ಮತ್ತದೇ ಬೇಸರ...

ಮತ್ತದೇ ಬೇಸರ...

ಈಗೊಂದು ಆರು ವರ್ಷದ ಹಿಂದಿನ ತನಕ ಯಾವಾಗ ಬೇಸಿಗೆ ರಜ ಶುರವಾಗುತ್ತೆ ಅಂತ ಕಾಯ್ತಿದ್ದೆ.. ಅಜ್ಜಿ ಮನೆಗೆ ಅಂತ ಹೋಗಿದ್ದ ನೆನಪು ನನಗೆ ಯಾವತ್ತು ಇಲ್ದಿದ್ರು ನನಗಿಷ್ಟವಾದ ಕೆಲಸಗಳನ್ನ ಮಾಡಕ್ಕೆ ಬೇಸಿಗೆ ರಜದಲ್ಲಿ ಒಳ್ಳೆ ಅವಕಾಶ ಇರ್ತಿತ್ತು...

ಆದ್ರೆ ಈಗ ಬೇಸಿಗೆ ರಜಾ ಬರೋದೂ ಬೇಡ ,ಅದು ಮುಗಿಯೋದು ಬೇಡ ಅನ್ನಿಸ್ತಿದೆ.. ಕಳೆದೆರಡು ತಿಂಗಳು ನಿಜ್ವಾಗ್ಲು ಚೆನ್ನಾಗಿತ್ತು.. ಯಾಕಂದ್ರೆ ಅಮ್ಮ ಮನೆಲೇ ಇರ್ತಿದ್ರು.. ಇವತ್ತಿಂದ ಅಮ್ಮ ಮತ್ತೆ ಕೆಲಸಕ್ಕೆ.. ಮನೆಯೆಲ್ಲ ಭಣ ಭಣ ಅನ್ನಿಸ್ತಿದೆ... ಮತ್ತೆ ನಾನೊಬ್ಳೇ ಮನೆಯಲ್ಲಿ... ಹೊಂದ್ಕೊಳ್ಳಕ್ಕೆ ಸ್ವಲ್ಪ ಸಮಯ ಬೇಕು... ಇವತ್ತಂತು ಕಾಲೇಜಿನಿಂದ ಮನೆಗೆ ಬಂದಾಗ ಅಳುನೇ ಬಂದಿತ್ತು...

ಎರಡು ತಿಂಗಳಿಂದ ಇದ್ದ ಮನೆ ವಾತಾವರಣ ಇದ್ದಕ್ಕಿದ್ದ ಹಾಗೆ ಬದಲಾದಾಗ ಹೊಂದ್ಕೊಳ್ಳಕ್ಕೆ ಆಗ್ತನೆ ಇಲ್ಲ.. ಕಾಲೇಜಿಂದ ಮನೆಗೆ ಬರುವಾಗ, ನನ್ನ ಗಾಡಿಯ ಶಬ್ದ ಕೇಳಿಸ್ತಿದ್ದಂಗೆ ಅಮ್ಮ ಹೊರಗೆ ಬಂದು ಗೇಟ್ ತೆಗಿತಿದ್ರು... ಅಲ್ಲಿಂದ ಶುರುವಾಗಿ, ಕಾಲೇಜ್ನಲ್ಲಿ ಏನೇನು ನಡಿತು ಅಂತ ಹೇಳಿ, ಊಟಕ್ಕೆ ಬಾ ಅಂತ ಅಮ್ಮನ ಹತ್ರ ಹತ್ತು ಸಲ ಹೇಳಿಸಿಕೊಂಡು, ಚೂರು ಬೈಸ್ಕೊಂಡು ಅಮ್ಮನ ಹಿಂದೆ ಮುಂದೆ ಸುತ್ತಿ ಮುದ್ದು ಮಾಡಿಸ್ಕೊಳ್ಳುವಷ್ಟ್ರಲ್ಲಿ ಅಪ್ಪ ಬರ್ತಿದ್ರು .. ಎಲ್ಲ ಒಟ್ಟಿಗೆ ಊಟ ಮಾಡ್ತಿದ್ವಿ... ನಾನು ಬರೋದು ಲೇಟ್ ಆದ್ರೆ ಒಬ್ಳೆ ಕೂತ್ಕೊಂಡು ಊಟ ಯಾಕೆ ಮಾಡ್ತಿಯಾ ಅಂತ ಹೇಳಿ ನನ್ನ ಜೊತೆಲೆ ಕೂತಿದ್ದು ಆಮೇಲೆ ಅವರ ಕೆಲಸಕ್ಕೆ ಹೋಗ್ತಿದ್ರು...

ಇವತ್ತು ಬಂದು ನಾನೇ ಗೇಟಿನ ಬೀಗ ತೆಗಿವಾಗ ಮನೆಯೊಳಗೆ ಹೋಗೋ ಮನಸ್ಸೆ ಆಗ್ಲಿಲ್ಲ.. ಅಡುಗೆ ಮನೆಗೂ ಹೋಗ್ಲಿಲ್ಲ..ಕೊನೆಗೂ ಸಂಜೆ ಅಮ್ಮ ಮನೆಗೆ ಬಂದಮೇಲೆ ಅವ್ರ ಹತ್ರ ಬೈಸ್ಕೊಂಡೆ ಊಟ ಮಾಡಿದ್ದು.... ಸಂಜೆ ಅಮ್ಮ ಮನೆಗೆ ಬಂದ ಮೇಲೂ ಅವ್ರದ್ದೆ ಕೆಲಸದಲ್ಲಿ ಮುಳುಗಿಹೋಗಿದ್ರು..... ಇನ್ನು ಹೀಗೆನೇ.. ಮತ್ತೆ ಅಮ್ಮಂಗೆ ಮುಂದಿನ ರಜೆ ಬರೋ ತನಕ...
ಮತ್ತದೇ ಬೇಸರ.....

Rating
No votes yet

Comments