ಮೂಢ ಉವಾಚ - 167

ಮೂಢ ಉವಾಚ - 167

 

ಅನುಭವಿಸಿದ ದುಃಖ ಭಯವಾಗಿ ಕಾಡೀತು
ದುಃಖದ ಸೋಂಕೆಲ್ಲಿ ಭಯವಿಲ್ಲದವಗೆ |
ಸುಖದ ನೆನಪುಗಳು ಬಯಕೆ ತರದಿರದೆ
ಬಯಕೆ ದುಃಖಕ್ಕೆ ದೂಡೀತು ಮೂಢ || ..333
 
ಪುಟ್ಟಿಸಿದ ರವಿಯನೇ ಮುಸುಕುವುದು ಮೋಡ
ನನ್ನಿಂದ ನಾಬರಲು ನನ್ನನೇ ಮರೆಸುವುದು |
ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ || ..334
*************
-ಕ.ವೆಂ.ನಾಗರಾಜ್.
 
Rating
No votes yet

Comments

Submitted by kavinagaraj Mon, 01/28/2013 - 15:16

ಸಾಮಾನ್ಯವಾಗಿ ಮಾಡುವಂತೆ ಪ್ರಕಟಿಸುವ ಮುನ್ನ ಕಣ್ಣಾಡಿಸಿದೆ, ಆದರೂ ಮೂಢ ಮೂಠ ಆಗಿಬಿಟ್ಟ! ಎಷ್ಟಾದರೂ ಮೂಢನಲ್ಲವೆ?

Submitted by sathishnasa Tue, 01/29/2013 - 15:33

"ನಾನತ್ವ ಬಿಗಿಯುವ ಕಗ್ಗಂಟೆ ಮಮಕಾರ
ಅರಿತೆನೆಂಬಹಮಿಕೆಗೆ ಸಿದ್ಧಿ ದೂರವು ಮೂಢ " ಸತ್ಯವಾದ ಮಾತುಗಳು. ಬಹಳ ದಿನಗಳ ನಂತರ ಒಳ್ಳೆಯ ಉವಾಚ ನಾಗರಾಜ್ ರವರೇ
.....ಸತೀಶ್