ಬಿ.ಎಂ.ಟಿ.ಸಿ : ಕಥೆ -ವ್ಯಥೆ

ಬಿ.ಎಂ.ಟಿ.ಸಿ : ಕಥೆ -ವ್ಯಥೆ

ಮೇಲಿನ ಶೀರ್ಷಿಕೆ ಓದುತ್ತಿದ್ದಂತೆ ತಮ್ಮೆಲ್ಲರ ಮನದಲ್ಲಿ ಬಿ ಎಂ ಟಿ ಸಿ ಬಗ್ಗೆ  ಏನೇನೆಲ್ಲ  ಭಾವನೆಗಳು ಬರಬಹುದು ನನಗೆ ಗೊತ್ತು..

ಬ್ರುಹುತ್ ಬೆಂಗಳೂರಿನ ಮಹಾನಗರ  ಸಾರಿಗೆ ಸಂಸ್ಥೆಯ  ಬಗ್ಗೆ ಅದೆಷ್ಟು ಒಳ್ಳೆ ಭಾವನೆ ಇದೆಯೋ ಅದರ ಮೂರು ಪಟ್ಟು ಕಹಿ ಅನುಭವಗಳು  ತಮ್ಮೆಲ್ಲರಿಗೂ ಆಗಿರಲು ಸಾಧ್ಯ..
 

ಅತಿ ವೇಗದಲ್ಲಿ ಬೆಳೆಯುತ್ತಿರುವ  ಮಹಾನಗರದ  ಜನ ಸಂಖ್ಯೆಗಾಗಿ , ಅವರಿಗೆ ಗುಣ ಮಟ್ಟದ  ಪ್ರಯಾಣಿಕ ಸ್ನೇಹಿ, ಕಡಿಮೆ ದರದ ಎಂದೆಲ್ಲ  ಏನೇನೋ ಭರಪೂರ ಭರವಸೆಗಳನ್ನ ಹರಿಸಿ ಕೊಂಡುಕೊಂಡ ಆ ಬಸ್ಸುಗಳು, ಮತ್ತು ಅದನ್ನ ಓಡಿಸುವ ಚಾಲಕರು,  ಮತ್ತು ನಿರ್ವಹಿಸುವ ನಿರ್ವಾಹಕರು  ಅದೆಷ್ಟು ಪ್ರಯಾಣಿಕ ಸ್ನೇಹಿ ಅಂತ , ಈ ಬಸ್ಸುಗಳಲ್ಲಿ ಓಡಾಡುವ  ಜನರಿಗೆಲ್ಲ ಗೊತ್ತಿರುತ್ತೆ!

ನಂಬಿ! ನಿಲ್ದಾಣದಿಂದ  ಹೊರಡುವ ಪ್ರತಿಯೊಂದು ಬಸ್ಸಿಗೂ ವೇಳಾ ಪಟ್ಟಿಯಿದೆ,  ಆದ್ರೆ ಅದನ್ನು ಅದೆಷ್ಟು ಸರಿಯಾಗಿ ಚಾಲಕರು, ನಿಲ್ದಾಣ ಸಿಬ್ಬಂಧಿಗಳು ಪಾಲನೆ ಮಾಡುತಾರೆ ಅನ್ನೋದನ್ನ ನಾವು ನೀವೆಲ್ಲ ಕಣ್ಣಾರೆ ಕಂಡಿದ್ದೇವೆ.

ಇನ್ನು ವಾರದ ಕೊನೆಯ ದಿನಗಳಲ್ಲಿ ಅಂದರೆ  ಶನಿವಾರ ಭಾನುವಾರ, ಮೆಜೆಸ್ಟಿಕ್ಗೆ ಎಲ್ಲ ಕಡೆಯಿಂದ ಬರುವ, ಹೊರಡುವ ಬಸ್ಸುಗಳೆಲ್ಲ ರಸ್ತೆ ಮಧ್ಯೆ ನಿಂತುಕೊಂಡು(ಕೆಲವೊಮ್ಮೆ ಘಂಟೆಗಟ್ಟಲೆ)ಹಿಂದೆ ಮುಂದಿರು ವಾಹನ ಓಡಿಸುವವರ ತಾಳ್ಮೆಯನ್ನ  ವಿಪರೀತ ಪರೀಕ್ಷಿಸುವುದು ಉಂಟು..

ಇನ್ನು ನಿಲ್ದಾಣದಲ್ಲಿಯಂತೂ  ಒಳಬರುವಾಗ  ಬಸ್ಸುಗಳು ಬರುವ ಸ್ಪೀಡ್ ಮತ್ತು ಅದನ್ನ ಓಡಿಸುವ ಚಾಲಕರನ್ನ ಕಂಡಾಗ , ಪ್ರತಿಯೊಬ್ಬರ ಮನದಲ್ಲಿ ಈ ಬಿ ಎಂ ಟಿ ಸಿ  ಬಸ್ಸುಗಳು, ಯಮನ ವಾಹನ , ಮತ್ತು ಚಾಲಕ ಸಾಕ್ಷಾತ್  ಯಮನ ತರವೇ  ಕಂಡರೆ ಆಶ್ಚರ್ಯವೇನಿಲ್ಲ!

 

ಸಿಬ್ಬಂಧಿಗಳ  ಅದರಲ್ಲೂ ಚಾಲಕ, ನಿರ್ವಾಹಕರ  ಬಸ್ಸಿನೊಳಗೆ ಮತ್ತು ಹೊರಗಡೆ ವರ್ತನೆ  ನೋಡಿದವರಿಗೆ, ಜಗತ್ತಿನಲ್ಲಿ ಬೇರಾರಿಗೂ ಇರದ ಸಮಸ್ಯೆಗಳು ಈ ಚಾಲಕ , ನಿರ್ವಾಹಕರಿಗೆ ಇರಬಹುದ ಎಂದೆನ್ನುವ ಸಂಶಯ ಬಾರದಿರದು...

ಕೇಂದ್ರದ ನೆರವಿನಿಂದ , ವಿಶ್ವ ಬ್ಯಾಂಕ್  ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಣ ತಂದು , ಕೊಂಡುಕೊಂಡ  ಐಶಾರಾಮಿ! ಸಾಮಾನ್ಯ ಸಾರ್ವಜನಿಕರಿಗೆ ನಯಾ ಪೈಸೆ ಉಪಯೋಗವಿಲ್ಲದ ಆ  ವೋಲ್ವೋ, ಮಾತು ಇನ್ನಿತರ ಬಸ್ಸುಗಳ ಕಡೆಗೊಮ್ಮೆ ಹಾಗೆ ಸುಮ್ಮನೆ ಕಣ್ಣು ಹಾಯಿಸಿ, ಹಿಂದೆ ಮುಂದೆ ಪಕ್ಕದಲ್ಲಿ ಎಲ್ಲೆಲ್ಲ  ಅದರ ಚರ್ಮ ಕಿತ್ತು ಹೋಗಿ, ಬಣ್ಣ ಕಳೆದುಕೊಂಡು, ಸರಿಯಾದ ಆರೈಕೆ ಇಲ್ಲದೆ ಅವುಗಳಿಗೆ ಉಂಟಾಗಿರುವ  ಸ್ಥಿತಿಯನ್ನ  ನೋಡಿದಾಗ, ಈ ಬಸ್ಸುಗಳು ನಮಗೆ ಬೇಕಿದ್ದವೆ ಎನ್ನುವ ಪ್ರಶ್ನೆ ಮೂಡದಿರದು..

 

ಈ ವೋಲ್ವೋ ಬಸ್ಸುಗಳು ಕೆಲವೊಂದು ಮಾರ್ಗಗಳಲ್ಲಿ ಮಾತ್ರ ತುಂಬಿ ತುಳುಕಿ ಓಡಾಡುತ್ತವೆ( ಹೆಚ್ಚಾಗಿ ಮಾಹಿತಿ ತಂತ್ರಜ್ಞಾನ  ಕಂಪನಿ  ಏರಿಯ ಗಳಲ್ಲಿ, ವಿಮಾನ ನಿಲ್ದಾಣ ರಸ್ತೆಯಲ್ಲಿ) ಇನ್ನು ಬಾಕಿ ಎಲ್ಲ ಕದೆರ್ ಅವು  ಒಬ್ಬರೋ ಇಬ್ಬರನ್ನೂ ಹತ್ತಿಸಿಕೊಂಡು , 'ಅದ್ಯಾವ ದಂಡಕ್ಕೆ  ಈ ಧಿಮಾಕು' ಅನ್ನೋ ತರಾ ಓಡಾಡುತ್ತಿರುತ್ತವೆ.

ನೀವು ಗಮನಿಸಿದ್ದೀರಾ? ವೋಲ್ವೋ ಬಸ್ಸಿನ ಚಾಲಕ , ನಿರ್ವಾಹಕರು ಅದೆಷ್ಟು ನಯ ವಿನಯದಿಂದ  ವರ್ತಿಸುತಾರೆ!  (ಕಾರಣ ಅಲ್ಲಿ ಹೆಚ್ಚು ಹಣ ತೆತ್ತು ಹೋಗು ಪ್ರಯಾಣಿಕರು ಬರ್ತಾರೆ!)

ಅದೇ ವರ್ತನೆಯನ್ನ  ಇನ್ನುಳಿದ ಸಾಮಾನ್ಯ ಬಸ್ಸಿನ ಚಾಲಕ ನಿರ್ವಾಹಕರು ಏಕೆ ತೋರುವುದಿಲ್ಲ? ಅಂದರೆ  ಅದ್ರಲ್ಲಿ ಪ್ರಯಾನಿಸೋ ಜನ, ಸಾಮಾನಿ ಜನ ಅಂತಾನ ?
ಬೆಳ್ ಬೆಳಗ್ಗೆ  ಯಾವ್ದಾರ  ಚಾಲಕ ಕಂ ನಿರ್ವಾಹಕ, ಅಥವಾ ಚಾಲಕ, ನಿರ್ವಾಹಕರೂ ಇರುವ ಬಸ್ಸಿಗೆ ಹತ್ತಿ 'ಪಾಸ್' ಎಂದೆಲಿ, ಆಗ ಚಾಲಕ, ನಿರ್ವಾಹಕರ  ದೃಷ್ಟಿ  ಅದೆಷ್ಟು ಘನ ಘೋರವಾಗಿ ನಮ್ಮ ಮೇಲೆ ಬೀಳುತ್ತಿರುತ್ತೆ ಅಂದ್ರೆ,

  ನಾವ್ ಅದೇನ್ ಪಾಪ ಮಾಡಿ ಈ 'ಪಾಸ್' ಕೊಂಡಕೊಂಡ್ವಿ  ಅನ್ನೋದ್ ನಿಮ್ಮ ಮನಸ್ಸಲ್ ಬರದಿದ್ದರೆ ನೋಡಿ!...

ಪಾಸ್ ಇಲ್ದೆ ಇರ್ರೋರು  ಬಸ್ ಹತ್ತಿದ್ರು ಕೊಡೋದು  ಅದೇ ಹಣ, ನಾವ್ ಪಾಸು ಕೊಂಡರೂ ಕೊಡೋದು ಅದೇ ಹಣ ತಾನೇ ಅದೇಕೆ ಈ ತರದ  ಭಿನ್ನಭಾವ ? ಪಾಸು ಕೊಳ್ಳೋರು ಮೊದ್ಲೇ ಕೊಟ್ಟಿರ್ತಾರೆ, ಇಲ್ದೆ ಇರ್ರೋರ್ ಬಸ್ಸ ಹತ್ತಿದ ಮೇಲೆ ಕೊಡ್ತಾರೆ.

ಇಸ್ಟೆಲ್ಲಾ  ಚಾಲಕ ನಿರ್ವಾಹಕರ ಬಗ್ಗೆ  ಬರೆದಾಗ  ಎಲ್ರೂ ಹೀಗೆನಾ ? ಖಂಡಿತ ಇಲ್ಲ.....ನಾವು ನೀವು ಅದೆಸ್ಟೋ ಜನ ಒಳ್ಳೆಯ ಚಾಲಕ ನಿರ್ವಾಹಕರನ್ನ ನೋಡಿದ್ದಿವಿ. ನಯ ವಿನಯದಿಂದ ವರ್ತಿಸಿವ, ಮಾನವೀಯತೆಯ ಚಾಕ ನಿರ್ವಾಹಕರೂ ಇದ್ದಾರೆ, ಅಂತವರ ಸಂಖ್ಯೆ ಮೂರು/ನೂರು ಪಟ್ಟಾಗಲಿ

ಇಸ್ಟೆಲ್ಲಾ ಘೋರವಾಗಿ ವರ್ತಿಸಲು  ಆ ಚಾಲಕ ನಿರ್ವಾಹಕರ  ಸಮಸ್ಯೆ ಏನು? ಬಿ ಎಂ ಟಿ ಸಿ  ರಾತ್ರಿ ಸೇವೆ ಸಹಾ ನೀಡುತ್ತೆ ಅದು ಒಂತರ  ರಾತ್ರಿ ದರೋಡೆ! ಒಂದೂವರೆ  ಟಿಕೆಟ್ ಅಮೌಂಟ್ ಚಾರ್ಜ್ ಮಾಡಿ  ತಿಜೋರಿ ತುಂಬಿಕೊಂಡು  ಬಿ ಎಂ ಟಿ ಸಿ ಅದೆಸ್ಟೋ ಲಾಭದಲ್ಲಿದೆ  ಅಂತೆಲ್ಲ ಹೇಳುವ ಬಿ ಎಂ ಟಿ ಸಿ   ಮಹಾನುಭಾವರು, ಈ ಚಾಲಕ್ ನಿರ್ವಾಹಕರಿಗೆ ಅದೆಷ್ಟು ಸಂಬಳ ಕೊಡ್ತಾರೆ, ಚಾಲಕ ನಿರ್ವಾಹಕರಿಗೆ ಅದೆಂತ  ಸೌಲಭ್ಯಗಳನ್ನು  ಕೊಟ್ಟಿದ್ದಾರೆ?

 

ಕೆಲ ಚಾಲಕ ನಿರ್ವಾಹಕರು, ಹಗಲು, ರಾತ್ರಿಯೂ, ಮತ್ತೊಮ್ಮೆ  ಓವರ್ ಟೈಮ್  ಮಾಡಿ , ಸುಸ್ತಾಗಿ, ದಣಿವಾಗಿ, ಮನೋರಂಜನೆ, ನಿದ್ದೆ ಇಲ್ಲದೆ ಇದರ ಮಧ್ಯೆ ಬಿ ಎಂ ಟಿ ಸಿ ದಿನಂಪ್ರತಿ ಟಿಕೆಟ್  ಟಾರ್ಗೆಟ್ ಇಟ್ಟು,ಆ ಟಾರ್ಗೆಟ್ ನ ರಿಚ್ ಮಾಡೋಕ್ ಹೇಳ್ತಾರಂತೆ. ಹೆಚ್ಗೆ  ಮಾರಿದರೆ ಕಮೀಸನ್, ಕಮ್ಮಿ ಆದ್ರೆ ಬೈಗುಳ ,ಟೀಕೆ  ಇಂತಾದ್ರಲ್ಲಿ   ಅದೇಗೆ ತಾನೇ  ಶಾಂತ ರೀತಿಯಿಂದ ಪ್ರಯಾಣಿಕರ ಜೊತೆ ವರ್ತಿಸಲು ಸಾಧ್ಯ?

 

ಚಾಲಕ ನಿರ್ವಾಹಕರಿಗೆ ಸರಿಯಾದ ಸೌಲಭ್ಯಗಲುಇಲ್ಲ್ಲ  ಆನೋದಕ್ಕೆ ಅವರಿಗಾಗಿ ಇರುವ  ವಸತಿ ಗೃಹಗಳು, ರೆಸ್ಟ್ ರೂಂ, ಕಡೆಗೊಮ್ಮೆ ಕಣ್ಣು ಹಾಯಿಸಿ  ಅವರಸ್ಥಿತಿ ಕಂಡು ಕರುಣೆ ಬರದೆ ಇರದು.

ಈ ರಾತ್ರಿ ಪ್ರಯಾಣದ  ಪ್ರಯಾಣವೋ ದೇವರಿಗೆ ಪ್ರೀತಿ! ಒಂದೂವರೆ ಪಟ್ಟು ಹಣ ಕೊಟ್ಟು ಕುಡುಕರೆ ತುಂಬಿ ತುಳುಕುವ  ಆ ಬಸ್ಸಿನಲ್ಲಿ ಪ್ರಯಾಣ ಮಾಡಿದಾಗ, ಜೀವನ ಪಾವನ ಅನಿಸದೆ ಇರದು..!!


ಇನ್ನು ಭಾನುವಾರವಂತೂನಿಲ್ದಾಣ ದೊಳಗೆ  ಬರಲು ಹರ ಸಾಹಸ ಪಟ್ಟರೆ, ಬಸ್ಸು ಹತ್ತಿ ಕುಳಿತ ಮೇಲೆ, ನಿಲ್ದಾನದೊಲ್ಗೆ  ಇನ್ನು ಅರ್ಧ ಘಂಟೆಯಿಂದ ಒಂದು ಘಂಟೆ ಸಮಯ ವ್ಯರ್ಥವಾಗದಿದ್ದರೆ  ನೋಡಿ... ಅದಕ್ಕೆ ಕಾರಣ ಅಡ್ಡ ದಿಡ್ಡಿ ನಿಲ್ಲಿಸಿಕೊಂಡು ಹರಟೆ ಹೋದೆವ ಚಾಲಕರು,  ಅದನ್ನು ಕಂಟ್ರೋಲ್ ಮಾಡುವವರು ಅದೆಲ್ಲಿ ಇರ್ತಾರೋ?

ಇದಲ್ಲದೆ ಇನ್ನದೆಸ್ತೋ ಸಮಸ್ಯೆಗಳು ಬಿ ಎಂ ಟಿ ಸಿ ಯಲ್ಲಿ ತುಂಬಿ ತುಳುಕುತ್ತಿವೆ. ನೀವೂ ಬರೆಯಿರಿ, ಬಿ ಎಂ ಟಿ ಸಿ ಕಣ್ಣು ತೆರೆಯಲಿ..

Rating
No votes yet