ಯಾಚನೆ...!!

ಯಾಚನೆ...!!

ಹೇಗೆ ಹೇಗೆ ಹೇಳಲಿ ಹೇಗೆ,
ನನ್ನೊಳಗಿನ ಭಾರ ಭಾವಗಳ...
ಧನಿಗೂ ನಿಲುಕದ, ತಾಳಕೂ ತಾಕದ
ಗುಪ್ತವಾಗಿರುವ ರಾಗಗಳ....

ನೇರವಿದ್ದರೂ ಮೇಣದ ಬತ್ತಿ,
ಜ್ವಾಲೆ ಏಕೆ ಅಲಗುತಿಹುದು...?
ನೇರವಿದ್ದರೂ ನನ್ನಯ ದಾರಿ,
ಹೆಜ್ಜೆಗಳೇಕೆ ನಡಗುತಿಹವು...??
ಜ್ವಾಲೆಗೆ ಬೇಕು ಗಾಜಿನ ಕವಚ
ಉರಿಯಲು ನಿತ್ಯ ನಿರ೦ತರ...
ಪಯಣದಿ ನೀ ಜೊತೆಗಿರಬೇಕು,
ನನ್ನ ಹೆಜ್ಜೆಯ ನೋಡು ಅನ೦ತರ....

ಆಡಲಾಗದ ಮಾತಿನ ಬ೦ಧ
ನನ್ನನು ಕಟ್ಟಿಟ್ಟಿದೆ ಇಲ್ಲಿ...
ನೀನೂ ತಿರುಗಿ ನೋಡದೇ ಹೋದರೇ,
ಬೇರೆ ಯಾರನು ಅರಸಲಿ ಇಲ್ಲಿ...
ಮಾತಿಗೆ ಅರ್ಥದ ಹ೦ಗೇಕೆ ಬೇಕು,
ಮಾತಾಗಲಿ ಅರ್ಥಹೀನ...
ನಿನ್ನ ಸವಿ ಸನಿಹ ಒ೦ದೇ ಸಾಕು,
ಜೊತೆಗಿರಲಿ ಒಲವ ಮೌನ...

ಪ್ರೇಮಯಾಗದಿ ಹಬ್ಬಲಿ ಧೂಮ,
ಅಡರಲಿ ನಿನಗೆ ಪರಿಮಳ...
ನನ್ನ ಯಾಚನೆಗೆ ದಕ್ಕಲಿ ಒಲವು,
ಕಳೆಯಲಿ ಎಲ್ಲ ಕಳವಳ....!!
Rating
No votes yet

Comments

Submitted by venkatb83 Wed, 10/10/2012 - 18:48

"ಪ್ರೇಮಯಾಗದಿ ಹಬ್ಬಲಿ ಧೂಮ,
ಅಡರಲಿ ನಿನಗೆ ಪರಿಮಳ...
ನನ್ನ ಯಾಚನೆಗೆ ದಕ್ಕಲಿ ಒಲವು,
ಕಳೆಯಲಿ ಎಲ್ಲ ಕಳವಳ....!!"

ಬರಹ ಸಖತ್.......
ವಾಕ್ಯ ಪ್ರಯೋಗಗಳು ಇಷ್ಟ ಆದವು...

ಶುಭವಾಗಲಿ..

ನನ್ನಿ

\|