ಮನಸನ್ನ ಮಾರಾಟ ಮಾಡಕಾಗಲ್ಲ ಕಣೋ ಅದನ್ನೇನಿದ್ರೂ ಗೆಲ್ಲಬೇಕು

ಮನಸನ್ನ ಮಾರಾಟ ಮಾಡಕಾಗಲ್ಲ ಕಣೋ ಅದನ್ನೇನಿದ್ರೂ ಗೆಲ್ಲಬೇಕು

ಡಿಯರ್


ನಿಟ್ಟುಸಿರಿಡುತ್ತಿದ್ದೀಯಾ. ನನಗೆ ಗೊತ್ತು ಕಣೋ. ನನ್ನಿಂದ ದೂರ ಆಗಿ ನಿಂಗೆ ಬದುಕೋದಿಕ್ಕೆ ಆಗಲ್ಲ ಅಂತ . ಯಾಕೋ ಈ ಹೊಯ್ದಾಟಾ?


ಎಲ್ಲಾ ಪ್ರೇಮಿಗಳ ಜೀವನದಲ್ಲೂ ವಿಲನ್ ಬೇರೆಯವರಿರ್ತಾರೆ .ಆದರೆ ನಮ್ಮ ಪ್ರೇಮಕ್ಕೆ ನಿನ್ನ ಸ್ನೇಹಾನೆ ಅಡ್ಡಿ ಬಂತಲ್ಲೋ .


ಅದೇನು ಅಷ್ಟು ಸುಲಭಾನಾ? ಮರೆಯೋದು ತೊರೆಯೋದು. ಸೆಕಂಡ್ ಇನ್ನಿಂಗ್ಸ್ ಶುರು ಮಾಡೋದು?


 . ’ಸಾರಿ ವನೂ  ಇನ್ನು ಮೇಲೆ ನನ್ನನ್ನ ಮರೆತು ಬಿಡು’ಅಂತ ಎಷ್ಟು ಸಲೀಸಾಗಿ ಹೇಳಿಬಿಟ್ಟೇ. ಯಾರಿಗಾಗಿ ಈ ತ್ಯಾಗ.ಅಥವ ನಾನೇನೂ ಗೊಂಬೇನಾ "ನಂಗೆ ಸಾಕು ನೀನು ತಗೋ" ಅನ್ನೋಕೆ?


ನಂಗೂ ಮನಸಿದೆ ಅಂತ ಯಾಕೆ ತಿಳ್ಕೊಳ್ಳಿಲ್ಲ ನೀನು  ಮನಸನ್ನ ಮಾರಾಟ ಮಾಡಕಾಗಲ್ಲ ಕಣೋ ಅದನ್ನೇನಿದ್ರೂ ಗೆಲ್ಲಬೇಕು  ಆ ಗೆಲುವಿನ ಸರದಾರ ನೀನು ಆದರೆ ನನ್ನ ಮನಸನ್ನ ದಾನ ಮಾಡೋ ಹಕ್ಕು  ನಿನಗೆ ಯಾರು ಕೊಟ್ರು?


ನಿನ್ನ ಸ್ನೇಹಿತ ನಂಗೂ ಸ್ನೇಹಿತಾನೆ ನಿಜ ಆದರೆ ಯಾವತ್ತು ಅವನು ನೀನಾಗೋಕೆ ಆಗಲ್ಲ . ಅವನು ನೀನಾದರೆ ನಾನು ನಾನಾಗಿರಲ್ಲ. ಅಷ್ಟೇಕೆ ಈ ಭೂಮಿ ಮೇಲೆ ಇರಲ್ಲ. ಸ್ನೇಹಕ್ಕೋಸ್ಕರ ಪ್ರೀತಿನ ನೀನು ತ್ಯಾಗ ಮಾಡೋದಾದರೆ ಪ್ರೀತಿಗೋಸ್ಕರ ಈ ಜೀವಾನ ನಾನು ತ್ಯಾಗ ಮಾಡ್ತೀನಿ. ಯಾವತ್ತಿದ್ದ್ರೂ ನಾನು ನಿನ್ನವಳು. ನಿನ್ನವಳಾಗದೆ ಇದ್ದರೆ  ಅವನಿಗೆ ಜೊತೆಯಂತೂ ಆಗಲ್ಲ


ಯಾಕೋ ಈ ಮಂಗಾಟ ಎಲ್ಲಾ. ನಿನ್ನ ಫ್ರೆಂಡ್ ಹತ್ರ ಮಾತಾಡ್ತೀನಿ. ನನ್ನ ಮನಸಿನ  ಒಡೆಯ ಕೀರ್ತಿ ಕಣೋ ಮುಂಡೇದೆ ನೀನಲ್ಲ ಯಾಕೋ ನಿಂಗೆ ಎಂಜಲು ಮನಸು  ಅಂತ ಬೈತೀನಿ.


ಖಂಡಿತಾ ಅವನು ಅರ್ಥ ಮಾಡ್ಕೋತಾನೆ. 


ಆಮೇಲೆ ನಮ್ಮಿಬ್ಬರ ಜೀವನದಲ್ಲಿ ಯಾವ ಮುಳ್ಳೂ ಇರೋದಿಲ್ಲ .


ಏನಂತೀಯಾ


ನಿನ್ನವಳೇ


ನಿನ್ನ   ವನೂ

Rating
No votes yet

Comments