ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 9 - ಪೂರ್ತಿಗೊಳಿಸಿದ 21ನೇ ಹಾಡು!

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 9 - ಪೂರ್ತಿಗೊಳಿಸಿದ 21ನೇ ಹಾಡು!

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.

 

ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.

 

 

ಹಿಂದೊಮ್ಮೆ ಒಂದು ಹಾಡಿನ ಆರಂಭದ ಸಾಲುಗಳನ್ನು ಮಾತ್ರ ಅನುವಾದಿಸಿ ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದನ್ನು ಪೂರ್ತಿ ಗೊಳಿಸಿ ಹಾಡಿದ್ದೇನೆ.

ಕೆಳಗೆ ಅದರ ಪಠ್ಯವಿದೆ. ಹಾಡನ್ನು ಕೇಳಲು ಕೊಂಡಿಯನ್ನೂ ಕೊಟ್ಟಿದ್ದೇನೆ.

 

 

 

ಮೂಲ ಹಾಡು - ಜಿಸ್ ಗಲೀ ಮೇ ತೇರಾ ಘರ್ ನ ಹೋ ಬಾಲಮಾ

ಹಿಂದಿ ಚಲನಚಿತ್ರ - ಕಟೀ ಪತಂಗ್

 

ನನ್ನ ಅನುವಾದ -

 

ಯಾವ ಗಲ್ಲಿಯಲ್ಲಿ ನಿನ್ನ ಮನೆ ಇಲ್ಲವೋ

ಆ ಗಲ್ಲಿಯಲ್ಲಿ ನಾ ಕಾಲಿಡೆ

ಯಾವ ದಾರಿಯು ತಾ ಒಯ್ಯದೋ ನಿನ್ನೆಡೆ

ಆ ದಾರಿಯ ಗೊಡವೆ ನನಗೇತಕೆ

 

ಬಾಳಲಿ ಚೆಂದದ

ತೋಟ ಅನೇಕ ಇವೆ

ಎಲ್ಲೆಡೆ ಚೆಂದದ ಹೂಗಳು

ಸೆಳೆವವು

ಅಲ್ಲಿ ಕಾಲಡಿ ಮುಳ್ಳು ಕೂಡಾ ಇವೆ

ಯಾವ ಹೂ ತೋಟದಿ ನಿನಗೆ

ಮುಳ್ಳು ತಾ ನೆಡುವುದೋ

ಆ ತೋಟದ ಹೂವು ನನಗೇತಕೆ

 

 

ಮೀರಿ ಈ ಲೋಕದ ಎಲ್ಲ ನಿಯಮಾವಳಿ

ಬಾರೆ ನೀ ನಲ್ಲೆಯೇ ಪ್ರೀತಿಯ ತೋರುತ

ಬಾರದೆ ನೀ ನನ್ನೆಡೆ

ನಡೆಯುವೆ ದೂರಕೆ

ಎಲ್ಲಿ ನಿನ ನೆನಪು ತಾ

ನನ್ನನು ಕೊರೆವುದೋ

ಆ ಜಾಗದಿ ಅರೆಕ್ಷಣವು

ನಿಲಲಾರೆನು

 

ಹಾಡನ್ನು ಕೇಳಲು ಕೊಂಡಿ - https://drive.google.com/file/d/1_sgN2HLquWbtWQD_A2czSDtjMiOziYA7/view?usp=drivesdk

 

Rating
Average: 4 (1 vote)