ನೀನಾರಿಗಾದೆಯೋ ಎಲೆ ಮಾನವ!

ನೀನಾರಿಗಾದೆಯೋ ಎಲೆ ಮಾನವ!

"ಕಷ್ಟಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರುವುದೆ?" ಎಂಬ ಸಾಂತ್ವಾನದ ನುಡಿ ನಾವೆಲ್ಲಾ ಪದೇಪದೇ ಕೇಳಿದ್ದೆವಷ್ಟೆ. ಆದರೆ ಹಾಗೆ ಯಾರಾದರೂ ಮಾತನಾಡಿದರೆ ನನಗೆ ತುಂಬಾ ಕೋಪವೂ ಬ್ರುತ್ತದೆ ಹಾಗೂ ದುಃಖವೂ ಆಗುತ್ತದೆ. ಕಾರಣ ಇಷ್ಟೆ. ಆ ರೂಢಿಮಾತು ಎಳ್ಳಷ್ಟೂ ಸರಿಯಲ್ಲ. ಮರಗಳಿಗೆ ಬಂದಷ್ಟು, ಬರುತ್ತಿರುವಷ್ತು ಕಷ್ಟ ಮನುಷ್ಯನಿಗೆ ಬಂದಿಲ್ಲ. ಅಕಸ್ಮಾತ್ ಬಂದಿದ್ದರೂ ಅದಕ್ಕೆ ಬೇರೆಯವರು ಹೊಣೆಯಲ್ಲ ಮರದ ಕಷ್ಟಕ್ಕೆ ಮಾನವ ಹೊಣೆಯಾಗುವ ಹಾಗೆ. ಇಂಥ ಸಂದರ್ಭದಲ್ಲಿ ಈ ಮೇಲಿನ ನುಡಿಗಟ್ಟು ಯಾರಿಗಾದರೂ ಕೋಪ ಬರಿಸುವುದು ಸಹಜತಾನೆ?
ಮರಕ್ಕೇನಾದರೂ ಮಾತನಾಡಲು ಬಂದಿದ್ದರೆ ಅದು ನಮ್ಮನ್ನು ನೋಡಿ ಏನು ಹೇಳಬಹುದು?
"ನಿನ್ನುಳಿವಿಗಾಗಿಯೇ ನನ್ನುಳಿವಿನ ಅವಶ್ಯಕತೆ ಇದೆ ಎಂದರಿಯದೆ ನನ್ನನ್ನು ನಾಶಪಡಿಸುತ್ತಿರುವ ಎಲೆ ಮಾನವಾ, ನಿನ್ನಿಂದಲೇ ನನಗೆ ಕಷ್ಟಗಳ ಸರಮಾಲೆ ಬಂದಿರುವಾಗ ನಿನ್ನ ಕಷ್ಟಗಳು ಅದಾವ ಲೆಕ್ಕವೋ ಎಲೆ ಮನುಜನೆ. ವಿಶ್ವ ಪರಿಸರ ದಿನವನ್ನಾಚರಿಸಿದರೆ ಸಾಕೆ? ನಿನ್ನ ಹೊರತು ಉಳಿದೆಲ್ಲ ಜೀವಿಗಳೂ ಪರೋಪಕಾರೀ ಜೀವಿಗಳು. ನೀನಾರಿಗಾದೆಯೋ ಎಲೆ ಮಾನವಾ?" ಎನ್ನಬಹುದೆ?
ನೀವೇನು ಹೇಳುವಿರಿ ಸ್ನೇಹಿತರೆ?

Rating
No votes yet

Comments