ಮುಂಬೈ : ಪ್ರಶ್ನೆಗಳು?

ಮುಂಬೈ : ಪ್ರಶ್ನೆಗಳು?

ಮೊನ್ನೆ ನಡೆದ ದಾರುಣಹೋಮ ನಿಜವಾಗಿಯೂ ನಡೀತೆ? ಯಾತಕ್ಕಾಗಿ ನಡೀತು? ಮುಂಬೈ ಮ್ಯಾಲೆ ಆತಂಕವಾದಿಗಳ ದಾಳಿ ನನ್ನಲ್ಲಿ ಹುಟ್ಟಿಸಿದ ಪ್ರಶ್ನೆಗಳು. ನಿಮಗೆ ಉತ್ತರ ಗೊತ್ತಿದ್ದರೆ ಹೇಳಿ, ಅಥವಾ ನಿಮ್ಮ ಪ್ರಶ್ನೆಗಳನ್ನೂ ಸೇರಿಸಿ. ಈ ಭೀಕರ ಕ್ರಿತ್ಯ ಏಕೆ ನಡೀತು ಅನ್ನೊದಾದ್ರೂ ತಿಳಿಲಿ.

1) ನಡೆದ ಘಟನೆಗೆ ಜವಾಬ್ದಾರಿ ತಗೊಂಡ ಡೆಕ್ಕನ್ ಮುಜಾಹಿದಿನ್, ದಾಳಿಗೆ ಕಾರಣ ಎನು ಅಂತ ತಿಳಿಸಿದೆಯಾ?
2) ಅವರದ್ದು ಏನಾದರೂ ಬೇಡಿಕೆಗಳಿದ್ದವಾ? ಇದ್ದರೆ ೩ ದಿನಗಳ ಕಾಲ ಅಮಾಯಕ ಜನರನ್ನ ಬಂಧಿಸಿಟ್ಟಿದ್ರಲ್ಲ, ಆವಾಗ ಏಕೆ ಅದರ ಬಗ್ಗೆ ಯಾರೂ ಏನೂ ವಿಚಾರ್ಸ್ಲಿಲ್ಲ?
3) ಮಾತುಕತೆ ಮಾಡುವ ಪ್ರಯತ್ನವಾದರೂ ನಡಿತಾ?
4) ನೌಕದಳ ರಾತ್ರಿ ವ್ಯಾಳೆ ಏಕೆ ಹೋಟೆಲಿನ ಒಳಗೆ ನುಗ್ಗೊ ಪ್ರಯತ್ನ ಮಾಡ್ಲಿಲ್ಲ? ರಾತ್ರಿ ದಾಳಿ ಅವರ ವೈಶಿಷ್ಟ್ಯ ತಾನೆ?
5) ೩ ದಿನದ ತನಕ ಆ ಆತಂಕಕೋರರು ತಮ್ಮನ್ನು ತಾವು ೩ಕ್ಕಿಂತ ಹೆಚ್ಚು ಸೇನಾದಳಗಳಿಂದ ಸತತವಾಗಿ ಹೇಗೆ ರಕ್ಸಿಸಿಕೊಂಡ್ರು?
6) ಯಾಕೆ ಇಂಟೆರ್ಪೊಲ್ ಮೋದಲೆ ವರದಿ ಮಾಡಿದ್ರೂ ದಾಳಿಯ ಬಗ್ಗೆ ಯಾರೂ ತಲೆ ಕೆಡಸ್ಕೊಳ್ಳದೆ ಇಗ ಯಾರನ್ನೂ ಬಿಡೊದಿಲ್ಲ ಅಂತ ಗಂಟಲ ಒಣಗಿಸ್ಕೊತಾ ಇದ್ದಾರೆ?
7) ಹೋಟೆಲ್ ನಲ್ಲಿ ವಿದೇಶಿಗಳ ಮೇಲೆ ಆತಂಕಕೋರರ ದ್ರಿಷ್ಟಿ ಇದ್ದರೆ, ರೈಲ್ವೆ ನಿಲ್ದಾಣದಲ್ಲಿ ಜನಸಾಮಾನ್ಯರ ಮೇಲೆಕೆ ಗುಂಡು ಹಾರಿಸಿದ್ರು?

Rating
No votes yet

Comments