ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ನಾ ನೋಡಿದ ಸಿನಿಮಾ - ಆಕ್ಸಿಡೆಂಟ್

ಈ ಸಿನಿಮಾ ನೋಡಿದ್ದೂ ಒಂದು ಆಕ್ಸಿಡೆಂಟ್. ಮೊನ್ನೆ ಯುಗಾದಿಯಂದು ರಜೆ ಇದ್ದಿದ್ರಿಂದ ಹಾಗೆ ಒಂದು ಪ್ರವಾಸ ಅಂತ ಹೋಗಿದ್ವಿ. ಚಿಕ್ಕಮಗಳೂರು ತಲುಪಿದಾಗ ಸಂಜೆ ೫.೩೦. ಕಳಸಕ್ಕೆ ರಾತ್ರಿ ೧೨.೩೦ರ  ವರೆಗೂ ಬಸ್ ಇರ್ಲಿಲ್ಲ. ಯಾವ್ದದ್ರು ಲಾಡ್ಜ್ಅಲ್ಲಿ ಕೋಣೆ ಮಾಡಿದ್ರೆ, ನಮಗೆ ರವಿ ಹುಟ್ಟಿದ್ದು ಗೊತ್ತಾಗಿ ಎದ್ದು ಹೊರಡೋದು ತಡ ಆಗೋದು ಗ್ಯಾರಂಟಿ.  ಅದಕ್ಕೆ ೧೨.೩೦ ಬಸ್ಸಿಗೆ ಹೊರದೊದಂತ ತೀರ್ಮಾನ ಆಯ್ತು. ಇನ್ನು ಅಲ್ಲಿವರೆಗೆ ಏನ ಮಾಡೋದು ಅಂತ ಯೋಚಿಸಿ, ಒಂದು ಸಿನಿಮಾ ನೋಡೋಕೆ ಹೊರಟ್ವಿ. ಸರಿ.. "ಆಕ್ಸಿಡೆಂಟ್"  ಬಿಡುಗಡೆ ಆಗಿದ್ದು ಗೊತ್ತಿತ್ತು. ಚಿಕ್ಕಮಗಳೂರಲ್ಲಿ ಬಿಡುಗಡೆ ಆಗಿದ್ಯೋ ಇಲ್ವೋ; ಹೇಗಿರುತ್ತೋ ಏನೋ ಅಂತ ಯೋಚನೆ ಬಂತು. ಅಲ್ಲೇ ಒಂದು ಅಂಗಡಿಲಿ ವಿಚಾರಿಸಿ, ಅವ್ರು ಹೇಳಿದ ನಾಗಲಕ್ಷ್ಮಿ  ಚಿತ್ರಮಂದಿರದಲ್ಲಿ ೧೧.೩೦ ವರೆಗೆ ಸೆಟಲ್. ಅದೊಂದು ಸಸ್ಪೆನ್ಸ್ ಸಿನಿಮಾ ಅಂತ ಬಿಟ್ರೆ ಬೇರೇನೂ ಗೊತ್ತಿರ್ಲಿಲ್ಲ. ಸಿನಿಮಾ ಬಹಳ ಇಷ್ಟ ಆಯ್ತು. ರಮೇಶ್ ಸಿನಿಮಾ ವೇಗವನ್ನ ಸಕ್ಕತ್ತಾಗಿ ಕಾಯ್ದುಕೊಂಡು ಹೋಗಿದಾರೆ. ಯಾವ ಹಂತದಲ್ಲೂ ಇದು ಸರಿ ಇದೆಯ, ಇದನ್ನ ಹಿಂದೆ ಎಲ್ಲಿ ನೋಡಿರಬಹುದು ಅಂತೆಲ್ಲ ತಲೆ ಕೆಡಿಸಿಕೊಳ್ಳುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ. ಬಹಳಷ್ಟು ತಿರುವುಗಳೊಂದಿಗೆ ಉತ್ತಮ ನಿರೂಪಣೆ ಇದೆ. ನಮಗಂತೂ ಒಳ್ಳೆ ಟೈಮ್-ಪಾಸ್ ಆಯ್ತು.

Rating
No votes yet

Comments