"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!

"ಮುಡಿಯಾಧಾಧು ಎದುಂ ಇಲ್ಲಯ್ " ರಜನಿ !!!
"ಅಸಾಧ್ಯ ಯಾವುದೂ ಇಲ್ಲಾ" ರಜನಿ.
೧೯೪೭ ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಲು ಸತ್ಯಾಗ್ರಹ ಕಾರಣವಲ್ಲ ಬದಲಾಗಿ ೧೯೪೯ ರಲ್ಲಿ ಈ ದೇಶದ ನಾಯಕನ ಜನ್ಮವಾಗಲಿರುವುದು ಅವರಿಗೆ ಎರಡು ವರುಷ ಮೊದಲೇ ಗೊತ್ತಿತ್ತು.

ಹೊಸದಾಗಿ ಅನುಮೋದನೆಯಾದ ಭಾರತಿಯ ರುಪಾಯಿಯ ಚಿನ್ನೆ ಅಸಲಿಗೆ ರಜನಿಯ ಸೈನ್.

ಶಾಲೆಯಲ್ಲಿ ೧/೦ ಎಷ್ಟು ಎಂದೂ ಕೇಳಿದಕ್ಕೆ ರಜನಿ "ನನಗ್ಗೊತ್ತಿಲ್ಲಾ .."ಅಂದಿದಕ್ಕೆ ಇಂದೂ ಅದು  "not defined "  !!!

ಬಂದ ಸುದ್ದಿಯ ಪ್ರಕಾರ ರಜನಿ ಗೆ ನಿನ್ನೆ ಗುಂಡು ಹೊಡೆಯಲಾಗಿತ್ತು , ಇಂದೂ ಅವರ ದೇಹದಲ್ಲಿದ್ದ ಗುಂಡಿನ ಅಂತ್ಯಸಂಸ್ಕಾರ ನಡೆಯುತ್ತಿದೆ.

ದೇವರು ಉದ್ಗರಿಸುವಾಗ ಏನೆನ್ನುತ್ತಾರೆ ????






"ಓಹ್  ರಜನಿ ...."



ಭಾರತೀಯ ತೆರಿಗಾ ಇಲಾಖೆ ಇವರ ಎಲ್ಲಾ ತೆರಿಗೆಯನ್ನು ವಜಾ ಮಾಡಿದೆ, ಈಗ ಇಲಾಖೆಯೇ ಇವರಿಗೆ ತೆರಿಗೆ ಪಾವತಿಸುತ್ತಿದೆ.


ರಜನಿಕಾಂತ್ ಹೊರ ಹೋಗಬೇಕಾದರೆ ಸನ್ ಗ್ಲಾಸ್ಸ್ ಹಾಕಲು ಕಾರಣ , ಅವರ ತೆಜಸ್ಸಿಂದ ಸೂರ್ಯ ಸುಟ್ಟು ಹೋಗದಿರಲು.

 
Mc Donald ನಲ್ಲಿ ಇಡ್ಲಿ  ಆರ್ಡರ್ ಮಾಡಿ ಸಾಂಬಾರ್ ನೊಂದಿಗೆ ಸವೆದ ಮೊದಲ ವ್ಯಕ್ತಿ.


ಒಮ್ಮೆ ಬಾಸ್ಕೆಟ್ ಬಾಲ್ ಆಟಗಾರ "ನನ್ನಂತೆ ನೀವು ೫ ನಿಮಿಷ ನಿಮ್ಮ ಕಿರು ಬೆರಳಲ್ಲಿ ಈ ಬಾಲ್ ತಿರುಗಿಸಬಲ್ಲಿರಾ ..." ಎಂದಾಗ ರಜನಿ "ಇಷ್ಟು ವರುಷದಿಂದ ಭೂಮಿ ಸುತ್ತಿಸಿದ್ದು ನೀನೇನಾ " ಅಂದರಂತೆ !!!!

superman , spiderman ,pantam ,shakthimaan , krish  ಎಲ್ಲಾ ರಜನಿಯನ್ನು ಒಮ್ಮೆ ಬೇಟಿ ಮಾಡಿದರಂತೆ, ಅದ್ಯಾವ ದಿನ ಗೊತ್ತೇ ?
.

.

.

.
"ಗುರು ಪೂರ್ಣಿಮಾ "



ಒಮ್ಮೆ ಕ್ರಿಕೆಟ್ ಆಡ ಬೇಕಾದರೆ ರಜನಿ ಹೊಡೆದ ಶೋಟ್ ಗೆ ಬಾಲ್ ಕಳೆದೋಯ್ತು. ಆ ಬಾಲ್ ಇಂದೂ "ಪ್ಲುಟೊ" ಎಂದೂ ಕರೆಯಲಾಗುತ್ತದೆ.


ರಜನಿ ಮತ್ತು superman  ನಡುವಿನ ಮುಷ್ಠಿ ಕಾಳಗಕ್ಕೆ ಒಪ್ಪಂದ ನಡೆಯಿತು , ಇಂದೂ ಒಪ್ಪಂದದಂತೆ superman ತನ್ನ ಒಳಂಗಿ ಯನ್ನು ಹೊರಹಾಕಿ ಸುತ್ತುತ್ತಾನೆ.ಯಾರು ಆ ಪಂದ್ಯದಲ್ಲಿ ಗೆದ್ದರು ಎಂದೂ ಹೇಳುವ ಅಗತ್ಯವಿಲ್ಲ ಅಂದು ಕೊಂಡಿದ್ದೇನೆ.

ರಜನಿ ತನ್ನ ಮನೆಗೆ ಬಾಗಿಲೆ ಇರಿಸಿಲ್ಲಾ. ಕಾರಣ ಅವರು ಗೋಡೆ ತೂರಿ ಬರುವ ಕಲೆ ಬಲ್ಲವರಾಗಿದ್ದಾರೆ !!!


ರಜನಿಕಾಂತ್ ಎಂದೂ ೧೦೦ ಮೀಟರ್ ರೇಸ್ ನಲ್ಲಿ ಫಸ್ಟ್ ಬರುತ್ತಾರೆ ಬೆಳಕೂ ಅವರನ್ನು ಎದುರಿಸುವ ಧೈರ್ಯ ತೋರಿಸುವುದಿಲ್ಲ,


ರಜನಿಕಾಂತ್ ಒಮ್ಮೆ  ತನ್ನ ಆತ್ಮಕಥೆ ಬರೆದರು ಅದು ಇಂದು "ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್" .
ರಜನಿಕಾಂತ್ ಹೀಗೆ ೧ ರಿಂದ ೧೦ ರ ವರೆಗಿನ ಸಂಕೆ ಗಳನ್ನೂ ಗೀಚಿದ್ದರು  ಅದು ಇಂದು "ಕ್ಲಾರ್ಕ್ ಟೇಬಲ್ "ಎಂದೂ ಕರೆಯುತ್ತಾರೆ.



ಒಮ್ಮೆ ರಜನಿ ಬರೆದ ಚೆಕ್ ಗೆ ಬ್ಯಾಂಕೇ ಬೌನ್ಸ್ ಆಗಿತ್ತು.




ಜಂಪ್ ಬಟನ್ ಉಪಯೋಸಿಸದೆ ಮಾರಿಯೋ ಬೌನ್ಸ್  ಗೆದ್ದ ಏಕೈಕ ವ್ಯಕ್ತಿ ರಜನಿ .




ಅಭಿಮಾನಿಗಳು ಕೊಡುವ ಮಿಸ್ ಕಾಲ್ ಅನ್ನೂ ಎತ್ತುವ ಸಾಮರ್ಥ್ಯ ಇರುವುದು ರಜನಿ ಗೆ ಮಾತ್ರ.




ಡೈನೋಸಾರ್ ಒಮ್ಮೆ ಇವರಿಂದ ಪಡಕೊಂಡ ಸಾಲ ತೀರಿಸಲು ನಿರಾಕರಿಸಿದ್ದಕ್ಕೆ,ಇಂದು ಜಗತ್ತಿನಲ್ಲಿ ಡೈನೋಸಾರ್ ಸಂತತಿಯೇ ನಿರ್ನಾಮ ವಾಗಿರುವುದು.



ರಜನಿ ಉಸಿರಾಡುವುದಿಲ್ಲ, ಬದಲಾಗಿ ಉಸಿರೇ ಅವರಲ್ಲಿ ಅವಿತು ಕೂತಿರುತ್ತದೆ.



ಇವರು ಅಪ್ಪೆಲ್ ಕಂಪೆನಿ ಯ ಲೋಗೋ ದಿಂದ ತನ್ನ ಹಸಿವು ನೀಗಿಸಬಲ್ಲರು.



ಮುಂದಿನ ಇವರ ಚಿತ್ರದ DVD  ಮೇಲೆ "ನಿಮ್ಮ ಕಂಪ್ಯೂಟರ್ ನಲ್ಲಿ ಗ್ರಾಫಿಕ್ ಕಾರ್ಡ್ ಇದ್ದಾರೆ ಮಾತ್ರ ವಿಕ್ಷಿಸಬಹುದು "ಎಂದೂ ವಾರ್ನಿಂಗ್ ಮೆಸೇಜ್ ಬರುವ ಸಂಪೂರ್ಣ ಸಾದ್ಯತೆ ಇರುವುದು.



ರಜನಿ ಯೊಂದಿಗೆ ಒಂದೇ ಗ್ರಹದಲ್ಲಿರಲು ಹೆದರಿದವರು ಇಂದು ಆಕಾಶಕಾಯಗಳಾಗಿರುವರು.



infinity  ಯ ಮೌಲ್ಯ ಮಾಡುವ ಸಾಮರ್ಥ್ಯ ಇರುವುದು ಈ ಮಹಾನುಭಾವನಿಗೆ ಮಾತ್ರ.




ಕೈಗಡಿಯಾರ ಕಟ್ಟುವ ಕ್ರಮ ಇವರಿಗೆ ತಿಳಿದಿಲ್ಲ, ತಮಗೆ ಬೇಕಾದ ಹಾಗೆ ಸಮಯ ಸೆಟ್ ಮಾಡಿ ಕೊಳ್ಳುತ್ತಾರೆ.



ಸಂಗ್ರಹ :(ಮಿಂಚಂಚೆ ಮತ್ತು ಜಂಗಮ ವಾಣಿ )
ಕೊನೆಯಲ್ಲಿ ಇಂಗ್ಲಿಷ್ ನ ಒಂದು ವಾಕ್ಯ


"Where there is a will there is a way, where there is the Rajani there is no otherway !!!!"

 

 

ಕಾಮತ್ ಕುಂಬ್ಳೆ

Rating
No votes yet

Comments