ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?

ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?

ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ
ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ
ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲವು ಸಲ ಚಾಟ್ ವಿಂಡೋ ಇದರಿಂದ
ಕ್ಲೋಸ್ ಕೂಡ ಆಗತ್ತೆ ಮತ್ತೆ ಇದು ದೊಡ್ಡ ಕಿರಿ ಕಿರಿ ಕೂಡ.

ಈಗ ಒಂದು ಉದಾಹರಣೆ ನೋಡಿ ಇದನ್ನ ಇನ್ನೂ ಚೆನ್ನಾಗಿ ಅರ್ಥ ಮಾಡಿ ಕೊಳ್ಳೋಣ. 

 ನಿಮ್ಮ
ಕಂಪ್ಯೂಟರಿನ ಒಂದು ಫೋಲ್ಡರಿನಲ್ಲಿ ಕೆಲ ಚಿತ್ರಗಳಿವೆ ಅಂತಿಟ್ಟು ಕೊಳ್ಳಿ. ಅವಕ್ಕೆ
ಕೊಟ್ಟಿರುವ ಎಕ್ಸ್ಟೆಂಷನ್ (ನಿಮ್ಮ ಕಡತ/ಫೈಲು ಯಾವ ರೀತಿಯ ಮಾಹಿತಿಯನ್ನ ತನ್ನಲ್ಲಡಗಿಸಿ
ಕೊಂಡಿದೆ ಎಂದು ಇದು ತಿಳಿಸ್ತದೆ ಉದಾ: .doc ಡಾಕ್ಯುಮೆಂಟ್ ಫೈಲ್) JPG ಅಂತಿದೆ. ಅದು
ಸಣ್ಣ ಅಕ್ಷರಗಳಲ್ಲಿ ಇಲ್ಲಾಂದ್ರೆ (jpg), ಕೆಲ ತಂತ್ರಾಂಶಗಳಲ್ಲಿ ಫೈಲ್ ಅಪ್ಲೋಡ್
ಇತ್ಯಾದಿ ಮಾಡುವಾಗ ಆ ಫೈಲ್ ಗಳು ಕಾಣಿಸಿ ಕೊಳ್ಳೋದೇ ಇಲ್ಲ. ಹಾಗಿದ್ರೆ ಅವನ್ನ
ನೋಡ್ಲಿಕ್ಕೆ ಎಕ್ಸ್ಟೆಂಷನ್ ಬದಲಿಸಿ jpg ಮಾಡಬೇಕು. ಒಂದ, ಎರಡು ಫೈಲ್ ಗಳಾದರೆ ಸರಿ,
ನೂರಾರಾದರೆ ಕೈನಲ್ಲಿ ಮಾಡ್ಲಿಕ್ಕಾಗತ್ತಾ? 

ಆಗ ನೋಡಿ ನಾವು ಬರೀಬೇಕು
ಸ್ಕ್ರಿಪ್ಟ್ (script). ಅಂದ್ರೆ ಒಂದು ಸಣ್ಣ ಪ್ರೊಗ್ರಾಮ್. ತಲೆ ಕೆಡಿಸಿ ಕೊಳ್ಳ
ಬೇಡಿ. ಇದು ಉದಾಹರಣೆ ಮಾತ್ರ. ನಿಮಗಿದನ್ನ ನಿಧಾನವಾಗಿ ಕಲಿಸ್ತೇನೆ. ಈಗ ನನ್ನ
ಉದಾಹರಣೆಯನ್ನ ಇಲ್ಲಿ ನೋಡಿ.  

[quote]http://pastebin.com/f147b43b1[/quote]

 ಏನಪ್ಪಾ
ಇದು,  ಪ್ರೊಗ್ರಾಮ್ ಅಂತಂದು ಈಗ ಯಾವುದೋ ಕೊಂಡಿ ಕೊಡ್ತಿದಾನೆ ಅಂದ್ರಾ? ಹೌದ್ರೀ,
ನಿಮಗೆ ಫೈಲ್ ಮೊದಲು ಹ್ಯಾಗಿತ್ತು, ಸ್ಕ್ರಿಪ್ಟ್ ಹ್ಯಾಗೆ ರನ್ ಮಾಡಿದೆ. ಕೊನೆಗೆ
ಎನಾಯಿತು ಅಂತ ಇಲ್ಲಿ ಔಟ್ ಪುಟ್ ಹಾಕ್ತಾ ಕುಳಿತ್ರೆ ಇನ್ನೊಂದು ದೊಡ್ಡ ಪುಟವೇ
ಬೇಕಾದೀತು. ಅದಕ್ಕೆ ಮೇಲಿನ ಕೊಂಡಿ. ಒಮ್ಮೆ ಇಣುಕಿ ನೋಡಿ. 

 ಹಾಗೆ,
ಸ್ಕ್ರಿಪ್ಟ್ ಇತ್ಯಾದಿಗಳನ್ನ ಬ್ಲಾಗ್, ಚಾಟ್ ಇತ್ಯಾದಿಗಳಲ್ಲಿ ಬರೆಯುವುದು ಉಚಿತವೂ
ಅಲ್ಲ. ಒರ್ಕುಟ್ ಉಪಯೋಸುತ್ತಿರುವವರಿಗೆ ಇದು ತಿಳಿದಿರಬಹುದು.  ನಿಮ್ಮ ಒರ್ಕುಟ್ ನ
ಗುಪ್ತ ಮಾಹಿತಿಯನ್ನ ಇತರರಿಗೆ ನೀಡುವಂತಹ ಕೆಲ ಸ್ಕ್ರಿಪ್ಟ್ ಗಳನ್ನ ಅವರುವರು
ನೀಡ್ತಿರ್ತಾರೆ. ಇದನ್ನ cross-site scripting ಅಂತಲೂ ಕರೀತಾರೆ. ಅಂತದ್ದೊಂದು
ತಪ್ಪು ನಮ್ಮದಾಗದಿರಲಿ ಅಂತ ಈ ಪೇಸ್ಟ್ ಬಿನ್. ಇಲ್ಲಿ ನಿಮ್ಮ ಸ್ಕ್ರಿಪ್ಟ್ ಇತ್ಯಾದಿ
ಯನ್ನ ಆ ಪ್ರೊಗ್ರಾಮಿಂಗ್ ಭಾಷೆಯ ಸಿನ್ಟ್ಯಾಕ್ಸ್ (ಪ್ರೊಗ್ರಾಮ್ ಬರೆಯುವ ವಿಧಿ-ವಿಧಾನ)
ಅನ್ನ ಹೈಲೈಟ್ ಮಾಡುವುದರೊಂದಿಗೆ ಪೇಸ್ಟ್ ಮಾಡಿ ಟೈನಿ ಯು.ಆರ್.ಎಲ್ ರೀತಿ ಸಣ್ಣ ದೊಂದು
ಕೊಂಡಿ ಪಡೆದು ಇತರರೊಂದಿಗೆ ಹಂಚಿ ಕೊಳ್ಳ ಬಹುದು.

 ಹ್ಯಾಗಿದೆ ಪೇಸ್ಟ್ ಬಿನ್. ಇಂದೇ ಪೇಸ್ಟ್ ಬಿನ್ ಡಾಟ್ ಕಾಂ ಗೆ ಬೇಟಿ ಕೊಟ್ಟು ಉಪಯೋಗಿಸಿ. ಐ.ಆರ್.ಸಿ ನಲ್ಲಿ ಚಾಟ್ ಮಾಡುವರು ಇದನ್ನ ಕಡ್ಡಾಯ ಉಪಯೋಗಿಸ ಬೇಕು. 

 ಮೇಲಿನ ಉದಾಹರಣೆಯಲ್ಲಿ ಬರೆದಿರುವ ಸ್ಕ್ರಿಪ್ಟ್ ಬಗ್ಗೆ ನನ್ನ ಇಂಗ್ಲೀಷ್ ಬ್ಲಾಗ್ ನಲ್ಲಿ ಬರೆದಿದ್ದೇನೆ. ಇದನ್ನ ಮುಂದೆ ಸ್ಕ್ರಿಪ್ಟಿಂಗ್ ಬಗ್ಗೆ ಹೇಳುವಾಗ ಸುಲಭವಾಗಿ ನಿಮಗೆ ಅರ್ಥವಾಗುತ್ತದೆ. ನೀವೂ ಟ್ರೈ ಮಾಡಿ ನೋಡಿ ತುಂಬಾ ಸುಲಭ.

 

Rating
No votes yet

Comments