓದುಗರ ಚಿಂತನೆ ಮತ್ತು ದೃಷ್ಟಿಕೋನವನ್ನು ಬದಲಿಸಿದ್ದು ಅಥವ ಅವರೆ ಸಂದೇಹ ಪಟ್ಟುಕೊಳ್ಳುವಂತೆ ಮಾಡಿದ್ದು ಗಮನೀಯ.

ಬಹುಶಃ ಹಾಸನಕ್ಕೆ, ಮತ್ತು ಅಲ್ಲಿಂದ ಹೆಗ್ಗೋಡಿನ "ಚರಕ"ಕ್ಕೆ (http://sampada.net/article/16857) ಹೋಗಿಬಂದ ನಂತರ ಮತ್ತಷ್ಟು ಬರೆಯುತ್ತೇನೆ.

ನಮಸ್ಕಾರ,
ರವಿ...

Rating
No votes yet