ಲಿನಕ್ಸಾಯಣ - ೫೫ - ಉಬುಂಟು ೯.೦೪ ನಲ್ಲಿ ಕನ್ನಡ - ೩

ಲಿನಕ್ಸಾಯಣ - ೫೫ - ಉಬುಂಟು ೯.೦೪ ನಲ್ಲಿ ಕನ್ನಡ - ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ?

 ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ ನೋಡಿ, ಜ್ಞಾಪಕ ಬರುತ್ತೆ. 

ಉಬುಂಟು ೯.೦೪-೪

ಈಗ ಲ್ಯಾಂಗ್ವೇಜ್ ಸಪೋರ್ಟ್ ವಿಂಡೋದಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಂಡ್ರಾಯ್ತು. 

ಉಬುಂಟು ೯.೦೪ -೧

ಇದರ ನಂತರ ಒಮ್ಮೆ ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆದ್ರೆ ನಿಮಗೆ ಎಲ್ಲ ಮೆನು ಇತ್ಯಾದಿ ಕನ್ನಡದಲ್ಲೇ ಕಾಣುತ್ತೆ. ಇಂಗ್ಲೀಷಿಗೆ ಮತ್ತೆ ವಾಪಸ್ ಬರ್ಲಿಕ್ಕೆ ಇದೇ ತಂತ್ರ ಅನುಸರಿಸಿದರಾಯಿತು. 

 ಇದು ಬೇಡ ನನಗೆ ಬೇಕಾದಾಗ ಮಾತ್ರ ಕನ್ನಡದಲ್ಲಿ ಎಲ್ಲವೂ ಕಂಡರಾಯಿತು ಅಂತ ಅಂದ್ರೆ, ಲಾಗಿನ್ ಸ್ಕೀನ್ಗೆ ಬಂದಾಗ ಅಲ್ಲಿ Options ಮೇಲೆ ಕ್ಲಿಕ್ ಮಾಡಿ "Select Language" ಕ್ಲಿಕ್ ಮಾಡಿ. ಅದರಲ್ಲಿ ಕನ್ನಡದ ಮೇಲೆ ಕ್ಲಿಕ್ ಮಾಡಿದರೆ ಎಲ್ಲವೂ ಕನ್ನಡಮಯವಾಗುತ್ತದೆ. 

 ಉಬುಂಟು ೯.೦೪ ನಲ್ಲಿ ಕನ್ನಡ - ೨

 ಇದನ್ನು ಶಾಶ್ವತ ಆಯ್ಕೆಯನ್ನಾಗಿ ಮಾಡಲೂ ಸಾಧ್ಯ. ನಿಮ್ಮೆದುರು ಬರುವ ವಿಂಡೋಗಳಲ್ಲಿನ ಸಂದೇಶಗಳನ್ನು ಒಮ್ಮೆ ಓದಿಕೊಳ್ಳಿ. ಇದಾದ ನಂತರ ನಿಮ್ಮಡೆಸ್ಕ್ಟಾಪ್ ವಿಂಡೋ ಮತ್ತೆ ಶುರುಮಾಡಲೇ ಅಂತ ಕೂಡ ಒಂದು ಸಂದೇಶ ನಿಮ್ಮ ಮುಂದೆ ಬರುತ್ತದೆ. ಅದಕ್ಕೆ OK ಎಂದೊಮ್ಮೆ ಹೇಳಿ ಕನ್ನಡದಲ್ಲಿ ಸುಂದರವಾಗಿ ಮೂಡಿ ಬರುವ ಲಾಗಿನ್ ಪೇಜ್ ನೋಡಬಹುದು.  

ಉಬುಂಟು ೯.೦೪ ನಲ್ಲಿ ಕನ್ನಡ - ೩

 ಲಾಗಿನ್ ಆಗಿ ನೋಡಿ. ಕನ್ನಡದಲ್ಲೇ ನಿಮ್ಮ ಮೆನು ಇತ್ಯಾದಿ ಕಾಣ್ತವೆ. 

ಈಗ ನಿಮ್ಮಲ್ಲೇ ಯಾರಾದ್ರೂ ಕನ್ನಡದ ಮೆನು ಇತ್ಯಾದಿ ಇರೋ ಒಂದು ಚಿತ್ರವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ತೀರಾ? :)

 

 

Rating
No votes yet

Comments