ಮಾಯಾದ್ವೀಪ - ಜಾನಪದ ಕಥೆ - ಭಾಗ ೨

ಮಾಯಾದ್ವೀಪ - ಜಾನಪದ ಕಥೆ - ಭಾಗ ೨


ವಿಕಟಾಕ್ಷ ಕೇಳಿದ ಪ್ರಶ್ನೆಗೆ ಮಾಯಾಕನ್ನಡಿ ಕೊಟ್ಟ ಉತ್ತರ ವಸಂತಪುರದ ಅರಮನೆಯನ್ನು ತೋರಿಸಿ ನಂತರ ಒಂದು ಮಗುವಿನ ಅಸ್ಪಷ್ಟ ಚಿತ್ರವನ್ನು ತೋರಿತು. ವಿಕಟಾಕ್ಷನ ನಗು ಆ ಗುಹೆಯ ತುಂಬಾ ಪ್ರತಿಧ್ವನಿಸಿತು.
ಇತ್ತ ಅರಮನೆಯಲ್ಲಿ ವೀರಪ್ರತಾಪನ ಸಂತಸಕ್ಕೆ ಕೊನೆಯೇ ಇರಲಿಲ್ಲ. ಈ ಸಮಯದಲ್ಲಿ ಹಣ್ಣನ್ನು ಕೊಟ್ಟ ಪಂಡಿತರನ್ನು ಸತ್ಕರಿಸಬೇಕೆಂದು ಹಾಗೆಯೇ ಹುಟ್ಟಿದ ಎರಡೂ ಹೆಣ್ಣು ಮಕ್ಕಳು ಅದರಲ್ಲಿ ಯಾರು ಮುಂದೆ ಈ ಪ್ರಾಂತವನ್ನು ಆಳುವವರು ಎಂಬ ಸಂಶಯವನ್ನು ನಿವಾರಿಸಿಕೊಳ್ಳಬೇಕೆಂದು ಆ ಪಂಡಿತರಿಗೆ ಆಹ್ವಾನ ಕಳಿಸಲು ಮಂತ್ರಿಗೆ ಹೇಳಿದ. ಆದರೆ ಆ ಪಂಡಿತರು ಒಂದು ಕಡೆ ಇರುವವರಲ್ಲ ಸದಾಕಾಲ ಸಂಚಾರದಲ್ಲಿ ಇರುವವರು. ಹಾಗಾಗಿ ಪ್ರಸ್ತುತ ಪಂಡಿತರು ಎಲ್ಲಿದ್ದಾರೆಂದು ತಿಳಿದುಕೊಳ್ಳಲು ಆಗಲಿಲ್ಲ. ಮುಂದೆ ಎಂದಾದರೂ ಅವರ ಸುಳಿವು ಸಿಕ್ಕಲ್ಲಿ ನಮ್ಮ ಆಹ್ವಾನ ತಿಳಿಸಿಬಿಡಿ ಎಂದು ಹೇಳಿದನು ವೀರಪ್ರತಾಪ.
ಹುಟ್ಟಿದ ಎರಡೂ ಮಕ್ಕಳು ಲವಲವಿಕೆಯಿಂದ ಆಟವಾಡುತ್ತ ಕಾಲ ಕಳೆಯುತ್ತಿತ್ತು. ಮೂರು ತಿಂಗಳ ನಂತರ ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಆಯೋಜಿಸಿದನು. ಸುತ್ತಮುತ್ತ ಪ್ರಾಂತಗಳಿಗೆ ಆಹ್ವಾನ ಕಳುಹಿಸಲಾಯಿತು. ಅಂದು ವಸಂತಪುರ ಎಲ್ಲೆಡೆ ತಳಿರು ತೋರಣಗಳಿಂದ ಸಿಂಗರಿಸಿ ನಲಿದಾಡುತ್ತಿತ್ತು. ಈ ವಿಷಯದ ಸುಳಿವನ್ನು ಅರಿತ ವಿಕಟಾಕ್ಷ ಒಮ್ಮೆ ತನ್ನ ಕಾರ್ಯಸಿದ್ಧಿಗಾಗಿ ಹುಟ್ಟಿರುವ ಆ ಮಗುವನ್ನು ನೋಡಿಕೊಂಡು ಬರಬೇಕೆಂದು ನಿರ್ಧರಿಸಿದನು. ಅರಮನೆಯ ಹೊರಗಿನ ಮೈದಾನದಲ್ಲಿ ದೊಡ್ಡದಾದ ಸಭಾಂಗಣವನ್ನು ನಿರ್ಮಿಸಿ ಬಂದ ಅತಿಥಿಗಳಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇನ್ನೇನು ಮಹೂರ್ತದ ಸಮಯ ಅತಿಥಿಗಳು ಆಗಮಿಸುತ್ತಿದ್ದರು. ರಾಜ ತನ್ನ ಇಬ್ಬರು ಮಡದಿಯರು ಹಾಗೂ ಮಕ್ಕಳ ಜೊತೆ ಹಸೆಯ ಮೇಲೆ ಕುಳಿತಿದ್ದಾನೆ ಮಂತ್ರಘೋಷಗಳು ಮುಗಿಲು ಮುಟ್ಟುತ್ತಿದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿ ತಳಿರು ತೋರಣ ಗಳೆಲ್ಲ ನೆಲಕ್ಕೆ ಉರುಳಿದವು, ಸುತ್ತಲೂ ಕತ್ತಲು ಅವರಿಸತೊಡಗಿತು, ವೀರಪ್ರತಾಪ ಕಂಗಾಲಾಗಿ ಏನಾಗುತ್ತಿದೆ ಎಂದು ನೋಡುತ್ತಿದ್ದಾನೆ. ಇದಕ್ಕೆಲ್ಲ ಕಾರಣನಾದ ವಿಕಟಾಕ್ಷ ಮಾಯಾ ರೂಪದಲ್ಲಿ ಗಹಗಹಿಸಿ ನಗುತ್ತಿದ್ದವನು ಇದ್ದಕ್ಕಿದ್ದಂತೆ ಶಾಂತನಾದ. ಅಲ್ಲಿನ ವಾತಾವರಣವೂ ತಿಳಿಗೊಂಡಿತು. ವಿಕಟಾಕ್ಷನಿಗೆ ಅಲ್ಲಿದ್ದ ಇಬ್ಬರು ಮಕ್ಕಳಲ್ಲಿ ಬಲಿಯಾಗುವ ಮಗು ಯಾವುದೆಂದು ಗೊಂದಲ ಉಂಟಾಗಿ ಮತ್ತೆ ಪ್ರಶ್ನೆ ಕೇಳಲು ತನ್ನ ಗುಹೆಗೆ ಮರಳಿದ. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾದ ಕಾರಣ ಗೊತ್ತಾಗದೆ ಸುಮ್ಮನೆ ಸಮಾರಂಭವನ್ನು ಮುಂದುವರಿಸಿದರು. ತ್ರಿಪುರಾದೇವಿಯ ಮಗಳಿಗೆ "ಹಂಸಾನಂದಿನಿ" ಎಂದೂ ಅಂಬಿಕಾದೇವಿಯ ಮಗಳಿಗೆ "ಮೇಘನಂದಿನಿ" ಎಂದೂ ನಾಮಕರಣ ಮಾಡಿದರು.   
ವಿಕಟಾಕ್ಷಮತ್ತೆಗುಹೆಗೆಮರಳಿಮಾಯಾಕನ್ನಡಿಯಮುಂದೆನಿಂತುತನ್ನ ಕಾರ್ಯ ಸಿದ್ಧಿಗಾಗಿಹುಟ್ಟಿರುವಮಗುಯಾವುದೆಂದುಕೇಳಿದ. ಮತ್ತದೇಅರಮನೆಯಚಿತ್ರಹಾಗೆಮಗುವಿನಅಸ್ಪಷ್ಟಚಿತ್ರಗೋಚರವಾಯಿತುಈಗ ವಿಕಟಾಕ್ಷಉಗ್ರನಾದವಿಗ್ರಹದಮುಂದೆಹೋಗಿಮಾತಾಏನಿದುಪರೀಕ್ಷೆ ನಿನಗಾಗಿ ಬಲಿಕೊಡಬೇಕೆಂದಿರುವಮಗು ಯಾವುದು ? ಎಂದುಕಿರುಚಿದ. ಮತ್ತೆ ಮೊಳಗಿದ ಅಶರೀರ ವಾಣಿ  ವಿಕಟಾಕ್ಷ ಮಗು ಎಲ್ಲಿರುವುದು ಎಂದು ತೋರಿಸಿದ್ದೇನೆಇನ್ನು ಅದು ಯಾವುದು ಎಂದು ಪತ್ತೆ ಹಚ್ಚಿ ಬಲಿ ಕೊಡುವುದು ನಿನ್ನ ಕೆಲಸಅದೂ ಅಲ್ಲದೇ ನಿನಗೆ ೧೮ ವರ್ಷ ಕಾಲಾವಕಾಶ ಇದೆಅಷ್ಟರಲ್ಲಿ ಮಗು ಯಾವುದೆಂದುಪತ್ತೆ ಹಚ್ಚುಎಂದು ಹೇಳಿತುಇದರಿಂದ ಮತ್ತಷ್ಟು ಉಗ್ರನಾದವಿಕಟಾಕ್ಷ ತನ್ನ ಕೈ ಅಳತೆಯಲ್ಲಿ ಏನೇನು ಸಿಗುವುದೋ ಎಲ್ಲವನ್ನೂ ಎತ್ತಿ ಬಿಸಾಡುತ್ತಿದ್ದಹೀಗೆ ಬಿಸಾಡುವಾಗತನ್ನಕೈಯಿಂದಲೇ ಹಾರಿದ ಬುರುಡೆಯೊಂದು  ಮಾಯಾ ಕನ್ನಡಿಗೆ ಬಿದ್ದು ಅದು ಒಡೆದು ಹೋಯಿತುವಿಕಟಾಕ್ಷ ಕಂಗಾಲಾಗಿ ಹೋದ ಏಕೆಂದರೆ  ಮಾಯಾ ಕನ್ನಡಿ ಒಂದು ಸಲ ಭಿನ್ನವಾದರೆಅದು ಮತ್ತೆಂದೂ ಪ್ರಯೋಜನಕ್ಕೆ ಬರುವುದಿಲ್ಲ ಎಂದುತನ್ನ ಗುರುಗಳು ಹೇಳಿದ್ದು ನೆನಪಾಯಿತುತನ್ನತಪ್ಪಿನಅರಿವಾಗಿಶಾಂತನಾದ. ಇನ್ನು ಹದಿನೆಂಟುವರ್ಷಕಾಯುವುದಬಿಟ್ಟರೆತನಗೆ ಬೇರೆದಾರಿಯೇಇಲ್ಲವೆಂದುಹಪಹಪಿಸುತ್ತಿದ್ದ

ಕಾಲಚಕ್ರ ಉರುಳಿತ್ತಿದ್ದಂತೆ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದರು. ಹಂಸಾನಂದಿನಿ ಹಾಗೂ ಮೇಘನಂದಿನಿ ಇಬ್ಬರೂ ರೂಪವತಿಯರೇ ಆಗಿದ್ದರೂ ಹಂಸಾನಂದಿ ಅಪ್ರತಿಮ ಸುಂದರಿಯಾಗಿದ್ದಳು . ವೀರಪ್ರತಾಪನಿಗೆ  ಮಾತ್ರ ಗೊಂದಲ ಇನ್ನೂ ಉಳಿದೆ ಇತ್ತು. ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ಮದುವೆಯ ಮಾಡಬೇಕೆಂದು ಮಡದಿಯರು ರಾಜನ ಬಳಿ ಪ್ರಸ್ತಾಪಿಸಿದಾಗ ರಾಜನು ಹಾಗೆಯೇ ಆಗಲಿ ಒಮ್ಮೆ ಪಂಡಿತರ ಬಳಿ ಕೇಳಿ ಸ್ವಯಂವರ ಏರ್ಪಡಿಸೋಣ ಎಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಸೈನಿಕ ಮಹಾಪ್ರಭು ಅಂದು ನಿಮಗೆ ಹಣ್ಣು ನೀಡಿದ ಆ ಪಂಡಿತರು ಇಲ್ಲೇ ಪಕ್ಕದ ವಿಜಯಪುರ ಪ್ರಾಂತಕ್ಕೆ ಆಗಮಿಸಿದಾರೆಂದು ಸುದ್ದಿ ಬಂದಿದೆ. ಕೂಡಲೇ ರಾಜನು ಮಂತ್ರಿಯನ್ನು ಕರೆಸಿ ಮಂತ್ರಿಗಳೇ ತಾವೇ ಖುದ್ದಾಗಿ ಹೋಗಿಪಂಡಿತರನ್ನು ನಮ್ಮ ಆಸ್ಥಾನಕ್ಕೆ ಆಹ್ವಾನಿಸಬೇಕೆಂದು ಹೇಳಿದನು.

ರಾಜನ ಆಹ್ವಾನದ ಮೇರೆಗೆ ಆಸ್ಥಾನಕ್ಕೆ ಆಗಮಿಸಿದ ಪಂಡಿತರು ರಾಜನಿಗೆ ಸಂತಾನ ಆಯಿತೆಂದು ತಿಳಿದು ಸಂತೋಷಗೊಂಡರು. ಕೂಡಲೇ ರಾಜ ತನ್ನಗೊಂದಲವನ್ನು ತಿಳಿಸಿದ. ಪಂಡಿತರು ಇದರಲ್ಲಿ ಕಳವಳಗೊಳ್ಳುವ ಅಗತ್ಯವಿಲ್ಲ. ಸತ್ಯವನ್ನು ಕ್ಷಣಮಾತ್ರದಲ್ಲಿ ತಿಳಿಸುವೆ ಕರಿ ನಿಮ್ಮಿಬ್ಬರು ಮಕ್ಕಳನ್ನು ಎಂದ.
ಕೂಡಲೇ ಇಬ್ಬರು ಮಕ್ಕಳು ಪಂಡಿತರ ಮುಂದೆ ಬಂದರು. ಪಂಡಿತರು ಕೆಲಕಾಲ ಗಮನಿಸಿ ರಾಜನನ್ನು ಪ್ರತ್ಯೇಕವಾಗಿ ಕೋಣೆಗೆ ಕರೆದೊಯ್ದು ನಿನ್ನ ಎರಡನೆ ಹೆಂಡತಿಯ ಮಗಳು ಅಲ್ಪಾಯುಷಿ ಎಂದರು. ರಾಜನಿಗೆ ಕ್ಷಣಕಾಲ ಏನು ಹೇಳಬೇಕೆಂದು ತೋಚದೆ ಸುಧಾರಿಸಿಕೊಂಡು ಮಹಾಸ್ವಾಮಿ ಆದರೆ ಇಬ್ಬರೂ ನೀವು ತಿಳಿಸಿದ ಸಮಯದಲ್ಲೇ ಹಣ್ಣನ್ನು ಸ್ವೀಕರಿಸಿದೆವು ಎಂದು ಹೇಳಿದರು. ಅದಕ್ಕೆ ಪಂಡಿತರು ನಿನ್ನ ಮಡದಿ ಅಂಬಿಕಾದೇವಿ ನಿನಗೆ ಸುಳ್ಳು ಹೇಳಿದ್ದಾಳೆ. ಇನ್ನೂ ಕೆಲವೇ ದಿನಗಳಲ್ಲಿ ನಿನಗೆ ಸತ್ಯದ ಅರಿವಾಗುವುದು. ಆಗ ರಾಜನಿಗೆ ದಿಕ್ಕೇ ತೋಚದೆ ಮಹಾಸ್ವಾಮಿ ಇದಕ್ಕೆ ಪರಿಹಾರವಿಲ್ಲವೇ ಎಂದಾಗ ವಿಧೀನಿಯಮವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದುಬಿಟ್ಟರು. ಆಗ ರಾಜ ನೋಡೋಣ ಎಂದುಕೊಂಡು ಮಹಾಸ್ವಾಮಿ ನನ್ನ ಮಕ್ಕಳಿಗೆ ಮದುವೆ ಮಾಡಬೇಕು ಎಂದುಕೊಂಡಿದ್ದೇನೆ. ಸ್ವಲ್ಪ ಇಬ್ಬರ ಜಾತಕವನ್ನು ನೋಡಿ ಯಾವುದು ಸೂಕ್ತ ಸಮಯ ಎಂದು ತಿಳಿಸುವಿರಾ ಎಂದಾಗ ಪಂಡಿತರು ಇಬ್ಬರು ಮಕ್ಕಳಿಗೆ ಮದುವೆಯಾ ? ಒಬ್ಬಳು ಅಲ್ಪಾಯುಷಿ ಎಂದು ಗೊತ್ತಿಲ್ಲವೆ? ಸರಿ ಜಾತಕವನ್ನು ತೆಗೆದುಕೊಂಡು ಬಾ ಎಂದರು. ಇಬ್ಬರ ಜಾತಕವನ್ನು ಪರಿಶೀಲಿಸಿ ನಿನ್ನ ಮೊದಲನೆಯ ಹೆಂಡತಿ ಮಗಳಿಗೆ ಈಗಲೆ ಕಂಕಣಭಾಗ್ಯವಿಲ್ಲ. ಇನ್ನೂ ಒಂದು ವರ್ಷ ಕಳೆದ ಮೇಲೆ ಆಕೆಗೆ ಹದಿನೆಂಟು ವರ್ಷ ತುಂಬುವುದು ಆಗ ಆಕೆಗೆ ಸೂಕ್ತ ಸಮಯ. ಇನ್ನೂ ನಿನ್ನ ಎರಡನೆ ಮಡದಿಯ ಮಗಳಿಗೆ ಕಂಕಣಭಾಗ್ಯ ಈಗಲೆ ಇದೆ. ಆದರೆ ತಿಳಿದು ತಿಳಿದು ಒಬ್ಬ ಹುಡುಗನಿಗೆ ಮೋಸ ಮಾಡುವುದು ಸರಿ ಎಂದು ನಿನಗೆ ತೋರುತ್ತಿದೆಯೇ ಎಂದು ಕೇಳಿ ತಮ್ಮ ಸತ್ಕಾರವನ್ನು ಸ್ವೀಕರಿಸಿ ಹೊರಟು ಹೋದರು.

 


ಮುಂದುವರಿಯುವುದು.....

 

Rating
No votes yet