" ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,

" ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,

ಕನ್ನಡ ಪುಸ್ತಕಪ್ರಾಧಿಕಾರದವರು ತಮ್ಮ ಮಳಿಗೆಯೊಂದನ್ನು 'ಮುಂಬೈ ನ ಮೈಸೂರ್ ಅಸೋಸಿಯೇಷನ್', ನ ಪ್ರವೇಶದ್ವಾರದ ಬಳಿಯಲ್ಲಿಯೇ ಸ್ಥಾಪಿಸಿದ್ದಾರೆ. ಇಲ್ಲಿ ಉಸ್ತಕ ಪ್ರಾಧಿಕಾರದ ಪುಸ್ತಕಗಳಲ್ಲಾ ಉಪಲಭ್ದವಿದೆ. ಆದರೆ, ಕಲಾಂ ಮೇಷ್ಟ್ರು ಪುಸ್ತಕದ ಬೆಲೆಯನ್ನು ಅತಿ ಕಡಿಮೆ ( ಕೇವಲ ೬೦. ರೂಪಾಯಿ) ಇಟ್ಟಿದ್ದರಿಂದ ಪ್ರಕಟವಾದ ೧,೦೦೦ ಪ್ರತಿಗಳೆಲ್ಲ ಬಿಸಿರೊಟ್ಟಿಯಂತೆ ಖರ್ಚಾಗಿಹೋಗಿವೆ. ಬಹುಶಃ ಎರಡನೆಯ ಆವೃತ್ತಿಯಲ್ಲಿ ದೊರೆಯಬಹುದು. ಪ್ರಯತ್ನಿಸಿ. " ಮನಸ್ಸುಗಳ ಏಕತೆ " ಕಲಾಂ ಮೇಷ್ಟ್ರು-ಲೇಖಕರು :ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು-೫೬೦ ೦೦೨. ಪ್ರಥಮ ಮುದ್ರಣ : ೨೦೦೬. ಪುಟ-೧೨೯. ಯೋಚಿಸುವ, ಚಿಂತಿಸುವ, ಕನಸು ಬಿತ್ತುವ ರಾಷ್ಟ್ರಪತಿ ಸಿಕ್ಕಿದ್ದು ಈ ನಾಡಿನ ಭಾಗ್ಯ... ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜೀವನ ಸಾಧನೆಯನ್ನು ಕುರಿತ ಈ ಕೃತಿಗೆ " ಕಲಾಂ ಮೇಷ್ಟ್ರು " -ಎಂದು ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ.

ಪುಸ್ತಕದ ಕವಚದಮೇಲೆ ಮೂಡಿಸಿರುವ ಪ್ರಾಧಿಕಾರದ ಅನಿಸಿಕೆಗಳು :

ಜಗತ್ತಿನ ಮೊದಲ ವಿಜ್ಞಾನಿ, ಮಗುವೇ ಎಂಬುದು ಕಲಾಂ ಸರ್ ಅವರ ನಂಬಿಕೆ. ಅದಕ್ಕೆ ಅವರು ಕೊಡುವ ಕಾರಣ, ' ವಿಜ್ಞಾನ ಹುಟ್ಟಿದ್ದು ಮತ್ತು ಈಗೂ ಜೀವಂತವಾಗಿರುವುದು ಪ್ರಶ್ನೆಗಳಿಂದ. ವಿಜ್ಞಾನದ ಅಡಿಪಾಯವೇ ಪ್ರಶ್ನೆ ಕೇಳುವುದು. ಕೊನೆಯಿಲ್ಲದಷ್ಟು ಪ್ರಶ್ನೆ ಕೇಳುವವರು ಮಕ್ಕಳೇ, " ಸದಾ ಹಸನ್ಮುಖಿಯಾಗಿ ಮಕ್ಕಳ ನಡುವೆ ಬೆರೆಯುತ್ತಾ, ತಮ್ಮ ವಿಜ್ಞಾನದ ವಿಚಾರ ಹಾಗೂ ಅನುಭವ ಜ್ಞಾನವನ್ನು ಹಂಚಿಕೊಳ್ಳುವ, ಮಾನ್ಯ ರಾಷ್ಟ್ರಪತಿಯವರು ಮಕ್ಕಳಿಗೆ ಮಾತ್ರ, ಪ್ರೀತಿಯ ಕಲಾಂ ಸರ್, ಆಗಿಯೇ ಆಪ್ತರು. " "ರಾಮೇಶ್ವರಂನ ಸಾಮಾನ್ಯಕುಟುಂಬದಲ್ಲಿ ಹುಟ್ಟಿ, ಸತತ ಪರಿಶ್ರಮ ಹಾಗೂ ಪ್ರತಿಭೆಯಿಂದ ಮೇಲೆಬಂದವರು ಡಾ. ಕಲಾಂ. ಇವರ ಕೌಟುಂಬಿಕ ಹಿನ್ನೆಲೆ, ಬಾಲ್ಯ, ವಿದ್ಯಾಭ್ಯಾಸ, ಪುಸ್ತಕ ಪ್ರೀತಿ, ಅಧ್ಯಯನ, ಅಧ್ಯಾಪನ, ಅನ್ವೇಷಣೆ, ಸಂಶೋಧನೆ, ಸಾಧನೆ, ಸಿದ್ಧಿ, -ಹೀಗೆ ಪ್ರತಿಯೊಂದು ವಿಚಾರ್‍ಅಗಳನ್ನೂ ಮಕ್ಕಳ ಮನನಂಬುವಂತೆ ಚಿತ್ರಿಸಿದ್ದಾರೆ, ಡಾ. ರಾಮಕೃಷ್ಣ ಅವರು. ವಿಜ್ಞಾನಕ್ಕೆ ಸಂಬಂಧಿಸಿದ ವಿವರಗಳನ್ನು ಕೊಡುವಾಗಲೂ , ಸಾಮಾನ್ಯರಿಗೂ ಸುಲಭ ಗ್ರಾಹ್ಯವಾಗುವಂತೆ ನಿರೂಪಿಸಿದ್ದಾರೆ. ತಳ ಮೂಲದ ಸಾಮಾನ್ಯ ಬಾಲಕನೊಬ್ಬ, ರಾಷ್ಟ್ರದ ಅತ್ಯುನ್ನತ ಅಧಿಕಾರಕ್ಕೆ ಏರಿದ ಬಗೆಯನ್ನು ನಿರೂಪಿಸುವ ವಿಧಾನ, ಮಕ್ಕಳಲ್ಲಿ ಸ್ಪೂರ್ತಿ ಹಾಗೂ ಸಂಕಲ್ಪಗಳನ್ನು ಬಿತ್ತುವಂತಿದೆ. ಮಾನ್ಯ ರಾಷ್ಟ್ರಪತಿಗಳ ಬದುಕಿನ ಕ್ರಿಯಾಧರ್ಮವನ್ನೂ, ಮುನ್ನೋಟವನ್ನೂ, ಜೊತೆಗೆ ಅವರ ಸಂತ ಭಾವದ ಮಾನವೀಯ ಮಿಡಿತಗಳನ್ನೂ, ಕೆಲವು ಯೋಜನೆಗಳ ವಿವರಗಳನ್ನೂ ಔಚಿತ್ಯವರಿತು, ನಿರೂಪಿಸಿದ್ದಾರೆ. ಇದು ವ್ಯಕ್ತಿ ಚಿತ್ರಣ ಮಾತ್ರವಾಗದೆ, ಅಭಿರುಚಿ- ಆಸಕ್ತಿ- ಅನುಭವಜ್ಞಾನ, ಹಾಗೂ, ಉನ್ನತಭಾವದ ಮಾನವಪ್ರೀತಿ ಮೊದಲಾದ ಪರಿಪೂರ್ಣಾವತಾರಿ ವ್ಯಕ್ತಿತ್ವದ ದರ್ಶನವೂ ಆಗಿರುವುದು, ಈ ಬರಹದ ವಿಶೇಷವಾಗಿದೆ.

'ವಿಜ್ಞಾನವನ್ನು ಜನಮನದಲ್ಲಿ ತರಲು ನಿರಂತರ ಶ್ರಮಿಸುತ್ತಿರುವ ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಭೌತ ಶಾಸ್ತ್ರ ವಿಭಾಗದ ವಿಶ್ರಾಂತ ವಿಜ್ಞಾನಿ ಪ್ರೊ. ರಾಮಕೃಷ್ಣರಾವ್ ಬರೆದ ಸುಂದರ ಕಿರು-ಹೊತ್ತಿಗೆ' :

ಪ್ರೊ. ಎಚ್. ಅರ್. ರಾಮಕೃಷ್ಣರಾವ್ ಅವರು ಈ ಕೃತಿ ರಚನೆಗೆ ತೋರಿಸಿದ ಶ್ರಮ, ಹಾಗೂ ಪ್ರೀತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಗೌರವದಿಂದ, ಸ್ಮರಿಸುತ್ತದೆ. " -ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. ಡಾ. ಕಲಾಂ ರವರು ಸಂದರ್ಶಿಸಿದ, ಕ್ರೈಸ್ತ ಆಶ್ರಮದ ಪರಿಸರ, ಹಾಗೂ ತಮ್ಮ ಚಿಂತನೆ : " ನನ್ನ ಮನಸ್ಸಿನಲ್ಲಿ ಅಳಿಯದೆ ಉಳಿದಿರುವುದು, ನಾನು ಸಂದರ್ಶಿಸಿದ ಕ್ರೈಸ್ತ ಆಶ್ರಮದಲ್ಲಿನ ಅನುಭವ. ಗುಡ್ಡದ ಮೇಲಿನ ಪ್ರಶಾಂತ ವಾತಾವರಣದಲ್ಲಿರುವ ಈ ಆಶ್ರಮದಲ್ಲಿ, ೧೬,೦೦೦ ಗ್ರಂಥಗಳಿವೆ. ಗ್ರಂಥಭಂಡಾರದಲ್ಲಿ, ೧೯ ನೆಯ ಶತಮಾನದ ೧೩೪ ಹಸ್ತಪ್ರತಿಗಳಿವೆ. ಬಲ್ಗೇರಿಯಾದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬದುಕಿನಲ್ಲಿ ಈ ಪವಿತ್ರ ಆಶ್ರಮ ಪ್ರಧಾನ ಪಾತ್ರವಹಿಸಿದೆ. ೧೯ ನೇ ಶತಮಾನದ ಮೊದಲ ಭಾಗದಲ್ಲಿ ಈ ಆಶ್ರಮ ನೆಲಸಮವಾಗಿತ್ತು. ಇದನ್ನು ಮತ್ತೆ ಹಿಂದಿದ್ದಂತೆಯೇ ನಿರ್ಮಿಸಲಾಗಿದೆ. ೮೦ ರಿಂದ ೯೦ ವರ್ಷ ವಯಸ್ಸಿನ ಜ್ಞಾನ ವೃದ್ಧರಾದ ಕ್ರೈಸ್ತ ಪಾದ್ರಿಗಳನ್ನು ನೋಡಿ, ನನಗೂ ಪ್ರಾರ್ಥನೆ ಸಲ್ಲಿಸುವ ಮನಸ್ಸಾಯಿತು. ಅಲ್ಲಿದ್ದ ಹಿರಿಯ ಪಾದ್ರಿಗಳನ್ನು ಸಂತ ಫ್ರಾನ್ಸಿಸ್ ಆಫ್ ಅಸ್ಸಿಸಿ ಅವರ ಪ್ರಾರ್ಥನೆಯನ್ನು ಓದುವಂತೆ, ಕೇಳಿಕೊಂಡೆ. ಆಶ್ರಮದಲ್ಲಿದ್ದವರೆಲ್ಲರೂ, ಪ್ರಾರ್ಥನೆಯನ್ನು ಪಠಿಸಿದರು. ಸಂತ ಫ್ರಾನ್ಸಿಸ್ ಅವರ ಪ್ರಾರ್ಥನಾ ಶ್ಲೋಕ : ದೇವರೇ, ನಿನ್ನ ಶಾಂತಿದೂತನನ್ನಾಗಿ ನನ್ನನ್ನು ಮಾಡು ದ್ವೇಷವಿರುವೆಡೆ ಪ್ರೀತಿ-ಬಿತ್ತುವವನಾಗಲಿ ನಾನು ; ಕೆಡುಕಿದ್ದಲ್ಲಿ, ಕ್ಷಮೆ, ಅಪನಂಬಿಕೆ ಇದ್ದಲ್ಲಿ, ನಂಬಿಕೆ, ಹತಾಶೆ ಇದ್ದಲ್ಲಿ, ಭರವಸೆ, ಕತ್ತಲೆ ಇದ್ದಲ್ಲಿ, ಬೆಳಕು ; ದುಖಃ ಇದ್ದಲ್ಲಿ, ಹರ್ಷ ; ಮೂಡಲಿ. ಯಾಕೆಂದರೆ ಕೊಟ್ಟು ನಾವು ಪಡೆಯುತ್ತೇವೆ ; ಕ್ಷಮಿಸುವುದರಿಂದಾಗಿ ನಾವು ಕ್ಷಮಾರ್ಹರಾಗುತ್ತೇವೆ, ಮರಣದಲ್ಲಿ ನಾವು ಅಮರತ್ವದ ಮರುಹುಟ್ಟು ಪಡೆಯುತ್ತೇವೆ. " ನಾವು ಈವರೆಗೆ ಪಠಿಸಿದ ಸ್ವರ್ಗೀಯವಾದ ಪ್ರೇಮ ಸಂದೇಶ ವಿಶ್ವ ಶಾಂತಿಗೆ ಶ್ರಮಿಸುವ ಶಕ್ತಿ ನಿಮಗೆ ನೀಡಲಿ " ಎಂದು ಅವರು ಆಶೀರ್ವದಿಸಿದರು.

ಡಾ. ಕಲಾಂ ಮಕ್ಕಳನ್ನು ಸಂಬೋಧಿಸಿ ನುಡಿದ ಸಂದೇಶಗಳು :

ಮಕ್ಕಳೇ, ದ್ರಷ್ಟಾರರ ಸುಂದರ ಮನಸ್ಸುಗಳು ಸುಂದರ ರಾಷ್ಟ್ರಗಳನ್ನು ನಿರ್ಮಿಸಿರುವುದನ್ನು, ನದಿಗಳ ಸಂಗಮ ರಾಷ್ಟ್ಗಗಳ ನಡುವೆ ಐಕ್ಯತೆಯನ್ನು , ಸಾಂಸ್ಕೃತಿಕ ಪರಂಪರೆಗಳು ಭೂಖಂಡಗಳ ನಡುವಿನ ಎಲ್ಲೆಗಳನ್ನು ಮೀರಿ ಮನಸ್ಸುಗಳಲ್ಲಿ ಏಕತೆ ಮೂಡಿಸುವುದನ್ನು ಕಂಡಿದ್ದೇನೆ. ಈ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ. ವಿಶ್ವಮಾನವನ ಸಂದೇಶವನ್ನು ನೀವು ಕೂಡ ಎಲ್ಲೆಡೆ ಬಿತ್ತರಿಸಿ. ನಿಮಗೆ ಶುಭವಾಗಲಿ. ***** ***** ****

 

 

 

Rating
No votes yet

Comments