ಬುದ್ಧಿವಂತ ಸರ್ದಾರ್ಜಿ
ಹಣ ಮಾಡುವ ಸಲುವಾಗಿ ಒಮ್ಮೆ ಒಬ್ಬ ಸರ್ದಾರ್ಜಿ ಒಂದು ಮಗುವನ್ನು ಅಪಹರಿಸಲು ನಿರ್ಧರಿಸುತ್ತಾನೆ.
ಒಂದು ಆಟದ ಮೈದಾನಕ್ಕೆ ಹೋಗಿ ಒಂದು ಮಗುವನ್ನು ಎತ್ತಿಕೊಂಡು, ಒಂದು ಮರದ ಹಿಂದೆ ಕರೆದುಕೊಂಡು ಹೋಗಿ " ನಾನು ನಿನ್ನನ್ನು ಕಿಡ್ನ್ಯಾಪ್ ಮಾಡಿದೀನಿ" ಅಂತ ಹೇಳ್ತಾನೆ.
ಸರ್ದಾರ್ಜಿ ಆ ಮಗುವಿನ ವಾರಸುದಾರರಿಗೆ ಒಂದು ಪತ್ರವನ್ನು ಬರೆಯುತ್ತಾನೆ.
" ನಾನು ನಿಮ್ಮ ಮಗನ್ನನ್ನು ಕಿಡ್ನ್ಯಾಪ್ ಮಾಡಿದೀನಿ, ನಾಳೆ ಬೆಳಗ್ಗೆ ಸರಿಯಾಗಿ 10 ಗಂಟೆಗೆ, ನಿಮ್ಮ ಮನೆ ಹತ್ರ ಆಟದ ಮೈದಾನದ ಉತ್ತರ ದಿಕ್ಕಿನಲ್ಲಿರೊ ಮಾವಿನ ಮರದ ಕೆಳಗೆ 2 ಲಕ್ಷ ರೂಪಾಯಿಗಳನ್ನ ಒಂದು ಪೇಪರ್ ಬ್ಯಾಗ್ನಲ್ಲಿ ಇಡಬೇಕು, ಇಲ್ಲಾಂದ್ರೆ ನಿಮ್ಮ ಮಗನ ಕಥೆ ಅಷ್ಟೆ.
ಇತಿ,
ಒಬ್ಬ ಸರ್ದಾರ್.
ಆ ಪತ್ರವನ್ನು ಆ ಹುಡುಗನ ಬಟ್ಟೆಗೆ ಅಂಟಿಸಿ, ನಿಮ್ಮ ತಂದೆ ತಾಯಿಗೆ ತೋರಿಸು ಎಂದು ಹೇಳಿ ಮನೆಗೆ ಕಳುಹಿಸುತ್ತಾನೆ.
ಮಾರನೆಯ ದಿನ ಸರ್ದಾರ್ಜಿ, ಆ ಮಾವಿನ ಮರದ ಕೆಳಗೆ ಮಗುವನ್ನು ಜೊತೆಗೆ ಪೇಪರ್ ಬ್ಯಾಗ್ನಲ್ಲಿದ್ದ ಹಣವನ್ನು ನೋಡಿ ಬಹಳ ಸಂತೋಷಗೊಳ್ಳುತ್ತಾನೆ. ಜೊತೆಗೆ ಒಂದು ಸಣ್ಣ ಪತ್ರ ಸಿಗುತ್ತದೆ.
" ಒಬ್ಬ ಸರ್ದಾರ್ಜಿ ಇನ್ನೊಬ್ಬ ಸರ್ದಾರ್ಜಿಗೆ ಹೇಗೆ ಹೀಗೆ ಮಾಡಲು ಸಾಧ್ಯ, ಛೇ... ಹಣ ತಗೊಂಡು ನನ್ನ ಮಗನನ್ನ ಬಿಟ್ಟುಬಿಡು ದಯವಿಟ್ಟು.. "
ಇತಿ,
ಮತ್ತೊಬ್ಬ ಸರ್ದಾರ್
Comments
ಉ: ಬುದ್ಧಿವಂತ ಸರ್ದಾರ್ಜಿ
ಉ: ಬುದ್ಧಿವಂತ ಸರ್ದಾರ್ಜಿ