ಮಾತೊಂದ ಹೇಳುವೆ ಗೆಳತಿ

ಮಾತೊಂದ ಹೇಳುವೆ ಗೆಳತಿ

ಮಾತೊಂದ ಹೇಳುವೆ ಗೆಳತಿ
ಬರಿಯ ಮಾತು ಇದಲ್ಲ
ಬದುಕು ಕೊಟ್ಟ ಅತಿ ದೊಡ್ಡ ಉಡುಗೊರೆ ನೀನು
ಬರಿಯ ಹೊಗಳಿಕೆ ಇದಲ್ಲ
ಇನ್ನು ಕನಸು ಕಾಣಬಾರದು ಎಂದು
ಕಣ್ಣ ರೆಪ್ಪೆ ಮುಚ್ಚಿ ಕೂತಿದ್ದ ನನಗೆ
ನಗಲು ಕಲಿಸಿದವಳು, ಕನಸ ಕಾಣಿಸಿದವಳು
ಬರಿಯ ಕನಸು ಇದಲ್ಲ

ಅದೊಮ್ಮೆ ನನ್ನಿಂದ, ನನ್ನೊಡನೆ ನೀ ನಕ್ಕಾಗ
ನನ್ನ ಜೀವನ ಪಾವನವಾದಂತೆ
ಬರಿಯ ಮೋಹ ಇದಲ್ಲ
ಅ ನಿನ್ನ ಚಂದದ ಮೊಗವನ್ನು
ಕೊನೆಯವರೆಗೆ ನೋಡುವ ಅಸೆ
ಬರಿಯ ಸ್ವಾರ್ಥ ಇದಲ್ಲ
ಹೀಗೆ ಮರೆತು ಹೋದಂತಿರುವ ಕವಿತೆಗಳ
ಸಾಲುಗಳನ್ನು ನೆನಪಿಗೆ ತರುವ, ನೀನು,
ಬರಿಯ ಪ್ರೇಮ ಇದಲ್ಲ 

Rating
No votes yet