ಬರೀ ಒಂದಿಬ್ಬರು ಸ್ಟಾರ್‌ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿದೆ ಕ್ರಿಕೆಟ್; ಅಲ್ಲವೆ?

ಬರೀ ಒಂದಿಬ್ಬರು ಸ್ಟಾರ್‌ಗಳನ್ನಷ್ಟೆ ಅಲ್ಲ, ಭಾರತವನ್ನೂ ಬೆಳೆಸಬೇಕಿದೆ ಕ್ರಿಕೆಟ್; ಅಲ್ಲವೆ?

ಬೆಂಗಳೂರಿನಲ್ಲಿ ಪ್ರತಿಸಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಾಗಲೂ ಟಿಕೆಟ್ ನೂಕುನುಗ್ಗಲನ್ನು ತಪ್ಪಿಸಲು ಲಾಠಿಛಾರ್ಜ್ ಆಗುವುದು ಸಾಮಾನ್ಯ ಆಗಿಬಿಟ್ಟಿದೆ. ನೂರಾರು ಕೋಟಿ ಬೆಲೆಬಾಳುವ, ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಮ್ ಪೂರ್ಣಪ್ರಮಾಣದಲ್ಲಿ ಉಪಯೋಗಕ್ಕೆ ಬರುವುದೆ ಎರಡು-ಮೂರು ವರ್ಷಗಳಿಗೊಮ್ಮೆ. ಆಗಾಗ ಮತ್ತದೆ ಐದು ದಿನಗಳ ಬೋರಿಂಗ್ ಟೆಸ್ಟ್ ಕ್ರಿಕೆಟ್ - ರಣಜಿ ಪಂದ್ಯಗಳು ನಡೆಯುತ್ತವೇನೊ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ BCCI ನ ಮಡ್ಡ ತಲೆಗಳಿಗೆ ಭಾರತದ ಒಳಗೆ ಏಕದಿನದ ಡೊಮೆಸ್ಟಿಕ್ ಆಟ ನಡೆಸಬೇಕು ಅಂತಲೆ ಗೊತ್ತಾಗುವುದಿಲ್ಲ.

ಆದರೆ ಕಳೆದ ಆರೇಳು ತಿಂಗಳಿನಿಂದ ಪರಿಸ್ಥಿತಿ ಬದಲಾಗುತ್ತಿದೆ. ಕೃಪೆ, 20/20 ಕ್ರಿಕೆಟ್. ಪಾಶ್ಚಾತ್ಯ ದೇಶಗಳಲ್ಲಿ ಕೆಲವು ಶ್ರೀಮಂತರು,

ಕೆಲವು ಕಾರ್ಪೊರೇಷನ್‌ಗಳು ಒಳ್ಳೆಯ ಕ್ರೀಡಾತಂಡಗಳ ಮಾಲೀಕತ್ವ ಹೊಂದಿದ್ದು, ಸ್ಥಳೀಯ ಪ್ರೊಫೆಷನಲ್ ಆಟಗಳು ನಡೆಯುತ್ತಿರುತ್ತವೆ. ಯಾರೂ ಇಂಟರ್‍ನ್ಯಾಷನಲ್ ಪಂದ್ಯಗಳೇ ಆಗಬೇಕು ಎಂದು ಕಾಯ್ದುಕೊಂಡು ಕುಳಿತಿರುವುದಿಲ್ಲ. ನಾನಿರುವ ಬೇ ಏರಿಯಾದಲ್ಲಿಯೆ ಸ್ಯಾನ್ ಫ್ರಾನ್ಸಿಸ್ಕೊ ಜೈಂಟ್ಶ್, ಓಕ್‍ಲ್ಯಾಂಡ್ A's ಅಮೆರಿಕದ ಎರಡು ಪ್ರಸಿದ್ಧ ಬೇಸ್‍ಬಾಲ್ ತಂಡಗಳಾಗಿದ್ದರೆ, ಇದೇ ನಗರಗಳ 49'rs ಮತ್ತು ರೈಡರ್ಸ್ ಅತ್ಯುತ್ತಮ ಫುಟ್‍ಬಾಲ್ ತಂಡಗಳು. ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಸ್ನೋ ಬೀಳುವುದಿಲ್ಲ. ಆದರೂ ಈ ನಗರದ ಐಸ್‍ಹಾಕಿ ತಂಡ ಷಾರ್ಕ್ಸ್ ಒಂದಿಡೀ ಸೀಸನ್ ಇಲ್ಲಿಯ HP ಪೆವಿಲಿಯನ್‍ನಲ್ಲಿ ಆಡುತ್ತಿರುತ್ತದೆ. ಇದೇ ತರಹ ಭಾರತದಲ್ಲೂ ಒಂದೆರಡು ಒಳ್ಳೆಯ ಖಾಸಗಿ ಫುಟ್‍ಬಾಲ್/ಸಾಕ್ಕರ್ ಟೀಮ್‌ಗಳಿವೆ; ಮೋಹನ್ ಬಾಗನ್, ಮಹಮ್ಮಡನ್, ಬೆಂಗಾಲ್ ಟೈಗರ್ಸ್ ಇತ್ಯಾದಿ. ತಡವಾಗಿಯಾದರೂ ಈಗ ಅದು ಕ್ರಿಕೆಟ್‍ನಲ್ಲೂ ಆಗುತ್ತಿದೆ. ಇದು ಭಾರತದೊಳಗಿನ ಆರ್ಥಿಕ ಅಭಿವೃದ್ಧಿಗೂ ಸಹಕಾರಿ.

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಇವೆಲ್ಲವುಗಳ ಹಿನ್ನೆಲೆಯಲ್ಲಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/01/blog-post_24.html

ಲೇಖನದ ವಿಡಿಯೊ ಪ್ರಸ್ತುತಿ
Rating
No votes yet