ನೆನೆವುದೆನ್ನ ಮನ ಕರ್ನಾಟಕ ದೇಶವಮ್

ನೆನೆವುದೆನ್ನ ಮನ ಕರ್ನಾಟಕ ದೇಶವಮ್

"ಜನನಿ ಜನ್ಮಭೂಮಿಶ್ಯ ಸ್ವರ್ಗಾದಪಿಗರಿಯಸಿ". ಹಿಂಗ ನನ್ನ ಸಂಸ್ಕ್ರತ ಟೀಚರು ವಾರಕೂಮ್ಮೆಯಾದ್ರೂ ಹೇಳ್ತಿದ್ರು. ೧೦-೧೨ ವರ್ಷದ ಮ್ಯಾಲೆ, ಕೆಲಸದ ಬೆನ್ನ ಹತ್ತಿ ಪರದೇಶ ಸೇರಕೊಂಡ ಮ್ಯಾಲೆ ಆ ವಾಕ್ಯದ ಅರ್ಥ ಪೂರ್ತಿಯಾಗಿ ಮನದಟ್ಟಾಗೆದ. ಥೆಮ್ಸ್ ನದಿ, ನಯಾಗರಾ ಫ಼ಾಲ್ಸ್, ರೊಕಿ ಪರ್ವತ ಶ್ರೇಣಿ ಇವೆಲ್ಲ ಭಾಳ ಛಂದ ಅವ ಆದ್ರ ದಿನದ ಕೊನೆಗೆ ನನ್ನ ಧಾರವಾಡದ ನೆನಪು ಬಂದಬಿಟ್ರ,ಥೇಮ್ಸ್ ನದಿಗಿಂತ ಕೆಲಗೇರಿ ಕೆರಿ ಛಂದ ಅನಸತದ, ರ್‍ಆಕಿ ಪರ್ವತಕ್ಕಿಂತ ವಿದ್ಯಾಗಿರಿ ಗುಡ್ಡ ಅದ್ಭುತವಾಗಿ ಕಾಣತದ.

ಎಂಥಾ ವಿಚಿತ್ರ ಅಲ್ಲಾ, ಕಳಕೊಳ್ಳೋ ತನಕಾ ವಸ್ತುವಿನ ಮೌಲ್ಯಾ ಅರಿವಾಗೊದಿಲ್ಲ!

Rating
No votes yet

Comments