ಬೇಲೂರ ಶಿಲಾಬಾಲಿಕೆಯೂ ಮೆಕ್ಸಿಕನ್ ಜೋಳವೂ

ಬೇಲೂರ ಶಿಲಾಬಾಲಿಕೆಯೂ ಮೆಕ್ಸಿಕನ್ ಜೋಳವೂ

From HAVINA KUNDAGE
HAVINA KUNDAGE

ಬೇಲೂರಿನ ಶಿಲಾಬಾಲಿಕೆ ಯೋಂದರ ಕೈಯಲ್ಲಿ ಚಿತ್ರದಲ್ಲಿರುವ ಕುಂಡಿಗೆಯ ಹೋಲಿಕೆ ಇದೆ. ಬಾಲಿಕೆಯ ಕೈಯಲ್ಲಿರುವುರು ಮೆಕ್ಸಿಕನ್ ಜೋಳದ ಕುಂಡಿಗೆ ಎಂತಲೂ ಮೆಕ್ಸಿಕೋಕ್ಕೂ ಭಾರತಕ್ಕೂ ಕೋಲಂಬಸ್ ಗಿಂತ ಹಲೆಯ ಸಂಬಂಧವಿತ್ತೆಂದೂ ಮಾರ್ಗದರ್ಶಿಗಳು ಹೇಳುತ್ತಾರೆ. ಈ ಬಗ್ಗೆ ನನಗೆ ತೃಪ್ತಿ ಇರಲಿಲ್ಲ. ಊರಿಗೆ ಹೋದಾಗಲೆಲ್ಲಾ ಈ ಫೋಟೊದಲ್ಲಿರುವ ಸಸ್ಯಕ್ಕಾಗಿ ಹುಡುಕುತ್ತಿದ್ದೆ. ಈ ಸಾರೆ ಸಿಕ್ಕಿತು.
ಇದು ಮಲೆನಾಡಿನ ಮಳೆಗಾಲದಲ್ಲಿ ಹುಟ್ಟಿ ಸಾಯುವ ಎಷ್ಟೋ ಸಸ್ಯಗಳಲ್ಲಿ ಒಂದು. .ಸುವರ್ಣ ಗಡ್ಡೆಯಂತಃ ಸಸ್ಯವಿದು.ಇದರ ತಲೆಯಮೇಲೆ ಇದರ ಮುಸುಕು ಹಾವಿನ ಹೇಡೆಯಂತಿರುತ್ತದೆ. ಇದಕ್ಕೆ ಹಾವಿನ ಕುಂಡಿಗೆ ಎನ್ನುತ್ತಾರೆ. ಇದಕ್ಕೆ ವಿಷದ ಕುಂಡಿಗೆ ಎಂತಲೂ ಎನ್ನುತ್ತಾರೆ.
ಹೀಗಾಗಿ ಬೇಲೂರ ಈ ಶಿಲಾಬಾಲಿಕೆಯು ವಿಷಕನ್ಯೆಯೇ?
ಹೆಚ್ಚಿನ ಫೋಟೋಕ್ಕಾಗಿ ಎರಡನೆಯ ಚಿತ್ರದ ಮೇಲೆ ಕ್ಲಿಕ್ಕಿಸಿರಿ

Rating
No votes yet