ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ
ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ ..
ಊಸ್... ಅಪ್ಪ ಕಡೆಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಿನಾಮೆ ಕೊಡಲು ಒಪ್ಪಿದರು .ಇದು ವಿರೋದ ಪಕ್ಷ ಅಥವ ಮತ್ಯಾರದೆ ಹೋರಾಟಕ್ಕೆ ಸಿಕ್ಕ ವಿಜಯವಾಗಿರದೆ ಯಡಯೂರಪ್ಪನವರ ಸ್ವಯಂಕೃತ ತಪ್ಪಿನಿಂದಾಗಿದ್ದು ಪೂರ್ಣವಾಗಿ ಮಾಧ್ಯಮದವರಿಗೆ ಸಿಕ್ಕ ವಿಜಯವಾಗಿರುತ್ತದೆ. ಈಗೇನು ಅಷ್ಟೇನ ? ಆಗಿರುವ ತಪ್ಪಿಗೆ ಗಣಿ ದಣಿಗಳಿಂದ , ಮುಖ್ಯಮಂತ್ರಿಗಳಿಂದ ರಾಜ್ಯದ ಅದಾಯಕ್ಕೆ ಆಗಿರುವ ಮೋಸಕ್ಕೆ ಪರಿಹಾರ ಬೇಕು ಅಂತ ಯಾರು ಕೇಳಲ್ಲ ,
ಕಾಂಗ್ರೆಸಿಗರು ತಮ್ಮವರ ಹೆಸರು ಇರುವದರಿಂದ ಮತ್ತೆ ಆ ವಿಷಯ ಎತ್ತರು, ಜನತಾದಳವು ಅಷ್ಟೆ ಕುಮಾರಸ್ವಾಮಿಯವರ ಹೆಸರು ಇದೆ ಅಂತ ಸುಮ್ಮನಾಗುತ್ತರೆ, ಭಾಜಪಕ್ಕೆ ಹೇಗೊ ಸರಿ ಐದು ವರುಷಗಳ ಆಳ್ವಿಕೆ ಮುಗಿಸಬೇಕು, ಇನ್ನು ಸಂತೋಷ ಹೆಗ್ಡೆಯವರು ಮುಂದಿನವಾರ ರಿಟೈರ್ಡ್ , ಅಲ್ಲಿಗೆ ಅದು ಅಷ್ಟೆ !. ಎಲ್ಲರಿಗು ಬೇಕಾಗಿದ್ದಿದ್ದು ಯಡಿಯೂರಪ್ಪನವರ ರಾಜಿನಾಮೆ ಅದು ಸಿಕ್ಕಾಯ್ತು,
ಇನ್ನು ರಾಜ್ಯದ ಜನರ ಹಿತ ? ಅದು ಯಾರಿಗು ಬೇಕಿಲ್ಲದ ವಿಷಯ.
ಕಡೆಯದಾಗಿ : ಯಡ್ಡಿಯವರು ರಾಜಿನಾಮೆ ಕೊಡಲು ಒಪ್ಪಿದ್ದಾರಷ್ಟೆ ಕೊಟ್ಟಿಲ್ಲ !!!!! , ಅಮವಾಸ್ಯೆ ಮುಗಿದ ಶ್ರಾವಣ ಬಂದಲ್ಲಿ ಮತ್ತೆ ಅವರ ನಕ್ಷತ್ರ ಬದಲಾಗಿ ನಾನು ರಾಜಿನಾಮೆ ಕೊಡುತ್ತೀನಿ ಅಂತ ಹೇಳಿರಲಿಲ್ಲ ಎಲ್ಲ ಮಾಧ್ಯಮಗಳ ಸುಳ್ಳುಸುದ್ದಿ ಅಂತ ಹೇಳಿ ಶ್ರೀಮಾನ್ ಆಸುರವರಿಗೆ ಮತ್ತೊಂದು ಪದ್ಯಬರೆಯಲು ಅವಕಾಶಕೊಟ್ಟಲ್ಲಿ !!!!!
Comments
ಉ: ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ
ಉ: ಪ್ರಜಾಪ್ರಭುತ್ವ-೪ : ಉಸ್ ಅಪ್ಪ ಕಡೆಗೂ ..ರಾಜಿನಾಮೆ ಕೊಡಲು ಒಪ್ಪಿದರಪ್ಪ