ಬೆಂಕಿಯಲ್ಲದೇ ಸುಡುವುವಿವು

ಬೆಂಕಿಯಲ್ಲದೇ ಸುಡುವುವಿವು

ಮನದನ್ನೆಯಗಲಿಕೆ ತಮ್ಮವರಿಂದಪಮಾನ
ಮುಗಿಯದುಳಿದ ಕದನ* ಕೇಡಿಗರ ಸೇವೆ
ಗತಿಗೆಟ್ಟಿರುವನಿಸಿಕೆ  ಎಣೆಗೆಡುಕರ ಕೂಟ
ಬೆಂಕಿಯೊಂದಿಲ್ಲದೇ  ಸುಡುವುದೊಡಲನ್ನು

 

ಸಂಸ್ಕೃತ ಮೂಲ: 

ಕಾಂತಾವಿಯೋಗಃ ಸ್ವಜನಾಪಮಾನೋ
ರಣಸ್ಯ ಶೇಷಃ ಕುನೃಪಸ್ಯ ಸೇವಾ |
ದರಿದ್ರ ಭಾವೋ ವಿಷಮಾ ಸಭಾ ಚ
ವಿನಾಗ್ನಿಮೇತೇ ಪ್ರದಹಂತಿ ಕಾಯಂ ||

(ಸಮಯೋಚಿತ ಪದ್ಯರತ್ನ ಮಾಲಿಕಾದಿಂದ)

-ಹಂಸಾನಂದಿ

ಕೊ.ಕೊ: *ಜಾರ್ಜ್ ಬುಷ್ ಇರಾಕಿಗೆ ಹೋಗುವ ಮೊದಲು ಈ ಪದ್ಯ ಓದಿರಬೇಕಿತ್ತು :( 

 

Rating
No votes yet

Comments