ಯಾವುದೀ ಅಣಬೆ?

ಯಾವುದೀ ಅಣಬೆ?

ಪಕ್ಕದ ಚಿತ್ರದಲ್ಲಿರುವುದು ಅಣಬೆ ಜಾತಿಗೆ ಸೇರಿದ ಸಸ್ಯ ಎಂಬುದು ನನ್ನ ಭಾವನೆ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇದು ಸಣ್ಣ ಗೋಲಿಯ ಗಾತ್ರದಿಂದ ಸಾಮಾನ್ಯ ತಂಬಿಗೆಯ ಗಾತ್ರದ ವರೆಗೆ ಬೆಳೆಯುತ್ತದೆ. ಇದರ ವಿಶೇಷತೆ ಎಂದರೆ ಇದು ಅಕೇಶಿಯಾ ಮರಗಳು ಇರುವ ಅಂದರೆ ಅವುಗಳ ದರಕು (ಒಣ ಎಲೆಗಳು) ಉದುರುವ ಪರಿಸರದಲ್ಲಿ ಮಾತ್ರಾ ಕಂಡುಬರುತ್ತಿದೆ. ಬೇರೆಲ್ಲಿಯೂ ಕಾಣಬರುವುದಿಲ್ಲ. ಸಣ್ಣದಿದ್ದಾಗ ಇದು ಸ್ವಲ್ಪ ಗಡುಸಾಗಿಯೇ ಇದ್ದರೂ ಬೆಳೆದ ನಂತರ ತುಂಬಾ ಮೃದುವಾಗಿರುತ್ತದೆ. ಬೆಳೆದ ಅಣಬೆಯನ್ನು ಒಡೆದರೆ ಹಸಿರು ಮಿಶ್ರಿತ ಕಪ್ಪು ಧೂಳು ಹೊರಬರುತ್ತದೆ. ಈ ಅಣಬೆ ಡಾಂಬರ್ ರಸ್ತೆಯನ್ನು ಸೀಳಿಕೊಂಡು ಹುಟ್ಟುವಷ್ಟು ಪ್ರಬಲವಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಗುಣಾವಗುಣಗಳು, ಪರಿಣಾಮಗಳು ಗೊತ್ತಿದ್ದಲ್ಲಿ ಹಂಚಿಕೊಂಡರೆ ಧನ್ಯವಾದಗಳು.

Rating
No votes yet

Comments