ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ

ಭೂಮಿ ತಂಪಾಗಲು ನಮ್ಮ ಅಳಿಲು ಸೇವೆ

ಕಳೆದ ವಾರ Global Warming ಬಗ್ಯೆ ಒಂದು ಕವನ ಬರೆದಿದ್ದೆ. ನಂತರ ಹಳೆಯ ಇಮೇಲುಗಳನ್ನು ಜಾಲಾಡುತ್ತಿರುವಾಗ ಮತ್ತಷ್ಟು ಮಾಹಿತಿ ಸಿಕ್ಕಿತು.

ಇದರಲ್ಲಿ ಕೆಲವಾದರೂ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಅನ್ನುವ ಆಶಯದೊಂದಿಗೆ

೧. Incandescent Lamp ಬದಲು Compact Flouresecent Lamp (CFL) ಬಳಸಿ .ಪ್ರತಿ ಒಂದರಿಂದ ವರ್ಷಕ್ಕೆ ೧೫೦ ಪೌಂಡು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಕಡಿಮೆಯಾಗುತ್ತದೆ.

೨.ಕಾರು ಉಪಯೋಗ ಕಡಿಮೆ ಮಾಡಿ. ಹತ್ತಿರದ ಜಾಗಗಳಿಗೆ ನಡೆದೇ ಹೋಗಬಹುದು. ಸಾಧ್ಯವಾದಾಗಲೆಲ್ಲ ಬಸ್ಸಿನಲ್ಲಿ ಹೋಗಬಹುದು. ಕಾರ್ ಪೂಲ್ ಕೂಡಾ ಒಳ್ಳೆಯದು.ಒಂದು ಮೈಲಿ ಡ್ರೈವಿಂಗ್ ಕಡಿಮೆ ಮಾಡೋದರಿಂದ ಒಂದು ಪೌಂಡು CO2 ಉತ್ಪತ್ತಿ ಕಡಿಮೆಯಾಗುತ್ತದೆ.

೩.ವಸ್ತುಗಳ ಮರುಬಳಕೆ ಜಾಸ್ತಿ ಜಾಸ್ತಿ ಮಾಡೋಣ.

೪.ಕಾರಿನ ಟೈರಿನ ಗಾಳಿ ಒತ್ತಡ ಸರಿಯಾಗಿರಲಿ. ಇದರಿಂದ ೩% ಇಂಧನ ಉಳಿತಾಯವಾಗುತ್ತದೆ.ಒಂದು ಗ್ಯಾಲನ್ ಗ್ಯಾಸೋಲಿನ್ ಉಳಿಸಿದರೆ ೨೦ ಪೌಂಡು CO2 ಕಡಿಮೆ ಮಾಡಿದಂತೆ.

೫.ಬಿಸಿ ನೀರಿನ ಬಳಕೆ ಕಡಿಮೆಮಾಡೋಣ. ಬೇಸಿಗೆಯಲ್ಲಿ ತಣ್ಣೀರು ಸ್ನಾನ ಹಿತವಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ಗೀಸರುಗಳ ಬಳಕೆ ಬೇಕಾದಷ್ಟು ಹೊತ್ತು ಮಾತ್ರಾ ಇಟ್ಟರೆ ಒಳ್ಳೆಯದು.

೬.ಪ್ಯಾಕೇಜಿಂಗ್ ಜಾಸ್ತಿ ಇರುವ ಸಾಮಾನುಗಳ ಬಳಕೆ ಕಡಿಮೆ ಮಾಡೋಣ. ಪ್ಯಾಕೇಜಿಂಗ್ ಸಾಧಾರಣ ಕಸದ ಬುಟ್ಟಿಗೇ ಸೇರುತ್ತದೆ ತಾನೇ?

೭.AC ಬಳಕೆ ಮಿತವಾಗಿರಲಿ. ಸೆಟ್ಟಿಂಗ್ ೧೮-೧೯ ಗಿಂತ ೨೩-೨೪ ಇಟ್ಟರೂ ಹಿತವಾಗಿರುತ್ತದೆ. ವಿದ್ಯುತ್ ಬಿಲ್ಲೂ ಕಡಿಮೆಯಾಗುತ್ತದೆ. ಕಾರಿನ ಏಸಿಯೂ ಅಗತ್ಯ ಬಿದ್ದಾಗ ಮಾತ್ರವೇ ಉಪಯೋಗಿಸೋಣ, ಯಾವಾಗಲೂ ಅಲ್ಲ.

೮.ಗಿಡಮರ ನೆಡುವುದು. ಒಂದು ಮರ ತನ್ನ ಜೀವಮಾನದಲ್ಲಿ ಒಂದು ಟನ್ CO2 ಕುಡಿಯುತ್ತದೆ ಎಂದು ಅಂದಾಜು.

೯.ಟಿವಿ, ಡಿವಿಡಿ ಇತ್ಯಾದಿಗಳನ್ನ ರಿಮೋಟಿನಿಂದ ಆಫ್ ಮಾಡೂವುದರ ಬದಲು ಸ್ವಿಚ್ಚಿನಿಂದ ಆಫ್ ಮಾಡಿ, ಮುಖ್ಯವಾಗಿ ರಾತ್ರಿ ಎಲ್ಲಾ ಆಫ್ ಮಾಡಿ ಮಲಗುವ ಸಮಯದಲ್ಲಿ. ರಿಮೋಟಿನಿಂದ ಆಫ್ ಮಾಡಿದರೆ , LED indiction ಇನ್ನೂ ಹೊತ್ತಿರುತ್ತದೆ. ಇದನ್ನು ಹೊತ್ತಿಟ್ಟಿರಲಿಕ್ಕೆ ಸರ್ಕ್ಯೂಟ್ ಕೆಲಸ ಮಾಡಿ ಸುಮ್ಮನೆ ವಿದ್ಯುತ್ ಖರ್ಚಾಗುತ್ತಿರುತ್ತದೆ.ಇದೇ ಮಾತು ಆಫೀಸಿನಲ್ಲಿ ಕಂಪ್ಯೂಟರ್ ಆಫ್ ಮಾಡಿ ಮನೆಗೆ ಹೋಗುವಾಗಲೂ ಅನ್ವಯಿಸುತ್ತದೆ. ಮಾನಿಟರ್ ಸ್ವಿಚ್ಚನ್ನೂ ಆಫ್ ಮಾಡುವುದು ಮರೆಯಬೇಡಿ. ಯಾರೂ ಇಲ್ಲದ ವೇಳೆ ಎಲ್ಲಾ Power Devices ಆಫ್ ಇರುವುದು ಬೆಂಕಿ ಅಪಘಾತದ ದೃಷ್ಟಿಯಿಂದಲೂ ಒಳ್ಳೆಯದು. ಆನ್ ಇದ್ದ ಫ್ಯಾನಿನಿಂದ ಬೆಳಗಿನ ಜಾವ ಬೆಂಕಿ ಹೊತ್ತಿದ ಅನಾಹುತ ನಮ್ಮ ಆಫೀಸಿನಲ್ಲೇ ಆಗಿದೆ.

೧೦.ಇವನ್ನೆಲ್ಲಾ ನಮ್ಮೆಲ್ಲ ಗೆಳೆಯರಿಗೆ,ನೆಂಟರಿಗೂ ಹೇಳೋಣ.

ಭೂಮಿ ಸ್ವಚ್ಛ ಮಾಡುವಾ
ನಾಳೆಯತ್ತ ನೋಡುವಾ
ನಮ್ಮ ನಿಮ್ಮ ಅಚ್ಚು ಮೆಚ್ಚು
ಭೂಮಿ ಸ್ವಸ್ಥ ಮಾಡುವಾ

Rating
No votes yet

Comments