ಪಶ್ಛಾತ್ತಾಪ
ನಿಟ್ಟುಸಿರು
ಮೊಗವ ಸುಟ್ಟಿದೆ
ಬುಡಕಿತ್ತ ಎನ್ನೆದೆ
ಅಲುಗಾಡಿದೆ
ನಿದ್ದೆ ದೂರಾಗಿದೆ
ನಲ್ಲನ ಮೊಗ ಕಾಣದೇ
ಹಗಲಿರುಳು ಅಳು ನಿಲ್ಲದೆ
ಒಡಲು ಒಣಗಿದೆ
ಕಾಲಿಗೆ ಬಿದ್ದ ನಲ್ಲ
-ನನು ನಾ ಹಾಗೆ
ಕಡೆಗಣಿಸಿದೆನಲ್ಲ?
ಗೆಳತಿಯರೇ
ಆವ ಮಂಕು ಬಡಿದು
ಇನಿಯನಲ್ಲಿಂತು
ಸೆಡವು ತೋರಿದೆನೇ?
ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ, ೯೮/೯೨) :
ನಿಃಶ್ವಾಸಾ ವದನಂ ದಹಂತಿ ಹೃದಯಂ ನಿರ್ಮೂಲಮುನ್ಮಥ್ಯತೇ
ನಿದ್ರಾ ನೇತಿ ನ ದೃಶ್ಯತೇ ಪ್ರಿಯಮುಖಂ ರಾತ್ರಿಂದಿವಂ ರುದ್ಯತೇ |
ಅಂಗಂ ಶೋಷಮುಪೈತಿ ಪಾದಪತಿತಃ ಪ್ರೇಯಾಂಸ್ತಥೋಪೇಕ್ಷಿತಃ
ಸಖ್ಯಃ ಕಂ ಗುಣಮಾಕಲಯ್ಯ ದಯಿತೇ ಮಾನಂ ವಯಂ ಕಾರಿತಾಃ ||೯೮||(೯೨)
निःश्वासा वदनं दहन्ति हृदयं निर्मूलमुन्मथ्यते
निद्रा नेति न दृश्यते प्रियमुखं रात्रिन्दिवं रुद्यते ।
अङ्गं शोषमुपैति पादपतितः प्रेयांस्तथोपेक्षितः
सख्यः कं गुणमाकलय्य दयिते मानं वयं कारिताः ॥९८॥(९२)
-ಹಂಸಾನಂದಿ
Rating
Comments
ಉ: ಪಶ್ಛಾತ್ತಾಪ
ತಲೆಬರಹ "ಪಶ್ಚಾತ್ತಾಪ" ಅಂತಾಗಬೇಕಿತ್ತು. ಮೊದಲು ಗಮನಿಸಲಿಲ್ಲ.