ನೀವೇನ್ ಹೇಳ್ತಿರಾ?? ತೃಪ್ತಿಯ ಅಳತೆ

ನೀವೇನ್ ಹೇಳ್ತಿರಾ?? ತೃಪ್ತಿಯ ಅಳತೆ

ತೃಪ್ತಿಯ ಅಳತೆ


ಬಸ್ಸಿನಲ್ಲಿ ಕುಳಿತಿದ್ದೆ. ಪಕ್ಕದ ಸೀಟಿನಲ್ಲಿ ತಾಯಿ ಹಾಗು ಚಿಕ್ಕಮಗು ಕುಳಿತ್ತಿದ್ದರು. ಹೊರಗೆ ಇಳಿದು ಹೋಗಿದ್ದ ಆ ಮಗುವಿನ ತಂದೆ, ಬಸ್ಸಿನೊಳಗೆ ಬಂದು ಮಗುವಿಗೆ ತಂದಿದ್ದ ಬಿಸ್ಕತ್ತಿನ ಪೊಟ್ಟಣವನ್ನು ಅದರ ಕೈಗೆ ಕೊಟ್ಟ


"ಅಪ್ಪ ಬಿಸ್ಕತ್ತಿನ ಪಟ್ಣ ನನಗೇನಾ??" ಮಗುವಿನ ಪ್ರಶ್ನೆ.


"ಹೌದು, ಕೂತ್ಕೋ" ಎಂದ ಅಪ್ಪ.


"ಪೂರ್ತಿ ಪಟ್ಟಣ ನನಗೊಬ್ಬನಿಗೇನ??" ಪುನಃ ಮಗು


"ಹೌದಪ್ಪ ಪೂರ್ತಿ ನಿನಗೇನೆ" ಎಂದ ತಂದೆ ನಗುತ್ತ.


ಈಗ ಮಗುವಿನ ಮುಖ ತೃಪ್ತಿ ಸಂತೋಷದಿಂದ ಅರಳಿತು. ಮುಖದಲ್ಲಿ ನೆಮ್ಮದಿ.


ಈಗ ನನಗೊಂದೆ ಪ್ರಶ್ನೆ , ಆ ಮಗು ಅನುಭವಿಸಿದಷ್ಟೆ ಸಂತೋಷ ತೃಪ್ತಿ ದೊಡ್ಡವರಾದ ನಮಗೆ ಬೇಕು ಅನ್ನಿಸಿದಲ್ಲಿ ಅದನ್ನು ಹಣದ ಮೂಲಕ ಅಳೆಯಬೇಕಾದಲ್ಲಿ ಗೆಳೆಯರೆ ಬಹುಷಃ ಎಷ್ಟು ಖರ್ಚಾಗ ಬಹುದು?? ಎಷ್ಟು ಹಣ ಬೇಕಾಗಬಹುದು??...

Rating
No votes yet

Comments