ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ.


(೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದಿಂದ ಸಂಪಾದಿಸಿಕೊಳ್ಳುವ ’ಸದೃಢ ಆರೋಗ್ಯ’ವೇ ನಿಜವಾದ ರೋಗ!


(೩೮) ಬದುಕು ಸುಂದರ. ಆದರೆ ಷರತ್ತುಗಳು ಅನ್ವಯ. ಇರುವುದೊಂದೇ ಷರತ್ತುಃ ಅದನ್ನು ಸುಂದರವಾಗಿಸಲು ಸೌಂದರ್ಯ ಮಾಪಕವನ್ನು ಬಳಸಲೇಬೇಕಷ್ಟೇ.


(೩೯) ಪ್ರೀತಿಸುವುದೆಂದರೆ ಒಬ್ಬರನ್ನು ಇಷ್ಟಪಡುತ್ತ, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಅವರೊಬ್ಬರೇ ನೀಡುತ್ತಾರೆಂದು ನಿರೀಕ್ಷಿಸುವುದು.


ವಿಚ್ಛೇದನವೆಂದರೆ ಅವರು ನಿಮಗೇನಾಗಬೇಕು ಎಂದು ನೀವು ನಿರೀಕ್ಷಿಸಿದ್ದರೋ ಅದು ನೀವೇ ಆಗಿಬಿಡುವ ಮುನ್ನ, ಆ ನಿರೀಕ್ಷೆಯನ್ನೇ ಕೈಬಿಡುವುದು.


ಪ್ರೀತಿಯೆಂಬ ಯೋಜನೆಯ ಅಪೂರ್ಣತೆಯ ದೃಢೀಕರಣವನ್ನೇ ವಿಚ್ಛೇದನವೆನ್ನುವುದು.


ಪ್ರೀತಿಯನ್ನು ಅಚಾನಕ್ ಆಗಿ ಕೊನೆಗಾಣಿಸಬೇಕೆಂಬ ಅಶಾಯಕ ಪ್ರಯತ್ನವೇ ಮದುವೆ.


ಪ್ರೀತಿಯ ವಿಚ್ಛೇದನವೇ ಮದುವೆ.


ಪ್ರೀತಿಯಲ್ಲಿ ಮತ್ತೊಮ್ಮೆ ತೊಡಗಿಸಿಕೊಳ್ಳುವ ಅವಕಾಶದ ಆಶಾವಾದಿತನವೇ ವಿಚ್ಛೇದನ. 


(೪೦) ತಯಾರಿಕೆಯ ಹಂತದ ಊನಗಳನ್ನೊಳಗೊಂಡ ಸಾಮಗ್ರಿಯನ್ನು ಗಂಡಸು ಎನ್ನುತ್ತೇವೆ.


ಅದರ ಸುತ್ತಲಿನ ಸುಂದರ ಹೊದಿಕೆಯನ್ನು ಹೆಣ್ಣೆನ್ನುತ್ತೇವೆ!//

Rating
No votes yet

Comments