ಮಳೆ .

ಮಳೆ .

ಜಿಟಿ - ಜಿಟಿ ಜಿಟಿ - ಜಿಟಿ ಮಳೆಯು ಬರುತಿದೆ ,
ನೆಲವು ನೆಂದು ಹಸಿದ ಮಣ್ಣಿನ ಸುವಾಸನೆಯು ತರುತಿದೆ ;
ವರುಷದ ಮುಂಗಾರಿನ ಸೂಚನೆಯು ಇದಾದರೆ ,
ಹರುಷದ ಅಲೆಯ ಮೇಲೆ ಸವಾರಿ ಇದಕೆ ಕಾದರೆ .

ಸೂರ್ಯನ ಕೆಚ್ಚಿಗೆ ಬೇಸಿಗೆಯ ಬೆಚ್ಚಿಗೆ ಎಲ್ಲವನ್ನು  ಅದುವೇ ತಣಿಸಿತು ,
ಜಿಟಿ - ಜಿಟಿ ಮಳೆಯು ಸುತ್ತ ತಂಪುಗೊಳಿಸಿತು .
ಇದಕೆ ಕಾದು ಕುಳಿತ್ತಿದ್ದ ಹಸಿರು ಚಿಗುರು ಒಡೆಯಿತು ,
ವರುಣ ಕೃಪೆಗೆ ಹಸಿರು ತಲೆಯ ಬಾಗಿತು .

ಬಣ್ಣ ಬಣ್ಣ ಸಣ್ಣ ಸಣ್ಣ ಹೂವು ಅರಳಿತು ,
ಹುಟ್ಟಿದ ಗಿಡಕೆ ಮನೆಯ ಅಂದಕೆ ಚಂದವ ತಂದಿತು .
ಮೋಡ ಕವಿದು ರವಿಯ ತಡೆದು ಸಿಡಿಲು ಸಿಡಿದು ಗುಡುಗಿತು ,
ಇಂದ್ರದೇವನ ಕತ್ತಿ ವರಸೆ ಎಂದು ಅಜ್ಜಿ ಹೇಳಿತು .
ಮರಕೆ ಮಳೆಗೆ ಮಳೆಗೆ ಮರಕೆ ಪ್ರೀತಿ ಏಂದು ತಿಳಿಯಿತು ,
ಮರವ ಉಳಿಸು , ಹಸಿರು ಹರಿಸು ಎಂದು ಹನಿಯು ಕೂಗಿತು .

Rating
No votes yet