ಯಾಕ್ರೀ ಬೇಕು ಈ ಚುನಾವಣೆ.... ?

ಯಾಕ್ರೀ ಬೇಕು ಈ ಚುನಾವಣೆ.... ?

ಶೀರ್ಷಿಕೆ ನೋಡಿದ್ ಕೂಡ್ಲೇ ಏನೋ ಗಂಭೀರವಾದ ವಿಷಯ ಬರೀತಾಳೆ ಅಂದ್ಕೊಂಡ್ರಾ ... ಇಲ್ಲಾರೀ... ಈ ಚುನಾವಣೆ ಬರೋದು ಸಾಕು... ಅದಕ್ಕೋಸ್ಕರ ನಮ್ಮಂಥವರನ್ನ ಆ ಕೆಲಸಕ್ಕೆ ಹಾಕೋದು ಸಾಕು.. ಎಷ್ಟ್ ಕಷ್ಟ ಗೊತ್ತೇನ್ರಿ ? ನೆನ್ನೆ ಚುನಾವಣೆಗೆ ಅಂತ ಒಂದು ತರಭೇತಿ ಇತ್ತು. ಮತಯಂತ್ರ ಉಪಯೋಗಿಸೋದು ಹೇಗೆ , ಅಲ್ಲಿ ಕೆಲಸ ಮಾಡೋದು ಹೇಗೆ ಇತ್ಯಾದಿ ಇತ್ಯಾದಿ.... ನನ್ನ ಕೊಲೀಗ್ ಒಬ್ರು ಹೇಳ್ತಿದ್ರು .... (ಆಕೆ ಕಳೆದ ವರ್ಷ ಅಪಾಯಿಂಟ್ ಆಗಿದ್ದವ್ರು) ಕಳೆದ ಬಾರಿ ಅವರಿಗೆ ನಮ್ಮದೇ ಜಿಲ್ಲೆಯ ಹಳ್ಳಿಯೊಂದಕ್ಕೆ ಚುನಾವಣಾ ಕರ್ತವ್ಯಕ್ಕೆ ಹಾಕಿದ್ರಂತೆ ( ಹೆಸರು ಬೇಡ ಬಿಡಿ) .. ಅಲ್ಲಿ ವಿಪರೀತ ರಾಜಕೀಯ ... ಎಲ್ಲೀವರ್ಗೆ ಅಂದ್ರೆ ಒಬ್ಬರ ತಲೆ ಕಂಡ್ರೆ ಇನ್ನೊಬ್ರಿಗೆ ಆಗಲ್ಲ ಹಾಗೆ.(ದ್ವೇಷಕ್ಕೆ ತಲೆ ತೆಗೆಯುವ ಮಂದೀ ಕೂಡ ಇದ್ದಾರಂತೆ ಅಲ್ಲಿ) ... ತುಂಬಾ ಕಷ್ಟ ಆಯ್ತಂತೆ ಕಣ್ರೀ... ಕೊನೆಗೆ ಎರಡು ಪ್ರಮುಖ ಪಕ್ಷಗಳ ಗುಂಪಿನವರಿಗೆ ದೊಡ್ಡ ಜಗಳ ಆಗಿ ಈಯಮ್ಮನ ಮೇಲೆ ಕೂಗಾಡಿ ಕಿರುಚಾಡಿ..... ಛೇ ಪಾಪ ! ಕಡೆಗೆ ಪೋಲೀಸಿನವರ ಸಹಾಯ ತೊಗೊಂಡು ಭಯದಲ್ಲೇ ಕರ್ತವ್ಯ ಮುಗಿಸಿದ್ರಂತೆ... ಈ ಕೆಲ್ಸಾನು ಬೇಡ ಅವರ ಸಂಬಳಾನು ಬೇಡಮ್ಮ .... ಅಂತ ನನಗೆ ಹೇಳಿದ್ರು... ನನಗೀಗ ಭಯ ಶುರುವಾಗ್ತಿದೆ... ನನಗೆ ಎಲ್ಲಿ ಹಾಕ್ತಾರೋ ... ಈ ಚುನಾವಣೆಯ ಕಾವು ಹೆಚ್ಚಾಗಿರೋ ಕಡೆ ಹಾಕ್ಬಿಟ್ರೆ ದೇವ್ರೆ ಗತಿ ... ನೋಡೋಣ ಅದಕ್ಕೆ ೩೦ ರ ವರೆಗೆ ಕಾಯಬೇಕು... ಆಮೇಲ್ ಹೇಳ್ತೀನಿ .. ಅಲ್ಲೆಲ್ಲ ಏನಾಯ್ತು ಅಂತ ... ಅಲ್ಲೀತನಕ ಕಾಯ್ತಾ ಇರಿ... ಏನಂತೀರಿ?

Rating
No votes yet