ಮತದಾನದ ದಿನದಂದು ಕೇಳಿದ ಸಂಗೀತ ಕಚೇರಿಗಳು

ಮತದಾನದ ದಿನದಂದು ಕೇಳಿದ ಸಂಗೀತ ಕಚೇರಿಗಳು

ಏಪ್ರಿಲ್ ೨೩, ೨೦೦೯

ಕರ್ನಾಟಕದಲ್ಲಿ ಮೊದಲನೆಯ ಹಂತದ ಲೋಕಸಭೆ ಚುನಾವಣೆಯ ದಿನ. ಅಂದು ಕೋಟೆ ಮೈದಾನದಲ್ಲಿ ಪಟ್ಟಾಭಿರಾಮ ಪಂಡಿತ್ ಅವರ ಗಾಯನ ಕಚೇರಿ ಏರ್ಪಾಡಾಗಿತ್ತು. ಬಹಳ ಚೆನ್ನಾಗಿ ಹಾಡುತ್ತಾರೆಂದು ಅಪ್ಪ ಹೇಳಿದ್ದರು. ಮೈಸೂರಿನಲ್ಲಿ ಅವರ ಕಚೇರಿಗಳನ್ನು ಕೇಳಲು ಸಾಧ್ಯವಾಗದಿದ್ದುರಿಂದ, ಇಂದು ಹೋಗಬೇಕೊಂದುಕೊಂಡೆ. ಅಂತೆಯೇ ಸಂಜೆ ೫:೪೫ಕ್ಕೆ ಕೋಟೆ ಮೈದಾನ ತಲುಪಿ ಚೀಟಿ ಪಡೆದುಕೊಂಡು ಆಸೀನನಾದೆ.

೭ ಘಂಟೆಯ ನಂತರ ಪಂಡಿತ್ ಅವರ ಗಾಯನ. ನಾನು ಹೋಗುವಾಗ ತ್ರಿಶೂರ್ ರಾಮಚಂದ್ರನ್ ಅವರ ಮಗಳಾದ ಶುಭಶ್ರೀ ರಾಮಚಂದ್ರನ್ ಅವರ ಗಾಯನ ಕಚೇರಿ ನಡೆಯುತ್ತಿತ್ತು. ನಾ ಹೋದಾಗ ಆಗಲೆ ಒಂದೆರಡು ಪದ್ಯಗಳು ಮುಗಿದಿರಬೇಕು. ಅದರ ವಿವರ ಇಂತಿದೆ

ಗಾಯನ: ಶುಭಶ್ರೀ ರಾಮಚಂದ್ರನ್
ವಯೊಲಿನ್: ಸಿ.ಎನ್ ಚಂದ್ರಶೇಖರನ್
ಮೃದಂಗ: ಚೆಲುವರಾಜ್

೧) ನಾರಾಯಣ ನಿನ್ನ - ಶುದ್ಧಧನ್ಯಾಸಿ - ಪುರಂದರದಾಸರು - ಖಂಡಚಾಪುತಾಳ

೨) ಶ್ರೀ ರಂಗನಾಯಕಮ್ - ನಾಯಕಿ - ಮುತ್ತುಸ್ವಾಮಿ ದೀಕ್ಷಿತರು - ಆದಿತಾಳ
-- ದರ್ಬಾರ್ ಮತ್ತು ನಾಯಕಿಯ ವ್ಯತ್ಯಾಸ ನನಗೆ ಇವರ ಗಾಯನದಿಂದ ಸ್ವಲ್ಪ ಮಟ್ಟಿಗೆ ಗೊತ್ತಾಗಿದ್ದು ವಿಶೇಷ

೩) ಮನವ್ಯಾಲಕಿಂ - ನಳಿನಕಾಂತಿ - ತ್ಯಾಗರಾಜರು - ಆದಿತಾಳ(ಕಿರುಬೆರಳಿನಿಂದ ಪ್ರಾರಂಭ. ಇದರ technical term ತಿಳಿದಿಲ್ಲ)
-- ಸಣ್ಣ ಮಟ್ಟಿನ ಆಲಾಪನೆ

೪) ಭೋಗೀಂದ್ರಶಾಯಿನಮ್ - ಕುಂತಲ ವರಾಳಿ - ಸ್ವಾತಿ ತಿರುನಾಳ್ ಮಹಾರಾಜರು - ಖಂಡಚಾಪುತಾಳ
೫) ಏತಾವುನರ - ಕಲ್ಯಾಣಿ - ತ್ಯಾಗರಾಜರು - ಆದಿತಾಳ (ವಿಳಂಬ ಗತಿ)
-- ದೀರ್ಘವಾದ ಆಲಾಪನೆ
-- "ಸೀತಾಗೌರಿ ವಾಗೀಶ್ವರಿಯನಿ" ಸಾಲುಗಳಲ್ಲಿ ನೆರವಲ್ ಹಾಗೂ ಸ್ವರ ಪ್ರಸ್ತಾರಗಳು
-- ತನಿ ಆವರ್ತನೆ ಉತ್ತಮವಾಗಿತ್ತು

೬) ರಾಮ ಮಂತ್ರವ ಜಪಿಸೋ - ಜೋನ್‍ಪುರಿ - ಪುರಂದರದಾಸರು - ಆದಿತಾಳ

೭) ಬಾರೋ ಕೃಷ್ಣಯ್ಯ - ರಾಗಮಾಲಿಕೆ - ಕನಕದಾಸರು - ಆದಿತಾಳ
-- ಮಾಂಡ್ ರಾಗದಿಂದ ಪ್ರಾರಂಭವಾಗುತ್ತದೆ. ಉಳಿದ ರಾಗಗಳು ಗುರುತಿಸಲಾಗಲಿಲ್ಲ

೮) ಕಲ್ಯಾಣ ಗೋಪಾಲ ಕರುಣಾಲವಾಲಂ - ಸಿಂದು ಭೈರವಿ - ನಾರಯಣ ತೀರ್ಥರು - ಆದಿತಾಳ

ಒಂದೆರಡು ತಮಿಳು ಕೃತಿಗಳನ್ನು ಹಾಡಿದರು. ಯಾವುದೆಂದು ನೆನಪಿಲ್ಲ. ಗಾಯನ ಕೇಳಿದಾಗ ಮುಂಚೆಯೆ ಹೋಗಬೇಕೆಂದೆನಿಸಿತು.
------------------------------------------------------------------------------------------------------------------------------------------------------

೭ ಘಂಟೆಗೆ ಸರಿಯಾಗಿ ಪಟ್ಟಾಭಿರಾಮ ಪಂಡಿತ್ ಅವರ ಗಾಯನ ಪ್ರಾರಂಭವಾಯಿತು. ಕರ್ನಾಟಕದವರೇ ಆದ ಇವರು ಪಾಲ್ಘಾಟ್ ಕೆ.ವಿ ನಾರಾಯಣಸ್ವಾಮಿಯವರ ಶಿಷ್ಯರು. ಅಪ್ಪ ಹೇಳಿದ್ದರಲ್ಲಿ ಯಾವುದೇ ಸಂದೇಹವಿಲ್ಲ. ಅಮೋಘವಾದ ಕಚೇರಿ. ಅವರ ಗುರುಗಳನ್ನೇ ಹೋಲುವಂತಿತ್ತು. ಕಿರಿಯರಾದರೂ ಹಿರಿಯ ಕಲಾವಿದರೆಂದೇ ಹೇಳಬಹುದು. ಅಷ್ಟೊಂದು ಪಾಂಡಿತ್ಯ. ಆಲಾಪನೆ, ನೆರವಲ್‍ಗಳು, ಸ್ವರ-ಪ್ರಸ್ತಾರಗಳು ಅತ್ಯದ್ಭುತವಾಗಿದ್ದವು. ಹಾಡುವವರು ಎಷ್ಟೇ ಚೆನ್ನಾಗಿ ಹಾಡಿದರೂ, ಆಲಾಪನೆಗಳು ಸುಮಧುರವಾಗಿದ್ದರೂ, ಸ್ವರ-ಪ್ರಸ್ತಾರಗಳು ಉತ್ತಮವಾಗಿದ್ದರೂ ಜೊತೆಗೆ ಉತ್ತಮ ಪಕ್ಕವಾದ್ಯವಿಲ್ಲದೆ ಸಂಗೀತ ಕಚೇರಿ ರುಚಿಸುವುದಿಲ್ಲ. ಇವರಿಗೆ ಸರಿಸಾಟಿಯಾಗಿ ನುಡಿಸಿದವರು ಮೈಸೂರು ಮಂಜುನಾಥ್ ಹಾಗೂ ಮನ್ನಾರ್ಗುಡಿ ಈಶ್ವರನ್. ಇವರಿಬ್ಬರ ವಿದ್ವತ್ತಿನ ಬಗ್ಗೆ ಎರಡು ಮಾತಿಲ್ಲ. ಇಂಟಿಲಿಜೆಂಟ್ ಸ್ವರ-ಪ್ರಸ್ತಾರಗಳು ಅಷ್ಟೇ ಇಂಟಿಲಿಜೆಂಟ್ ಪಕ್ಕವಾದ್ಯ. ಕಚೇರಿಯ ಉದ್ದಕ್ಕೂ ಎಲ್ಲಾ ಕಲಾವಿದರನ್ನು ಪ್ರೋತ್ಸಾಹಿಸುವ ಹಿರಿಯರಾದ ಮನ್ನಾರ್ಗುಡಿ ಈಶ್ವರನ್ ಅವರ ವಿಶೇಷ ಗುಣ. ಇವರ ಈ ಗುಣವನ್ನು ಮೈಸೂರಿನಲ್ಲಿ ನೈವೆಲ್ಲಿ ಸಂತಾನಗೋಪಾಲನ್ ಅವರ ಕಚೇರಿಯಲ್ಲೂ ಕಂಡಿದ್ದೇನೆ. ವಿವರಗಳು ಇಂತಿವೆ

ಗಾಯನ: ಪಟ್ಟಾಭಿರಾಮ ಪಂಡಿತ್
ವಯೊಲಿನ್: ಮೈಸೂರು ಮಂಜುನಾಥ್
ಮೃದಂಗ: ಮನ್ನಾರ್ಗುಡಿ ಈಶ್ವರನ್
ಘಟ: ರವಿಕುಮಾರ್

೧) ಚಲಮೇಲ (ವರ್ಣ) - ನಾಟಕುರಂಜಿ - ಪಟ್ಣಂ ಸುಬ್ರಮಣ್ಯ ಐಯ್ಯರ್ - ಆದಿತಾಳ

೨) ಮಾರುಬಲ್ಕ - ಶ್ರೀರಂಜನಿ - ತ್ಯಾಗರಾಜರು - ಆದಿತಾಳ

೩) ನಿನ್ನೆ ನೆರ ನಮ್ಮಿ - ಪಂತುವರಾಳಿ - ತ್ಯಾಗರಾಜರು - ಆದಿತಾಳ
-- ಆಲಾಪನೆ ಉತ್ತಮವಾಗಿತ್ತು (ವಯೊಲಿನ್ ಆಲಾಪನೆ ಕೂಡ)
-- "ವೇದಶಾಸ್ತ್ರ ಪುರಾಣ" ಸಾಲುಗಳಲ್ಲಿ ನೆರವಲ್
-- ಎರಡು ರೀತಿಯ ಸ್ವರ ಪ್ರಸ್ತಾರಗಳು ಈ ಹಾಡಿನ ವಿಶೇಷ (ಒಂದು "ವೇದಶಾಸ್ತ್ರ"ದಲ್ಲಿ ಕೊನೆಗೊಳ್ಳುವುದು ಮತ್ತೊಂದು "ಪುರಾಣ" ದಲ್ಲಿ ಕೊನೆಗೊಳ್ಳುವುದು)

೪) ಬ್ರೋವ ಬಾ ರಾಮ - ಬಹುದಾರಿ - ತ್ಯಾಗರಾಜರು - ಆದಿತಾಳ

೫) ದಾಶರಥೇ - ತೋಡಿ - ತ್ಯಾಗರಾಜರು - ಆದಿತಾಳ
-- ದೀರ್ಘವಾದ ಸುಮಧುರವಾದ ಆಲಾಪನೆ
-- "ಭಕ್ತಿ ಲೆ ನೀ ಕವಿ" ಸಾಲುಗಳಲ್ಲಿ ದೀರ್ಘವಾದ ನೆರವಲ್. ವಿವಿಧ ನಡೆಗಳಲ್ಲಿ ಹಾಡಿದರು
-- ಸಮಯದ ಅಭಾವದಿಂದಾಗಿ ಸ್ವರ-ಪ್ರಸ್ತಾರಗಳು ದೀರ್ಘವಾಗಿರಲಿಲ್ಲ
-- ಸಮಯ ಆಗಲೇ ೯:೨೦ ಆಗಿತ್ತು. ಆದರೇ ಮನ್ನಾರ್ಗುಡಿ ಅವರ ತನಿ ಆವರ್ತನೆ ಕೇಳದೆ ಹೋಗಲು ಮನಸಾಗಲಿಲ್ಲ. ಇವರಿಗೆ ಘಟ ವಾದಕರು ಉತ್ತಮ್ ಜೊತೆ ನೀಡಿದರು

೬) ಕಂಡು ಧನ್ಯನಾದೆ - ಬೇಹಾಗ್
-- ಇವರ ಗುರುಗಳು ಹಲವು ಕಚೇರಿಯಲ್ಲಿ ಹಾಡಿದ್ದಾರೆ

ಸಮಯ ಮೀರಿಹೋದ್ದರಿಂದ ನಾನು ಬೇಸರಿದಿಂದಲೆ ವಾಪಾಸ್ ಹೋದೆ. ಬಹುಶಃ ಇನ್ನೆರಡು ಕೀರ್ತನೆಗಳನ್ನು ಹಾಡಿರಬಹುದು. ಅದರಲ್ಲಿ ಸ್ವಾತಿ ತಿರುನಾಳ್ ಮಹಾರಾಜರ ಕಾನಡ ರಾಗದ ತಿಲ್ಲಾನ ಕೂಡ ಹಾಡಿರಬಹುದೆಂಬ ನನ್ನ ಊಹೆ. ಅವರ ಗುರುಗಳು ಈ ತಿಲ್ಲಾನವನ್ನು ಹಲವು ಬಾರಿ ಹಾಡಿದ್ದಾರೆ.

Rating
No votes yet

Comments