ಬಿಡಿ.. ಬಿಡಿ.. ಕನ್ನಡಿಗರು ಬಿಡಿ..

ಬಿಡಿ.. ಬಿಡಿ.. ಕನ್ನಡಿಗರು ಬಿಡಿ..

ಅಥವಾ ಬಿಡಿ, ಬಿಡಿ ಕನ್ನಡಿಗರು ಬಿಡಿ ಅನ್ನಬೇಕೆ? ಯಾವುದೇ ಪದವನ್ನು ಹಿಂದೆ ಮುಂದೆ ಮಾಡದೆ ಕೇವಲ ಚಿನ್ಹೆಗಳಲ್ಲೇ ವಾಕ್ಯದ ಅರ್ಥವನ್ನೇ ಬದಲಾಯಿಸುವ ಸ್ವಾತಂತ್ರ್ಯ ಕೇವಲ ಕನ್ನಡದಲ್ಲಿ ಮಾತ್ರ ಇರೋದು ಅನ್ಸುತ್ತೆ. ಈ ಎರಡೂ ವಾಕ್ಯದಲ್ಲಿ ಇರೋ ಸಾಮ್ಯ ಏನಪ್ಪಾ ಅಂದ್ರೆ ಪದಗಳ ಜೋಡಣೆ ಅಷ್ಟೆ ಆದ್ರೆ ಅರ್ಥ ಬೇರೆಯದ್ದೆ ಆಗಿದೆ. ನನಗ್ಯಾಕಪ್ಪ ಈ ಥರ ಬರೀಬೇಕು ಅನ್ಸ್ತು ಅಂದ್ರೆ ಮೊನ್ನೆ ನಂಗೆ ಒಬ್ಬರು ಪರಿಚಯ ಆದ್ರು ಅವರು ಕನ್ನಡಕ್ಕೋಸ್ಕರ, ಕನ್ನಡಿಗರಿಗೋಸ್ಕರ, ಈ ಕನ್ನಡ ಸಮಾಜಕ್ಕೋಸ್ಕರ ಏನಾದ್ರೂ ಕೈಲಾದಷ್ಟು ಕೆಲಸ ಮಾಡೋಣ ಅಂತ ಹಂಬಲ ಇಟ್ಟುಕೊಂಡಂತಹ ವ್ಯಕ್ತಿ ಆದ್ರೆ ಅವರ ತೊಂದ್ರೆ ಏನು ಅಂದ್ರೆ ಏನು ಮಾಡ್ಬೇಕು? ಹೇಗೆ ಮುಂದುವರಿಬೇಕು ಅಂತ ಗೊತ್ತಾಗದೆ ಇದ್ದದ್ದು. ಸರಿ, ನಾನು ನನಗೆ ತಿಳಿದಿರೋ/ಕೆಲಸ ಮಾಡುವ ಅಲ್ಪ ಸ್ವಲ್ಪ ವಿಷಯಗಳ ಬಗ್ಗೆ ತಿಳಿಸೋಣ ಅಂತ ಅವರೊಂದಿಗೆ ಮಾತನಾಡಿದೆ. ನೀವು ಹೇಗೆ ನಿಮ್ಮನ್ನು ಇಂತಹ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳೋಕ್ಕೆ ಆಗುತ್ತೆ ಅಂತ ಯಾಕಂದ್ರೆ ಮೇಲ್ ಗಳಲ್ಲಿ ಬ್ಲಾಗ್ ಗಳಲ್ಲಿ ಕನ್ನಡ ಪರ ಅಭಿಮಾನ ಪ್ರೀತಿ ಉಕ್ಕಿ, ಉಕ್ಕಿ ಹರಿದರು ಕೆಲಸ ಮಾತ್ರ ನಯಾ ಪೈಸದ್ದು ಮಾಡಿರೋಲ್ಲ ಕಾರಣ ಅವರಿಗೆ ಅಷ್ಟೆ ಬರೋದು ಬೇರೇನೂ ಬರೋಲ್ಲ :P, ಕಡೇಪಕ್ಷ ಈಗ ನಡಿತಿರೋ ಕಾರ್ಯಕ್ಕೆ ಕೈ ಜೋಡಿಸಿ ಅಂದ್ರು ಸಹ ಉಹು ಅವರಿಗೆ ಆಸಕ್ತಿ ಬರೋಲ್ಲ ಸಮಯ ಇಲ್ಲ ಅಂತಾರೆ ಆದ್ರೆ ಬ್ಲಾಗ್ ನಲ್ಲಿ ಪುಟಗಟ್ಟಲೆ ಬರಿತಾರೆ, ಸಮಯ ಕಳಿತಾರೆ. ಇಲ್ಲಿ ಬ್ಲಾಗ್ ಬರೆಯೋದು ತಪ್ಪು ಅಂತಿಲ್ಲ. ಧೋರಣೆ ಬಗ್ಗೆ ಮಾತಾಡ್ತಿರೋದು ಅಷ್ಟೆ, ಸಮಯ ಇಲ್ಲ ಅನ್ನೋದು ಬ್ಲಾಗ್ ತುಂಬ್ಸೋದು!! ಏನ್ ಅನ್ಬೇಕು? ಹಾಗಂದ್ಬಿಟ್ಟು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗೊಕ್ಕೆ ಆಗೋಲ್ಲ.. ಅವರವರ ಕೈಲಾದು ಮಾಡ್ಬೇಕು ಆದ್ರೆ ಬರಿ ಬ್ಲಾಗ್ ಬರಿತೀನಿ, ಆನ್ಲೈನ್ ಹೋರಾಡ್ತೀನಿ, ಬದಲಾವಣೆ ಈ ರೀತಿಯಾಗಿ ತರ್ತೀವಿ ಅಂದ್ರೆ ಈ ವಾದ ಸರಿಯಾಗುತ್ತಾ? ಇವೆಲ್ಲ ಮಾಡಿದ್ರು ಸಹ, ನಾವು ಸ್ವತಃ ಯೋಜನೆಗಳಿಗೆ ಕೈ ಹಾಕದೆ ಕಾರ್ಯಗಳು ಒಂದು ರೂಪಕ್ಕೆ ಬರುತ್ತೆ ಅಂತ ಯೋಚಿಸೋದು ತಪ್ಪಾಗುತ್ತೆ ಅಲ್ವಾ... ಕತ್ತಲಿದ್ದೆಡೆಗೆ ದೀಪ ತಂದರೆ ಮಾತ್ರ ಬೆಳಕು ಬರೋದು, ಬೆಳಕು ಬರಲಿ, ಬೆಳಕು ಬರಲಿ ಅಂತ ಕೂಗಾಡಿದ್ರು, ಒದ್ದಾಡಿದರು ಅದು ತಾನಾಗೇ ತಾನು ಹೇಗೆ ಬರೋಕ್ಕೆ ಸಾಧ್ಯ? ದೀಪ ತಂದರೆ ಮಾತ್ರ ಬೆಳಕು ಬರೋಕ್ಕೆ ಸಾಧ್ಯ, ಈ ಬೆಳಕು ತರೋ ಕೆಲಸ ಕನ್ನಡಿಗರಾಗಿ ಹೆಮ್ಮೆಯಿಂದ ಬದುಕ್ಕುತ್ತಿರೋ ನಾವೇ ಮಾಡ್ಬೇಕು. ದೀಪ ತರೋಣ ಬನ್ನಿ ಅಂತ ನಾಲ್ಕು ಜನಕ್ಕೆ ಪ್ರೇರೇಪಿಸಬೇಕು ಆಗ ಬದಲಾವಣೆ ಅನ್ನೋದು ಅಂಗೈಯಲ್ಲೇ ಅರಮನೆ ತರಹ ಆಗುತ್ತೆ. ನಾನು ಏನೋ ಹೇಳ್ಬೇಕು ಅನ್ಕೊಂಡಿದ್ದೆ ಹಂಗೆ ಮಾತು ದಿಕ್ಕು ತಪ್ಪಿತು ಕ್ಷಮಿಸಿ ವಾಪಸ್ topic ಗೆ ಬರೋಣ. ಅವರಿಗೆ ಕೇಳಿದ್ದೆ ಅಲ್ವಾ ಹೇಗೆ ತೊಡಗಿಸಿಕೊಳ್ಳೋಕ್ಕೆ ಇಷ್ಟ ಪಡ್ತೀರಾ? ಅಂತ, ಅದಕ್ಕೆ ಅವರು ಸದ್ಯಕ್ಕೆ ನಂಗೆ ನಿಮ್ಮಗಳ ಜೊತೆ ಓಡಾಡೋಕ್ಕೆ ಆಗೋಲ್ಲ ಆದ್ರೆ ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಕಯಂತ್ರ ಖರೀದಿಸಲು ಹಣದ ಸಹಾಯ, ದಸ್ತಾವೇಜಿನ ಕೆಲಸ, ಮಕ್ಕಳ ಪಠ್ಯಕ್ರಮದ ಬಗೆಗಿನ ಕೆಲಸಗಳು, ಚರ್ಚೆಗಲ್ಲಿ ಭಾಗವಹಿಸಿ ತೊಡಗಿಸಿಕೊಳ್ಳೋಕ್ಕೆ ನನ್ನ ಸಮಯವನ್ನ ಮೀಸಲಿಡ್ತೀನಿ ಅಂದ್ರು. ಇದಕ್ಕಿಂತ ಏನು ಬೇಕು ಅಲ್ವಾ? ಪ್ರತಿಯೊಬ್ರು ಓಡಾಡಿ ಕೆಲಸ ಮಾಡಲೇ ಬೇಕು ಅಂತೇನಿಲ್ಲ ಓಡಾಡುವವರಿಗೆ ಬೆನ್ನೆಲುಬಾಗಿ ಇದ್ರೂ ಸಹ ಓಡಾಡಿ ಕೆಲಸ ಮಾಡೋರಿಗೆ ಮತಷ್ಟು ಸ್ಫೂರ್ತಿ ಕೊಟ್ಟಂತೆ. ಸರಿನಪ್ಪ ಅಂತ ನಾನು ಖುಷಿಯಿಂದ ಅವರಿಗೆ ಜನರನ್ನ ಪರಿಚಯ ಮಾಡಿಕೊಡೋಣ ಅಂತ ವಿಚಾರ ಮಾಡಿ ಒಟ್ಟು ನಾಲ್ಕು ಜನ/ಗುಂಪಿನ ಸದಸ್ಯರಿಗೆ ಪರಿಚಯ ಮಾಡಿಸಿದೆ. ಒಬ್ರು ಗ್ರಾಮೀಣ ಮಕ್ಕಳಿಗೆ ಅಂತ ಸಮಾಜಿಕ ಕಳಕಳಿಯ ಬಗ್ಗೆ ತಿಳುವಳಿಕೆ ನೀಡಬೇಕು ಅಂತ cd ತಯಾರಿಸ್ತಿದಾರೆ ಮತ್ತೊಬ್ಬರು ಒಂದು ಸಂಘದ ಸದಸ್ಯರು, ಅವರ ಸಂಘ ತುಂಬಾ ಕೆಲಸ ಮಾಡುತ್ತವೆ. ಯೋಜನೆ ತುಂಬಾ ಇದೆ ಆದರೆ ಉತ್ಸಾಹಿ ಕೈಗಳು ಕಮ್ಮಿನೆ :-( ಆದ್ರು ಸಹ ಛಲ ಬಿಡದೆ ಹಿಡಿದ ಕಾರ್ಯ ಮಾಡಿ ಸಫಲರಾಗಿದ್ದಾರೆ. ಇದುವರೆಗೂ ಎಷ್ಟೋ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಹಳೆಯ ಗಣಕಯಂತ್ರವನ್ನು ಕೊಟ್ಟು ಮಕ್ಕಳಿಗೆ ಕಡ್ಡಾಯವಾಗಿ ೬ನೆ ಇಯತ್ತನೆ ಇಂದ ಗಣಕಯಂತ್ರದ ಪಠ್ಯಕ್ರಮ ಕಡ್ಡಾಯವಾಗಿರುವಂತೆ ನೋಡಿಕೊಂಡಿದ್ದಾರೆ. ಇಂದು ಇವರುಗಳ ಸಹಾಯ ಇಲ್ಲದೆ ಶಾಲೆ/ಮಕ್ಕಳು ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ, ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಹ ಅವರಿಗೆ ಕೈಗಳು ಕಮ್ಮಿ ಆಗಿವೆ ಹಾಗಾಗಿ ಯೋಜನೆಗಳ ಪ್ರಗತಿ ಕುಂಟಿತ ಆದರೆ ಗುರಿ ಮುಟ್ಟುವುದು ಖಚಿತ ಏಕೆಂದರೆ ಕೇವಲ ಕೆಲಸ ಮಾಡುವ ಕೈಗಳೇ ಇವೆ, ಬಾಯಿ ಇಲ್ಲ.. ಮತ್ತೊಬ್ಬರು ತಜುರ್ಮೆ(transalation) ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮೊಗದೊಬ್ಬರು ಕನ್ನಡಿಗರಿಗೆ ಕೆಲಸ ಕೊಡಿಸುವ ಸಲುವಾಗಿ ಓಡಾಡುವ ವ್ಯಕ್ತಿ.. ಹಿಂಗೆ ಇಷ್ಟೆಲ್ಲಾ ಜನರಿಗೆ ಪರಿಚಯ ಮಾಡಿಕೊಟ್ಟೆ ಆಗ ನಂಗೆ ಉದ್ಭವಿಸಿದ ವಿಚಾರ ಇದು. ಕನ್ನಡಿಗರು ಇಷ್ಟೆಲ್ಲಾ ಕಾರ್ಯ ಮಾಡಿದರು ಸಹ ಯಾಕೆ ಬಿಡಿ ಬಿಡಿ ಯಾಗಿದ್ದಾರೆ? ಒಗ್ಗೂಡುವಿಕೆ ಯಾಕಿಲ್ಲ? ಎಲ್ರು ಸಹ ಒಳ್ಳೆಯದನ್ನೇ ಬಯಸ್ತಿರೋದು ಅದರಲ್ಲೂ ನಿಸ್ವಾರ್ಥ ಸೇವೆ ಅದ್ರು ಸಹ ಒಬ್ಬರಿಗೊಬ್ಬರು ಯಾಕೆ ಸಹಾಯ ಮಾಡೋಲ್ಲ ಅಥವ ಇವರುಗಳ ಕಾರ್ಯದಲ್ಲಿ ಅವರು ತಲೆ ಹಾಕೋಲ್ಲ ಅವರುಗಳ ಕೆಲಸದಲ್ಲಿ ಇವರುಗಳು ತಲೆ ಹಾಕೋಲ್ಲ ಅಂತ ತಲೆ ಕೊರಿಯೋಕ್ಕೆ ಶುರು ಆಯ್ತು. ನಂಗೆ ಈ ಪ್ರಶ್ನೆ ಮೊದಲೇ ಯಾಕೆ ಹೊಳಿಲಿಲ್ಲ ಅಂದ್ರೆ ನನಗೆ ಈ ವ್ಯಕ್ತಿಗಳ ಪರಿಚಯ ಆದದ್ದು ಒಬ್ಬರ ನಂತರ ಒಬ್ಬರದ್ದು, ಅವರುಗಳ ಕೆಲಸದಲ್ಲಿ ನಾ ಕೈಜೋಡಿಸಿದಾಗ ಇವೆಲ್ಲ ಘಟನಾವಳಿಗಳು ಒಂದರ ನಂತರ ಮತ್ತೊಂದು ಬಂದಿದ್ದರಿಂದ ನಂಗೆ ಈ ವಿಚಾರ ಹೊಳಿಲಿಲ್ಲ. ಆದ್ರೆ ಒಬ್ಬ ಉತ್ಸಾಹಿ ವ್ಯಕ್ತಿಯನ್ನ ನನ್ನ ಸ್ನೇಹಿತರಿಗೆ ಪರಿಚಯಿಸಬೇಕೆಂದರೆ ೪-೪ intro ಮೇಲ್ ಮಾಡಬೇಕಾಯ್ತು.. ಎಲ್ಲರ ಮಧ್ಯೆ ಭಾಂದವ್ಯ ಇದ್ದರೆ ಈ ಕಷ್ಟ ಬರ್ತಿತ್ತಾ? ಒಂದೇ ಸರ್ತಿ ಎಲ್ರಿಗೂ ಪರಿಚಯ ಆಗ್ತಿದ್ರು ಎಲ್ಲರು ಎಲ್ಲರ ಕಾರ್ಯದಲ್ಲಿ ಸಹಾಯ ಮಾಡಬಹುದಾಗಿತ್ತು ಈಗ ಹ್ಗಾಗಿಲ್ವೆ :-( ಪ್ರತಿಯೊಬ್ಬರೂ ಸುತ್ತ ಲಕ್ಷ್ಮಣ ರೇಖೆ ಹಾಕೊಂಡು ಕೆಲಸ ಮಾಡ್ತಿದಾರೆ ಅದಕ್ಕೆ ಆಮೆಗತಿಯಲ್ಲಿ ಸಾಗ್ತಿದೆ. ಒಂದು ಸಮಾಜ, ಒಂದು ಗುಂಪು ಅಂದ್ಮೇಲೆ ಎಲ್ಲ ತರಹದ ಜನರು ಇರೋದು ಸಹಜ, ಎಲ್ಲಾ ತರಹದ ಅಭಿಪ್ರಾಯ ಕೇಳಿಬರೋದು ಸಹಜ ಹಾಗಂದ್ಬಿಟ್ಟು ನಾನು ಹೇಳಿದ ಹಾಗೆ ನಡೆಯಲಿಲ್ಲ, ನನ್ನ ಕೆಲಸಕ್ಕೆ ಮನ್ನಣೆ ದೊರೆಯಲಿಲ್ಲ, ಇಷ್ಟು ಕಷ್ಟ ಪಟ್ಟರು ಗುರುತಿಸಲಿಲ್ಲ ಅಂತ ಮನಸ್ಸಿಗೆ ತೊಗೊಂಡು ನನ್ ಪಾಡಿಗೆ ನಾನು ಇವರುಗಳಿಂದ ಬಿಡಿ ಆಗೇ ಕೆಲಸ ಮಾಡ್ತೀನಿ ಅಂದ್ರೆ ಹೇಗೆ ಬುದ್ಧಿ ಹೇಳುವುದು? ಈ ಥರದ ಪರಿಸ್ಥಿತಿಯಲ್ಲಿ ತಪ್ಪು ಯಾರದೇ ಇರಲಿ ಅದನ್ನು ನಿರ್ಲ್ಯಕ್ಷಿಸಿ, ಬಿಡಿ, ಬಿಡಿ ಕನ್ನಡಿಗರು(ಇವರೂ ಸಹ) ಬಿಡಿ ಅಂತ ಸಾಂತ್ವನ ಮಾಡಿ/ಮಾಡಿಕೊಂಡು ಒಗ್ಗೂಡಿ ನಡೆದರೆ ನಮ್ಮ ಕನ್ನಡಿಗರು, ನಮ್ಮ ನಾಡು ಏನೆಲ್ಲಾ ಸಾಧಿಸಬಹುದು ಅನ್ನೋದು ಊಹೆಗೂ ನಿಲುಕದ ಮಾತಲ್ಲವೇ? ಏನೇ ಬರಲಿ ಒಬ್ಬಟ್ ಇರಲಿ:P

Rating
No votes yet