ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.
ಆ ದೇಶದಲ್ಲಿ ಎಲ್ಲವನ್ನೂ ಸರಕಾರವೇ ನಿರ್ಧರಿಸುತ್ತದೆ . ಶಿಕ್ಷಣ , ಉದ್ಯೋಗ , ಮದುವೆ, ವಸತಿ ಇತ್ಯಾದಿ ಎಲ್ಲವನ್ನೂ . ಎಲ್ಲದಕ್ಕೂ ಸರಕಾರದ ಅನುಮತಿ ಬೇಕು.
ದಂಪತಿಯೊಂದು ಮಗನ ಶಾಲೆಯ ಸಂಬಂಧ ಒಂದು ಅರ್ಜಿ ಕೊಟ್ಟಿದೆ. ಆ ಸಂಬಂಧ ಸರಕಾರದ ಇಲಾಖೆ ಅವರನ್ನು ಕರೆದಿದೆ. ಮಗುವಿನ ಸಮೇತ ಅವರು ಕಛೇರಿಗೆ ನಿಗದಿತ ಸಮಯಕ್ಕೆ ಬರುತ್ತಾರೆ. ಅಲ್ಲಿ ಒಬ್ಬ ಸಹಾಯಕಳು ಮಗುವನ್ನು ಆಚೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಯ ಅಧಿಕಾರಿ ಅವರಿಗೆ ಮದುವೆಯ ಅನುಮತಿಪತ್ರ ತೋರಿಸಲು ಹೇಳುತ್ತಾನ. ಅದನ್ನು ಪರಿಶೀಲಿಸಿ ಅವನು ಇವರನ್ನು ಕೇಳುತ್ತಾನೆ . ಈ ಲೈಸೆನ್ಸ್ ಎಲ್ಲಿ ಹೇಗೆ ಪಡೆದಿರಿ . ಇವರು ಹೇಳುತ್ತಾರೆ ' ಏಜೆಂಟ್ ಮೂಲಕ ಪಡೆದದ್ದು ' ಅಂತ . ' ನೀವು ಕಲಿತವರು, ಹೀಗೆ ಮಾಡಬಹುದೇ? ಇದು ನಕಲಿ , ನಿಮ್ಮ ಮದುವೆ ಸಿಂಧುವಲ್ಲ' ಎಂದು ಅಧಿಕಾರಿ ಹೇಳುತ್ತಾನೆ . 'ಈಗ ಏನು ಮಾಡುವದು?' ಎಂಬ ಪ್ರಶ್ನೆಗೆ , 'ಈಗ ಒಂದು ಅರ್ಜಿ ಕೊಟ್ಟಿರಿ. ನೀವಿಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಇರುವದರಿಂದ ನಾವು ಸಹಾನುಭೂತಿಯಿಂದ ಪರಿಗಣಿಸುತ್ತೇವೆ. ನಿಮಗೆ ಸ್ಪೇಷಲ್ ಕೇಸು ಎಂದು ಅನುಮತಿ ಕೊಡುತ್ತೇವೆ' ಈಗ ಹೋಗಿ ೧೫ ದಿನ ಬಿಟ್ಟು ಬನ್ನಿ' ಎನ್ನುತಾನೆ.
'ಹಾಗೇ ಆಗಲಿ' ಎಂದು ಹೊರಡಲು ಅನುವಾದ ದಂಪತಿಗಳು ' ನಮ್ಮ ಮಗು ಎಲ್ಲಿ? ಕಳಿಸ್ತೀರಾ?' ಎಂದು ಕೇಳಿದರೆ ಆ ಅಧಿಕಾರಿ ಹೇಳುತ್ತಾನೆ.
...
...
...
'ನಿಮಗೆ ರೂಲ್ ನಂ. ೩೨ ಗೊತ್ತಿಲ್ಲವೇ ?
....
....
ನಾವು ಆ ಮಗುವನ್ನು ಕೊಂದು ಬಿಟ್ಟೆವು!'
ಹಿಂದೆಂದೋ ಮಯೂರದಲ್ಲಿ ಓದಿದ ಕತೆ . ಭಾಷೆ ಕುರಿತ ಗಂಭೀರ ಚರ್ಚೆಯಿಂದ ನಿಮಗೆ ಬೇಸರ ಆಗಿರಬಹುದೆಂದು ಈ ಕತೆ ಹೇಳಿದ್ದೇನೆ.
Comments
ಉ: ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.