ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಲಿನಕ್ಸಾಯಣ - ೪೪ - ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು

ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ.

504_master-black-fn185k-50m

ಅಂತೂ ಇಂತೂ ಕಡೆಗೆ ನನ್ನ Motorola Motoming
A1200 ಮೊಬೈಲ್ ಮೂಲಕ Airtel GPRS ಕನೆಕ್ಷನ್ ಬಳಸಿ ಉಬುಂಟು ನಲ್ಲಿ ಇಂಟರ್ನೆಟ್ ಪಡೆಯೋ ಹಾಗಿದೆ. ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಕೆಟ್ಟಿದ್ದು ಎರಡು ತಿಂಗಳಾದರೂ ಅವರಿಗ್ಯಾರಿಗೂ ಕರ್ತವ್ಯ ಪ್ರಜ್ಞೆಯಿಲ್ಲದವರಂತೆ ಕಂಡು ಬಂದದ್ದರಿಂದ, ಮತ್ತು ಅಪ್ಪ ಅವರಲ್ಲಿಗೆ ದಿನವೂ ಅಲಿಯೋದು, ನಾನು ಪ್ರತಿ ಬಾರಿ ಕಾಲ್ ಮಾಡಿ ನನ್ನ ತಲೆ ಬಿಸಿ ಮಾಡಿಕೊಳ್ಳೋದನ್ನ ತಪ್ಪಿಸ್ಲಿಕ್ಕೆ ಇದು ಒಂದು ತರಾ ಸುಲಭ ಉಪಾಯ ಅನ್ನಿಸ್ತು. ಮೇಲಧಿಕಾರಿಗಳೂ ಕಿವಿಗೆ ಹತ್ತಿ ಇಟ್ಟು ಕುಂತ್ರೆ ನಾನೇನು ಮಾಡ್ಲಿ ಹೇಳಿ. ಟೆಕ್ನಿಕಲ್ ಸೊಲ್ಯೂಶನ್ ಹ್ಯಾಗಾದ್ರೂ ಕಂಡಿಡಕೊಳ್ಬೇಕಲ್ವಾ? 

ಸರಿ, ನೀವು ಹ್ಯಾಗೆ ಇದನ್ನ ನಿಮ್ಮ ಉಬುಂಟುವಿನಲ್ಲಿ ಸಾಧ್ಯವಾಗಿಸ್ಕೊಳ್ಳ ಬಹುದು ಅನ್ನೋದನ್ನ ಈಗ ನೋಡೋಣ. 

pppd ಸರ್ವೀಸ್ ಉಬುಂಟುವಿನಲ್ಲಿ ನಿಮಗೆ ಡಯಲಪ್ ಕನೆಕ್ಷನ್ ಸಾಧ್ಯವಾಗಿಸುತ್ತೆ. ಮೊದಲು ಅದನ್ನ ಕಾನ್ಫಿಗರ್ ಮಾಡ್ಬೇಕು. /etc/ppp/options ಫೈಲ್ ಎಡಿಟ್ ಮಾಡಿ ಕೆಳಗಿನ ಒಂದು ಸಾಲನ್ನು ಅದರಲ್ಲಿ ಹಾಕ್ಬೇಕು.

:192.168.0.254

ಇದನ್ನ ಕೆಳಗಿನ ಕಮ್ಯಾಂಡ್ ಮೂಲಕ ಕೂಡ ಮಾಡಿ ಮುಗಿಸ ಬಹುದು.  Application -> Accessories -> Terminal ಓಪನ್ ಮಾಡಿ ಅಲ್ಲಿ ಈ ಕಮ್ಯಾಂಡ್ ಟೈಪ್ ಮಾಡಿ. 

# sudo echo  ":192.168.0.254" >> /etc/ppp/options

ಇದಾದ ನಂತರ, wvdial ಕಾನ್ಫಿಗರ್ ಮಾಡ್ಬೇಕು. ನಿಮ್ಮ ಫೋನ್ ಅನ್ನು "Modem" ಮೋಡ್ ನಲ್ಲಿರಿಸಿ, USB ಕೇಬಲ್ ಮೂಲಕ ನಿಮ್ಮ ಕಂಪ್ಯೂಟರಿಗೆ ಕನೆಕ್ಟ್ ಮಾಡಿ. ನಂತರ ಕನ್ಸೋಲಿನಲ್ಲಿ ಕೆಳಗಿನ ಕಮ್ಯಾಂಡ್ ಟೈಪ್ ಮಾಡಿ

#sudo wvdialconf /etc/wvdial.conf

ಈಗ ನಿಮ್ಮ ಕಂಪ್ಯೂಟರಿನಲ್ಲಿ /etc/wvdial.con ಅನ್ನೋ ಫೈಲ್ ಬಂದಿರತ್ತೆ. ನಿಮ್ಮ ಕಂಪ್ಯೂಟರಿನಲ್ಲಿ ಕಂಡು ಬಂದ ಮೊಡೆಮ್ ಅನ್ನು ಇಲ್ಲಿ ಅದೇ ಹಾಕಿರುತ್ತದೆ. ಅದನ್ನು ಕೆಳಕಂಡ ರೀತಿಯಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಗೋಸ್ಕರ ಬದಲಿಸಬೇಕು. ಫೈಲ್ ಎಡಿಟ್ ಮಾಡಲು ಕೆಳಗಿನ ಕಮ್ಯಾಂಡ್ ಬಳಸಿ. 

#sudo gedit /etc/wvdial.conf

ಇಲ್ಲಿದೆ ನೋಡಿ ಸರಿಯಾದ ಕಾನ್ಫಿಗರೇಷನ್. ಇದು ನಿಮ್ಮ wvdial.conf ಫೈಲ್ ನಲ್ಲಿರೋ ಹಾಗೆ ನೋಡ್ಕೊಳ್ಳಿ. 

[Dialer Defaults]
Init1 = ATZ
Init2 = AT&FE0V1&C1S0=0
Init3 = AT+CGDCONT=1,”IP”,”airtelgprs.com”
Modem Type = USB Modem
ISDN = 0
Phone = *99***2#
New PPPD = yes
Modem = /dev/ttyACM0
Username = airtel
Password = airtel
Baud = 460800
Idle Seconds = 3000
Auto DNS = 1
Stupid Mode = 1
Dial Command = ATD
Ask Password = 0
FlowControl = NOFLOW

ಫೈಲ್ ಸೇವ್ ಮಾಡ. ಈಗ ನೀವು ಇಂಟರ್ನೆಟ್ಗೆ ಕನೆಕ್ಟ್ ಆಗಲು ಸಿದ್ದ. ಅದಕ್ಕೆ ಕೆಳಗಿನ ಕಮ್ಯಾಂಡ್ ಬಳಸಿ. 

#sudo wvdial

ಇದು ನಿಮಗೆ ಕೆಳಕಂಡಂತೆ output ಕೊಡತ್ತೆ. 

 

:~# wvdial
–> WvDial: Internet dialer version 1.60
–> Cannot get information for serial port.
–> Initializing modem.
–> Sending: ATZ
ATZ
OK
–> Sending: AT&FE0V1&C1S0=0
AT&FE0V1&C1S0=0
OK
–> Sending: AT+CGDCONT=1,”IP”,”airtelgprs.com”
OK
–> Modem initialized.
–> Idle Seconds = 3000, disabling automatic reconnect.
–> Sending: ATD*99***2#
–> Waiting for carrier.
CONNECT
–> Carrier detected.  Starting PPP immediately.
–> Starting pppd at Wed Feb 25 14:01:47 2009
–> Pid of pppd: 8595
–> Using interface ppp0
–> pppd: [08][18]�[08]
–> pppd: [08][18]�[08]
–> pppd: [08][18]�[08]
–> pppd: [08][18]�[08]
–> pppd: [08][18]�[08]
–> pppd: [08][18]�[08]
–> local  IP address 117.97.93.18
–> pppd: [08][18]�[08]
–> remote IP address 192.168.0.254
–> pppd: [08][18]�[08]
–> primary   DNS address 202.56.250.5
–> pppd: [08][18]�[08]
–> secondary DNS address 202.56.250.6
–> pppd: [08][18]�[08]

ಈಗ, ಕನ್ಸೋಲನ್ನು ಹೀಗೆ ಬಿಟ್ಟು. ಬ್ರೌಸರ್ ಓಪನ್ ಮಾಡಿ. ಇಂಟರ್ನೆಟ್ ಆಕ್ಸೆಸ್ ಮಾಡಿ. ಎಲ್ಲಿಂದ ಬೇಕಾದ್ರೂ, ಯಾವಾಗ ಬೇಕಿದ್ರೂ. 

ಕನೆಕ್ಷನ್ ಕೊನೆಗಾಣಿಸಲಿಕ್ಕೆ ಕನ್ಸೋಲಿಗೆ ವಾಪಸ್ ಬಂದು CTRL+C ಪ್ರೆಸ್ ಮಾಡಿದರಾಯಿತು. 

ಗಮನಿಸಿ: ಏರ್ಟೆಲ್ ಜಿ.ಪಿ.ಆರ್.ಎಸ್ ನಿಮಗೆ ಪ್ರತಿದಿನ ೨೦ರೂಗಳಿಗೆ ಮೊಬೈಲ್ ಆಫೀಸ್ ಸೇವೆಯಾಗಿ  ದೊರೆಯುತ್ತದೆ. ಅನ್ಲಿಮಿಟೆಡ್ ಕನೆಕ್ಷನ್ ಆಗಿದ್ದು, ೧೪೪ ಕೆ.ಬಿ.ಪಿ.ಎಸ್ ರಷ್ಟು ವೇಗ ಹೊಂದಿದೆ. 

Rating
No votes yet