ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ

ಮರೆಗುಳಿ ಪ್ರೊಫೆಸರ್ ನ ಡ್ರೈವಿಂಗ್ ಕಲಿಕೆ

ಇತ್ತೀಚೆಗೆ ಫೋರ್-ವೀಲರ್ ಡ್ರೈವಿಂಗ್ ಕ್ಲಾಸಿಗೆ ಸೇರಿದೆ. (ಅಷ್ಟಕ್ಕೂ ನನಗೆ ಕಾರು ತಗೋಬೇಕು ಅನ್ನೋ ಆಸೆ ಸಧ್ಯಕ್ಕಂತೂ ಇಲ್ಲ. ಆದರೂ ಒಂದು ವಿದ್ಯೆ ನನ್ನ ಜೊತೆ ಇರ್ಲಿ ಅಂತ!.) ಒಂದೆರಡು ಗಂಟೆ ಇನ್ನೊಬ್ಬರ ಸಹಾಯದ ಜೊತೆ ಡ್ರೈವಿಂಗ್ ಮಾಡ್ತಾ ಮಾಡ್ತಾ ನನಗೆ ಅನ್ನಿಸುತ್ತ ಇರೋದು .. ನಾನೊಬ್ಬ ಯಶಸ್ವೀ ಡ್ರೈವರ್ ಆಗಲು ಸಾಧ್ಯವೇ ಇಲ್ಲ ಅಂತ.:)

ಇದಕ್ಕೆ ಕಾರಣ ನನ್ನ "absent-mindedness". ಗಮನ ಆಕ್ಸೆಲೆರೆಟರ ಮೇಲೆ ಹೋದರೆ... ಅದ್ರ ಮೇಲೇನೆ ..ಬ್ರೇಕ್ ಮರ್ತೆ ಬಿಟ್ಟಿರ್ತೀನಿ..ಸಹಾಯಕ ಹೇಳೋವರ್ಗೂ. ಬಲ ಕನ್ನಡಿ ನೋಡ್ತಾ ಇದ್ರೆ ಎಡ ಕನ್ನಡಿ ನೋಡದೇ ಮರ್ತು ಹೋಗುತ್ತೆ... ಕೆಲವೊಮ್ಮೆ ಮುಂದು ನೋಡೋದು ಮರ್ತೊಗುತ್ತೆ. ಇನ್ನೂ ಗೇರ್ ವರ್ಗೂ ಬಂದಿಲ್ಲ. ಅಲ್ಲಿಗೆ ಬಂದ್ ಮೇಲೆ ಇನ್ನೆಷ್ಟು ಪಜೀತಿನೋ... ಎಲ್ರಿಗೂ ಹೀಗೇನ?

ಹಿಂದೊಮ್ಮೆ ಪ್ರೈಮರಿ ಸ್ಕೂಲ್ ದಿನಗಳಲ್ಲಿ ನಾನು ಈಜು ಕಲಿತ್ತಿದ್ದು ಸಹ ವಿಚಿತ್ರವಾಗಿ. ಆಗ ನನ್ನನ್ನು ಯಾರೋ ಭಾವಿ ಮೇಲಿಂದ (೨೦-೨೫ ಅಡಿ ಇತರ ಇರಬಹುದು) ದಬ್ತ ಇರ್ತ ಇದ್ರು. ಕೆಲವೊಮ್ಮೆ ನಮಗೆ ಗೊತ್ತಾಗ್ತಾ ಇರ್ಲಿಲ್ಲ... ಯಾರು/ಯಾವಾಗ ದಬ್ಬಿದ್ರು ಅಂತ. ನೀರಿಗೆ ಬಿದ್ದ ಮೇಲೆ ನಾನಂತೂ ಕಣ್ಣು- ಬಾಯಿ ಮುಚ್ಚಿಕೊಂಡು ಕಾಲು ಕೈ ಹೊಡೆದಿದ್ದೋ ಹೊಡೆದಿದ್ದು. ತಾಳ ಇರ್ಲಿಲ್ಲ ಶೃತಿ ಇರ್ಲಿಲ್ಲ. ಸುಮ್ನೆ ಹೊಡಿಯದು ಅಷ್ಟೆ ... ನಂತರ ನಾನೇ ದುಮುಕಕ್ಕೆ ಶುರು ಮಾಡಿದೆ... ಸ್ನೇಹಿತರು ದಡಕ್ಕೆ ಏಳಕೊಲ್ತಾ ಇರ್ತ ಇದ್ರು... ಹೀಗೆ ಮುಂದೊಮ್ಮೆ ಯಾವಗಲೋ ಈಜು ಬಂತು.... ಹೆಂಗೆ ಬಂತೋ ಗೊತ್ತಿಲ್ಲ.

ಸೈಕಲ್ಲು ಕಲ್ತಿದ್ದು ವಿಚಿತ್ರವಾಗಿಯೇ! ಅದೂ ತುಂಬಾ ಲೇಟಾಗಿ!! ನಮ್ಮ ಮಾಮ ನನಗೆ ಸೈಕಲ್ಲಿ ಕಲಿಸಕ್ಕೆ(?) ೩೦೦ ರೂಪಾಯಿ ಕೊಟ್ಟು ಅಟ್ಲಾಸ್ ಸೈಕಲ್ಲು ತಗೊಂಡಿದ್ದ. ಅದರ ಮೇಲೆ ನನ್ನ ಹತ್ತಿಸಿ ಡಬ್ಬಿ ಬಿಡ್ತಾ ಇದ್ದ... ನಾನು ಮುಂದೆ ಅಲ್ಲೋ ಹೋಗಿ ಬೀಳ್ತಾ ಇದ್ದೆ... ಅಷ್ಟೆ ಮತ್ತೆ ಯಾವಗಲೋ ಸೈಕಲ್ಲು ಹೊದೆಯಕ್ಕೆ ಬಂತು... ಸೈಕಲ್ಲು ಎಕ್ಕುಟ್ಟಿ ಹೋಯ್ತು!.

ನಾನು ಬೈಕು ಕಲಿತಿದ್ದು.... ಇನ್ನೂ ವಿಚಿತ್ರವಾಗಿ.... ಮತ್ತೆ ಸೇರಿಸ್ತೀನೀ... ಮನೆಗೆ ಹೋಗೋ ಟೈಮ್ ಆಯ್ತು!. ಬೆಂಗಳೂರಿನಲ್ಲಿ ಬೈಕು ಓಡಿಸಕ್ಕೆ ಯಾಕೋ ಎದ್ರುತೀನಿ. ಹೆದರಿಕೆ ಅಂದ್ರೆ ಏನು ಅಂತ ಕೇಳ್ತಾ ಇದ್ದ ನಾನು ಕಳೆದೆರಡು ವರ್ಷಗಳಿಂದ ಬೆಂಗಲ್ಲೋರಿನ ಟ್ರಾಫಿಕ್ ಗೆ ಎದ್ರುತ ಇದೀನಿ. ಯಾಕೆ ಅಂದ್ರೆ ನನ್ನಲ್ಲಿ ಇರುವ absent-minded ತನಕ್ಕೆ.

ನೋಡೋಣ ಎಷ್ತುಮಟ್ಟಿಗೆ ಡ್ರೈವಿಂಗ್ ಕಲೀತೀನಿ ಅಂತ!!

Rating
No votes yet