ನಿನಗಾಗಿ ಕಾಯುತಿದ್ದೇನೆ!

ನಿನಗಾಗಿ ಕಾಯುತಿದ್ದೇನೆ!

ಗಂಟು ಮೂಟೆ ಕಟ್ಟುತಿದ್ದೇನೆ, ಸಾಯಂಕಾಲದ ಬಸ್ ಬುಕಿಂಗ್ ಆಗಿದೆ.........
ಜೊತೆಯಲ್ಲಿ ಬರುವೆ ಏನು?

ಇಷ್ಟು ದಿನ ಸಾಕಾಗಿದೆ ಪಿಜ್ಜಾ ಬುರ್ಗುರ್ ತಿಂದು ತಿಂದು,,,,
ಇನ್ನು ಮುಂದೆ ಊರಿನ ಸ್ಪೆಷಲ್ ಜೋಳ ರೊಟ್ಟಿ ತಿನ್ನೋಣ...........
ಜೊತೆಯಲ್ಲಿ ಬರುವೆ ಏನು?

ವೀಕೆಂಡ್ ತುಂಬಾ ಮಲಗಿ ಸಾಕಾಗಿದೆ,ಟ್ರಾಕಿಂಗ್ ಹೋದ್ರು ಮನಸು ಮಂಕಾಗ್ತಿದೆ,
ಹೊಲದಲ್ಲಿ ಮಾವಿನ ಗಿಡದ ಕೆಳಗೆ ಮಲಗೋಣ....
ಜೊತೆಯಲ್ಲಿ ಬರುವೆ ಏನು?

ಆಂಟಿ ಅಂಕಲ್ ಅಂತ್ಹೇಳಿ ಸಾಕಾಗಿದೆ, ಎದುರಿನ ಪ್ಲಾಟ್ ಹುಡ್ಗಿನು ಕೈಕೊಟ್ಟಗಿದೆ,,,,,,,
ಊರಿಗೆ ಹೋಗಿ ಮಾವ ಅತ್ತೆ ಎನ್ನೋಣ, ಅತ್ತೆ ಮಗಳನ್ ನೋಡೋಣ,,,,,,,,
ಜೊತೆಯಲ್ಲಿ ಬರುವೆ ಏನು?

ಗಂಟು ಮೂಟೆ ಕಟ್ಟುತಿದ್ದೇನೆ, ಸಾಯಂಕಾಲದ ಬಸ್ ಬುಕಿಂಗ್ ಆಗಿದೆ.........
ಜೊತೆಯಲ್ಲಿ ಬರುವೆ ಏನು?

ಪ್ರೀತಿಯಿಂದ
ಶಶಿ ಬಿರ್ಗೆ

Rating
No votes yet

Comments