ನಿನ್ನ ಹಾದಿಯ ಕಾದು

ನಿನ್ನ ಹಾದಿಯ ಕಾದು

ನಲ್ಮೆಯ ಗೆಳತಿ ನಿನಗೆ ಪ್ರೇಮಿಗಳ ದಿನದ ಶುಭಾಶಯಗಳು..ಹಾಗೆ ನಿನ್ನ ಬರುವಿಕೆಗಾಗಿ ಈ ನನ್ನ ಪುಟ್ಟ ಬರವಣಿಗೆಗಳು:

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

ನೆತ್ತರಲಿ ಬರೆದ ಪ್ರೇಮದ ಪತ್ರ,ತಲುಪಲಿಲ್ಲ ನಿನ್ನ ಹತ್ರ
ಸಿಗದಿರುವ ಪ್ರೀತಿಯ ಹುಡುಕಿ,ಜಾರುತಿದೆ ಕಂಬನಿ
ಕಬಿನಿ ಜಲಾಶಯದಂತೆ ಉಕ್ಕಿ,
ಜೋಗದ ಜಲಪಾತ ದುಮ್ಮಿಕುವ ರೀತಿಯಲ್ಲಿ
ಧುಮಕುತಿವೆ ನಿನ್ನ ನೆನಪುಗಳು

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

ಧಾರಾಕಾರವಾಗಿ ಹರಿಯುತಿವೆ ನನ್ನ ಕಣ್ಣ ಸಿಂಚನ
ಅದರಲ್ಲಿ ಒಮ್ಮೆ ಮಾಡು ನೀ ಸ್ನಾನ ಅದರಲ್ಲಿ
ನಾ ಕಾಣಬೇಕು ನಿನ್ನ ಹೃದಯ ಸಿರಿಯ ಶುಭ್ರತೆ

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

ನಿನ್ನ ಅಬ್ಬರದ ಅಲೆಯ ಮಾತುಗಳ
ಜೇಂಕರಿಸು ಮತ್ತೊಮ್ಮೆ ನನ್ನ ಕರ್ಣಗಳ ಮೇಲೆ
ನಿಂತಿರುವೆ ನಿನಗಾಗಿ,ಬೇಗ ಬಾರೆ ನನ್ನ ಬಾಲೆ

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

ಪ್ರೀತಿಯ ಅಂಬಾರಿಯ ಪಯಣಿಗನ
ನಲ್ಮೆಯ ಪಯಣಕ್ಕೆ ಸೋಕಿದೆ
ವಿರಹವೆಂಬ ಸುಂಟರಗಾಳಿ.....ಆದರೂ
ಜಗ್ಗದೆ ಮತ್ತೊಮ್ಮೆ ಹೊರಟಿದೇ ಮನವು
ಸರಸವೆಂಬ ತಂಗಾಳಿ ಹುಡುಕಿ

ಕಾದಿರುವೆ ನೊಂದು,ಸೇರು ಬಾ,ಬೇಗ ಬಂದು
ನಾನಿರುವೆ ನಿನಗಾಗಿ ಎಂದೂ

Rating
No votes yet