ಪ್ರೀತಿ ಮೇಲು - ಮಾವಿನ ಹಣ್ಣಿನಲ್ಲೂ ಪ್ರೀತಿ

ಪ್ರೀತಿ ಮೇಲು - ಮಾವಿನ ಹಣ್ಣಿನಲ್ಲೂ ಪ್ರೀತಿ

ಜೀವನದಲ್ಲಿ ನಾವು ಎಷ್ಟೋ ದುಃಖಕರ ಸನ್ನಿವೇಶಗಳನ್ನು ಸಂದಿಸುತ್ತೇವೆ ಸಣ್ಣ ಪುಟ್ಟವು. ಅದೇ ಕಾರಣದಿಂದ ಸಣ್ಣ ಪುಟ್ಟ ಸಂತೋಷಗಳೂ ಆಗುವುದಿದೆ . ಅಂತಹ ಒಂದು ಸನ್ನಿವೇಷ ಇತ್ತೀಚಿಗೆ ನಡೆಯಿತು. ನಾನು ಕೆಲವು ವೆಯುಕ್ತಿಕ ಕಾರಣಗಳಿಂದ ಚಿಂತಿತನಾಗಿದ್ದೆ ಅಂದೇ ಮುಂಬೈಗೆ ಹಿಂತಿರುಗುವವನೂ ಇದ್ದೆ. ಎರಡೂ ಸೇರಿ ಭಾರೀ ಯೋಚನೆಯಲ್ಲಿ ಮುಳುಗಿದ್ದೆ. ಆಟೋ ದ ಬದಿಯಲ್ಲಿ ತಲೆ ಒರಗಿರಿ ಯೋಚಿಸುದ್ದಿದ್ದೆ, ಇದನ್ನು ನೋಡಿ ರಿಕ್ಷಾ ಚಾಲಕ. "ಎನ್ನ ಸರ್ ಓಡಂಬು ಮುಡಿಯಿಲೆಯ?" -(ಏನು ಸರ್ ಮೈಗೆ ಹುಶಾರಿಲ್ಲವ?) ಎದು ಕೇಳಿದ. ಹಾಗೇನಿಲ್ಲ ಎಂದೆ ನಾನು, ಹಂಗಾದರೆ ಏನೋ ಸಮಸ್ಯೆಯಲ್ಲಿದ್ದಿರ  ಅಂತ ಅಂದ. ಸುಮ್ನೆ ನಕ್ಕೆ. ಸ್ವಲ್ಪ ಹೊತ್ತಿನ ಮೌನ ಮುರಿದು "ಸಮಸ್ನ್ಯೇ ಇಲ್ಲದವರು ಯಾರಿದ್ದಾರೆ?" ಅಂದೆ. ಸುಮ್ನೆ moody ಆಗಿರುವುದು ಬೇಡ ಅಂತ ಚಾಲಕನ ಜೊತೆ ಮಾತಿಗಿಳಿದೆ. ನಿಮಗೆಷ್ಟು ಮಕ್ಕಳು ಅಂತ ಕೇಳಿದೆ ಅದಕ್ಕವನು ಮೂರು, ಒಬ್ಬ ಮಗ ಇಬ್ಬರು ಹೆಣ್ಣು ಮಕ್ಕಳು ಅಂದ. ಮಕ್ಕಳೇನು ಮಾಡುತ್ತಾರೆ ಎನ್ನುವ ನನ್ನ ಪ್ರಶ್ನೆಗೆ. ಮಗ ಕಾಲೇಜ್ ಓದುತ್ತಿದ್ದಾನೆ ಅಂದ ಮತ್ತೆ ಸ್ವಲ್ಪ ಹೊತ್ತಿನ ಮೌನದ ಬಳಿಕ ಮಗಳೊಬ್ಬಳು ಅವಳಿಷ್ಟಕ್ಕೆ ಹೋದಳು ಅಂದ. ನನಗೆ ಅರ್ಥವಾಗಲಿಲ್ಲ ಹೇಳಿದನ್ನು ಸ್ಪಷ್ಟ ಪಡಿಸುವಂತೆ ಕೇಳಿಕೊಂಡೆ. ಅದಕ್ಕವರು ಮಗಳು ಮನೆ ಬಿಟ್ಟು ಹೋದಳು ಇಷ್ಟವಾದವನ ಜೊತೆ ಅಂದರು. ನನಗೆ ಏನು ಉತ್ತರ ನೀಡಬೇಕು ತಿಳಿಯಲಿಲ್ಲ. ಸ್ವಲ್ಪ ಕಳೆದು, ಒಳ್ಳೆದಾಯಿತು ಬಿಡಿ ನಿಮಗೆ ಖರ್ಚು ಇಲ್ಲದಾಯಿತು ಅಂದೆ.. ಬೇರೇನೂ ಹೇಳಲಿ ಅಂತ ಯೋಚನೆ ಮಾಡುತ್ತಿದ್ದೆ, ನಾನು ಹೇಳಿದ್ದು ಅವರಿಗೆ ಬೇಸರ ತರಿಸ್ಸಿದ್ದಿರಬಹುದು ಅಂತ ಒಂದು ವಾಕ್ಯವನ್ನು ಸೇರಿಸಿದೆ "ನಾನು ಒಬ್ಬ ತಂಗಿಯನ್ನು ಮಾಡುವೆ ಮಾಡಿಕೊಡಿಸಲು ದುಡ್ಡಿಲ್ಲದೆ ಕಷ್ಟಪದುತ್ತಿದ್ದೇನೆ" ಎಂದೆ. ಅದಕ್ಕವರು  "ಇರಬಹುದು ಆದರೆ ಅದರಿಂದಾದ ದುಖ ಅದಕ್ಕಿಂತಲೂ ದೊಡ್ಡದು", ಅಂದರು. "ಮತ್ತೆ ಕೇಸು ಕೋರ್ಟು ಅಂತ .... " ಹೇಳುವುದಕ್ಕೆ ಅವರಿಗೆ ಇನ್ನೂ ಇತ್ತು ಆದರೆ ಅಲ್ಲಿಗೆ ನಿಲ್ಲಿಸಿದರು. ಇನ್ನೇನು ಮಾತನಾಡಲಿ ಅಂತ ಯೋಚಿಸುತ್ತಲೇ "ಎಷ್ಟು ವಯಸ್ಸು ಅವಳಿಗೆ?" ಎಂದು ಕೇಳಿದೆ. "ಹೋದಾಗ 17 ಅಂದರು ತುಂಬಾ ಕ್ಷೀಣ ಸ್ವರದಲ್ಲಿ. ಮುಂದೆ ಒಂದೇ ಒಂದು ಮಾತು ನನ್ನಿಂದ ಬರಲಿಲ್ಲ. ಪ್ರತೀ ಬಾರಿ ಹೆಣ್ಣುಮಕ್ಕಳು ಸಣ್ಣವಯಸ್ಸಿನಲ್ಲೇ ಓಡಿ ಹೋದ ವಾರ್ತೆಗಳನ್ನು ಓದುವಾಗ ಅವರ ಹೆತ್ತವರನ್ನು ಬಯ್ಯುತ್ತಿದೆ. ಮಕ್ಕಳಿಗೆ ಸರಿಯಾದ ಬುದ್ದಿ ಹೇಳಿಕೊಡದ ಕಾರಣಕ್ಕೆ. ಈವಾಗ ತಪ್ಪು ಆ ಹುಡುಗಿಯದೋ, ಈ ತಂದೆಯದೋ ಅಂತ confusion ಆಗಿದ್ದೆ. ಬೇರೇನನ್ನು ಕೇಳುವುದು ಬೇಡ ಅಂದುಕೊಂಡೆ. ಅಷ್ಟರಲ್ಲಿ ಸಿಗ್ನಲ್ ಒಂದರಲ್ಲಿ ರಿಕ್ಷಾ ನಿಂತಿತ್ತು. ಏನೋ ಯೋಚನೆ ಮಾಡುತ್ತ ತನ್ನ ಪಾಕೆಟ್ ಗೆ ಕೈ ಹಾಕಿ ಇರುವ ದುಡ್ಡನ್ನು ಎಣಿಸ ಆರಂಬಿಸಿದ. ೩೦ ರುಪಾಯಿ ನನ್ನತ್ತ ತೋರಿಸಿ "ತಗೊಳ್ಳಿ ಸರ್ ನಿಮ್ಮ ಚಿಲ್ಲರೆ" ಅಂದ. ಸವಾರಿ ಯನ್ನೂ ೨೦೦ ರೂಪಾಯಿಗಳಿಗೆ ಏರುವ ಮೊದಲೇ ಮಾತುಮಾಡಲಾಗಿತ್ತು. ಅದರಂತೆ ನಾನು ನಾನು ೨೦೦ ಕೊಡುವುದನ್ನು ಮೊದಲ್ಕಂಡು ೩೦ ತೋರಿಸಿದ್ದ. ಆಮೇಲೆ ಕೊಡಿ ಅಂದೆ. ಕತ್ತಲೆಯಲ್ಲಿ purse ನಿಂದ ದುಡ್ಡು ತೆಗೆಯುವನ್ತಿರಲಿಲ್ಲ ನಾನು. ರಿಕ್ಷಾ ಚಾಲಕನ ಮಾತುಗಳು ಇನ್ನೂ ನನ್ನ ಮನಸ್ಸಿಂದ ಹೋಗಿರಲಿಲ್ಲ. ಆ ಯೋಚನೆಯಲ್ಲಿ ನನ್ನ ಸಮಸ್ಯೆಯನ್ನೂ ನಾನು ಮರೆತಿದ್ದೆ.  ಅಷ್ಟರಲ್ಲಿ ರೈಲ್ವೆ ಸ್ಟೇಷನ್ ಬಂದಿತ್ತು. ರಿಕ್ಷಾ ದಿಂದ ಹೊರಗಿಳಿದು ೨೦೦ ರುಪಾಯಿ ಕೊಟ್ಟೆ. ೩೦ ರುಪಾಯಿ ಬಾಕಿ ನೀಡಿದ. ನಾನು "ಬಾಕಿ ಬೇಡ - ಆ ೩೦ ರೂಪಾಯಿಗೆ ಮಾವಿನ ಹಣ್ಣು ಕೊಂಡು ಹೋಗಿ ಮನೆಗೆ, ಯಾವಗಳೆಲ್ಲ ನನ್ನ ತಂದೆ ಮನೆಗೆ ಏನನ್ನಾದರು ವಿಶೇಷವಾಗಿ ತರುತ್ತಿದ್ದರೋ ಅವಾಗಳೆಲ್ಲ ಅವರ ಮೇಲೆ ಪ್ರೀತಿ ಹೆಚುತಿತ್ತು. ಅದರಿಂದಲೇ ಇನ್ಯಾರಿಗಿಂತಲೂ ಹೆಚ್ಹಾಗಿ ಅವರನ್ನು ನಾನು ಇಷ್ಟಪಡುತ್ತೇನೆ. ನಿಮ್ಮ ಮಕ್ಕಳೂ ಇಷ್ಟಪಡುತ್ತಾರೆ" ಎಂದೆ. ಆವಾಗ ಅವರ ಮುಖದಲ್ಲಿ ನಾ ನೋಡಿದ ಸಂತೋಷ ಅಷ್ಟಿಷ್ಟಲ್ಲ. ಅವರ ಕಣ್ಣು ತುಂಬುವಷ್ಟು ನಗೆ ಬೀರಿದರು. ಆ ಸಂತೋಷದೊಂದಿಗೆ ಮುಂಬೈಗೆ ತೆರಳಿದೆ.

Rating
No votes yet

Comments