ನಾರಿನಿಂದ ಕ್ಯಾನ್ಸರ್ ಗೆ ತಡೆ.
ನಾರಿನಿಂದ ಸ್ತನ ಕ್ಯಾನ್ಸರ್ ಗೆ ತಡೆ
ಬಾಲಕಿಯರು ಬೇಗನೇ ಋತುಮತಿಯಾಗುವುದಕ್ಕೂ ಸ್ತನ ಕ್ಯಾನ್ಸರ್ ಗೂ ಏನಾದರೂ ಸಂಬಂಧವಿದೆಯಾ ?
ಕೆನಡಾದ ಟೊರಂಟೋ ವಿವಿಯ ತಜ್ನರ ಪ್ರಕಾರ ಉತ್ತರ 'ಹೌದು'
ಹದಿ ವಯಸ್ಸಿಗೂ ಮುಂಚಿನ ಹಲವಾರು ಬಾಲಕಿಯರ ಮೇಲೆ ನದೆಸಿದ ಸಂಶೋಧನೆಗಳಿಂದ ಈ ಸಂಗತಿಯನ್ನು ಕಂಡುಕೊಂಡಿರುವ ಅವರು ಹೆಣ್ಣುಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಇಂಥ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಯಾವ ಹುಡುಗಿಯರು ಚಿಕ್ಕಂದಿನಿಂದಲೇ ನಾರುಯುಕ್ತ ಆಹಾರವನ್ನು ಹೆಚ್ಚು ತಿನ್ನುತ್ತಾರೋ, ಅವರ ಮುಟ್ಟು ತಡವಾಗಿ ಆರಂಭವಾಗುತ್ತದೆ ಎಂಬುದು ಇನ್ನೊಂದು ಪ್ರಮುಖ ಸಂಶೋಧನೆ. ಹೆಚ್ಚು ಸಂಸ್ಕರಿಸದ ಅಂದರೆ ಪಾಲೀಶ್ ಮಾಡದ ಗೋಧಿ, ಅಕ್ಕಿ, ಜೋಳ, ಮೆಕ್ಕೆಜೋಳ, ನವಣೆ, ಸಜ್ಜೆಯಂಥ ಆಹಾರ ಧಾನ್ಯಗಳಲ್ಲಿ ನಾರಿನ ಅಂಶ ಧಾರಾಳವಾಗಿರುತ್ತದೆ. ಅಂತಹ ಆಹಾರ ಒಳ್ಳೆಯದು.
ತರಕಾರಿ, ನೆನೆ ಹಾಕಿದ ಕಾಳುಗಳು ಮತ್ತು ಹಣ್ಣುಗಳಲ್ಲಿಯೂ ನಾರು ಸಮೃದ್ಧವಾಗಿರುತ್ತದೆ. ಇಂಥ ಆಹಾರವನ್ನು ಹೆಚ್ಚೆಚ್ಚು ಸೇವಿಸುವ ಬಾಲಕಿಯರು ಋತುಮತಿಯಾಗುವುದು ತಡ. ಇದರಿಂದಾಗಿ ಮುಂದೆ ಅವರು ಸ್ತನ ಕ್ಯಾನ್ಸರ್ ಗೆ ಸಿಲುಕುವ ಪ್ರಮಾಣವೂ ತುಂಬಾ ಕಡಿಮೆ ಎಂಬುದು ಖ್ಯಾತ ವೈಜ್ನಾನಿಕ ಲೇಖಕ ಮ್ಯಾಲ್ಕಮ್ ಕೂ ಅವರ ಅಭಿಪ್ರಾಯ.
ಕೆನಡಾದ ೬ ರಿಂದ ೧೪ ವರ್ಷದ ಒಟ್ಟು ೬೩೭ ಬಾಲಕಿಯರನ್ನು ೧೯೯೨ ರಿಂದ ೧೯೯೬ ರವರೆಗೆ ಇಂಥ ಪರೀಕ್ಷೆಗಳಿಗೆ ಒಡ್ಡಿ ಈ ಫಲಿತಾಂಶ ಪಡೆಯಲಾಗಿದೆ. ಇವರಲ್ಲಿ ಕೆಲವರು ಎಂಟೂವರೆ ವರ್ಷಕ್ಕೇ ಮುಟ್ಟಾಗಿದ್ಧರು. ಇನ್ನು ಕೆಲವರು ೧೫ ವರ್ಷಕ್ಕೆ. ಅಂಥಹವರ ಪಾಲಕರು ನಾರಿನ ಅಂಶ ಹೆಚ್ಚಾಗಿರುವ ಆಹಾರವನ್ನೇ ಮಗುವಿಗೆ ನೀದುತ್ತಿದ್ಧರು.
ಈಗಾಗಲೇ ಸಾಬೀತಾಗಿರುವ ಸಂಶೋಧನೆ ಪ್ರಕಾರ, ೧೨ ವರ್ಷದೊಳಗೆ ಮುಟ್ಟಾಗುವ ಬಾಲಕಿ ಮುಂದೆ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಂಭವ ತೀರಾ ಕಮ್ಮಿ, ಶೇ. ೧೦ ರಿಂದ ೧೫.
ಆದ್ದರಿಂದ ಸಹಜ ಆಹಾರವನ್ನು ಸೇವಿಸಿ, ಸ್ತನ ಕ್ಯಾನ್ಸರ್ ನಿಂದ ದೂರವಿರಿ ಎನ್ನುತ್ತಾರೆ ಮ್ಯಾಲ್ಕಂ.
ಕೃಪೆ: ಪ್ರಜಾವಾಣಿ ಬರೆದವರು : ರಾಜಸ
ಸಂಗ್ರಹಿಸಿದವರು: ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭