ಪ್ರಚಲಿತ:ಗಣಿ-ವರದಿ - ಅಲಿ ಬಾಬ ಮತ್ತು ನೂರಾರು ಕಳ್ಳರು!-
ಈ ಬ್ಲಾಗ್ ಓದುವ ಮುನ್ನ ಒಮ್ಮೆ ಈ ಬ್ಲಾಗ್ ಜೊತೆಗಿನ ಫೋಟೋ ಮೇಲೆ ಕಣ್ಣನು ಹಾಯಿಸಿ. ಆ ಗಣಿ ಮತ್ತದರ ಪರಿಣಾಮ(ಮಣ್ಣಿನ ಧೂಳು!- ಹಗರಣದ ಧೂಳು!)) ಶ್ರೀ ಮಹಾನ್ ಯೆಡಿಯ್ಯುರಪ್ಪ ಅವ್ರ ಮೇಲೆ ಅದೆಂಗಾಗಿದೆ!
ಪ್ರಸ್ತುತ ಲೋಕಾಯುಕ್ತರ ಗಣಿ ಹಗರಣ ಮತ್ತು ನಂತರದ 'ಗಜ ಪ್ರಸವದ ತನಿಖೆ ವರದಿ' ಬಹಿರಂಗವಾಗುತ್ತಿದ್ದಂತೆ, ಮಹಾ ನಿದ್ದೆಯಲ್ಲಿದ್ದು 'ರಾಜಕೀಯೋತ್ಸಾಹವನ್ನೇ' ಕಳೆದುಕೊಂಡು ಗರ ಬಡಿದಂತಿದ್ದವರೆಲ್ಲ ಇದ್ದಕ್ಕಿದ್ದಂತೆ 'ರಣ ಉತ್ಸಾಹ 'ದಿಂದ ಧಿಗ್ಗನೆದ್ದು ಕುಳಿತಿದ್ದಾರೆ. ಗಣಿ ವರದಿ ಬಹಿರಂಗ ಮತ್ತು ನಂತರದ ಯೆಡಿಯೂರಪ್ಪ ಮೊಂಡು ಹಠ -ಬಿ ಜಿ ಪಿ ಕೇಂದ್ರ ನಾಯಕರ ಅಸಹಾಯಕತೆ , ಇದೆಲ್ಲದರ ಮಧ್ಯೆ ನರಿ-ತೋಳ ಗಳಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತಿರುವ ಹಲ ನಾಯಕರು ಒಮ್ಮೆ ಯೆಡಿಯೋರಪ್ಪನ್ನು ಮತ್ತೊಮ್ಮೆ ಈಸ್ವಾರಪ್ಪನ್ನು ಮಗದೊಮ್ಮೆ ಅನಂತುವನ್ನು ಒಲಿಸಿಕೊಳ್ಳಲು -ಓಲೈಸಿಕೊಳ್ಳಲು ಮುಗಿಬಿದ್ದಿದ್ದಾರೆ!
ಇದೆಲ್ಲದರ ಮಧ್ಯೆ ಇದ್ದಕ್ಕಿದ್ದಂತೆ ಕೆಲ ಮುದಿ ನಾಯಕರಿಗೆ ಜೀವನದಲ್ಲಿ ಶತ-ಗತಾಯ ಸಿ ಎಮ್ಮು ಕುರ್ಚಿ ಮೇಲೆ ಅಂಡು ಊರಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎನ್ನೋ 'ದೂರಾಲೋಚನೆ' ಬಂದ್ ಬಿಟ್ಟಿದೆ!!
ಗಣಿ ವರದಿ ಬಹಿರಂಗವಾದ ಮೇಲೆ ಟಿ ವಿ ನೋಡಿ ಪತ್ರಿಕೆ ಓದಿದವರಿಗೆಲ್ಲ ಈ ನಮ್ಮ 'ಘನ ನಾಯಕರ' ಗುಳ್ಳೆ ನರಿತನ ದ ಸ್ವಬಾವ ಮನದಟ್ಟಾಗಿದೆ.
ಅಧಿಕಾರಕ್ಕಾಗಿ ಇವರು ಹಪ-ಹಪಸಿತುತ್ತಿರುವ ರೀತಿ ನೋಡಿದಾಗ ಜಿಗುಪ್ಸೆ ಅಸಹ್ಯ ಮೂಡದೆ ಇರದು. ಸಧ್ಯದ ರಾಜಕೀಯದಲ್ಲಿ ಒಳ್ಳೆಯವರನ್ನ ದುರ್ಬೀನು ಹಾಕೊಂಡು ಹುಡುಕಿದರು ಸಿಗೊಲ್ಲ್ಲವೇನು! ಸ್ವಾತಂತ್ರ್ಯದ ನಂತರದ ಕೇವಲ ೬೫ ವರ್ಷ ಗಳಿಗೆ ಹೀಗಾದರೆ ಮುಂದಿನ ಭಾರತದ ಸ್ಥಿತಿ ಊಹಿಸಿಕೊಳ್ಳಬಹುದು!.
ಈ ಗುಳ್ಳೆ ನರಿ -ತೋಳಗಳನ್ನ ನೋಡಿದಾಗ ನಮ್ಮ ಪೂರ್ವಜರು ಲಕ್ಸ್ಚಾಂತರ ಸಂಖ್ಯೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಧನ-ಮನ-ಪ್ರಾಣ ವ್ಯರ್ಥವಾಯ್ತು ಅನ್ಸೋಲ್ಲವೇ?
ಕೇಂದ್ರದವರು ರಾಜ್ಯದವರನ್ನು ಇವರು ಅವರನ್ನು ಕಳ್ಳ ಎನ್ನುತ್ತಾ ತಾವು ಮಾತ್ರ ಸಾಚ ಅಂತ ಬೊಗಳೆ ಬಿಡುವುದು ನಮಗೆಲ್ಲ ಪುಕ್ಕಟೆ ಮನರಂಜನೆ ಆಗಿದೆ. ಇಷ್ಟಕ್ಕೂ ಇವರೇನು ಮತದಾರರನ್ನ ಮೂರ್ಖರು ಅನ್ಕೊಂಡಿದ್ದಾರೆಯೇ?
ಈ ಮಧ್ಯೆ ನಮಗೆಲ್ಲ 'ಆಶಾಕಿರಣ' ದಂತೆ ಬಂದ ಹಣ್ಣಾ-ಹಜಾರೆ ಮತ್ತು ತಂಡ ಕೇಂದ್ರ ರಾಜ್ಯಗಳಿಗೆ ತಕ್ಕ ಮಟ್ಟಿಗೆ ನೀರಿಳಿಸಿ ಲೋಕಪಾಲ್ ಬಿಲ್ ಗಾಗಿ ಒತಾಯಿಸಿ, ಈಗ ಕೇಂದ್ರ ಸರ್ಕಾರ ಪ್ರಕಟಿಸಿರುವ ಪ್ರಸ್ತಾವಿತ ಮಸೂದೆಯ ಕರಡು ಪ್ರತಿ ಅವರದೇ ಪಕ್ಷದ ಪೊಳ್ಳು ಭರವಸೆಯಂತಿದೆ. ಇದರಿಂದ ರೋಸಿ ಹೋದ ಹಣ್ಣ ಮತ್ತೊಮ್ಮೆ ಉಪ್ವಾಸಕ್ಕಾಗಿ ಸಿದ್ಧರಾಗುತ್ತಿದ್ದಾರೆ, ಆಗಸ್ಟ್ ೧೬ ನಂತರ ಈ ಲೋಅಪಾಲ್ ಬಿಲ್ ಗಾಗಿ ಸಾಮಾನ್ಯ ಜನ ಮತ್ತು ರಾಜಕಾರಣಿಗಳ ನಡುವೆ ಬಹು ದೊಡ ಸಂಘರ್ಷವೆ ಏರ್ಪಡಲಿದೆ.
Rating
Comments
ಉ: ಪ್ರಚಲಿತ:ಗಣಿ-ವರದಿ - ಅಲಿ ಬಾಬ ಮತ್ತು ನೂರಾರು ಕಳ್ಳರು!-
In reply to ಉ: ಪ್ರಚಲಿತ:ಗಣಿ-ವರದಿ - ಅಲಿ ಬಾಬ ಮತ್ತು ನೂರಾರು ಕಳ್ಳರು!- by kavinagaraj
ಉ: ಪ್ರಚಲಿತ:ಗಣಿ-ವರದಿ - ಅಲಿ ಬಾಬ ಮತ್ತು ನೂರಾರು ಕಳ್ಳರು!-