ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
ಎಲ್ಲರಿಗೂ ಫೋಟೋ ತಗೀಬೇಕು, ಅದನ್ನ ಎಡಿಟ್ ಮಾಡಿ ಎಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಬೇಕು ಅಂತ ಆಸೆ ಅಲ್ವಾ?
ನಿಮ್ಮ ಕೆಲಸ ಸುಲಭ ಮಾಡ್ಲಿಕ್ಕೆ ಇಲ್ಲಿದೆ ನೋಡಿ GIMP (Gnu Image Manipulation Program) . ವಿಂಡೋಸ್ ನಲ್ಲಿ ಫೋಟೋ ಶಾಫ್ ನಲ್ಲಿ ಇದೆಯಲ್ಲಾ ಅಂದ್ರ? ಇದೆ ನಿಜ, ಆದ್ರೆ ಅದನ್ನ ಉಪಯೋಗಿಸ್ಲಿಕ್ಕೆ ನಿಮಗೆ ಲೈಸೆನ್ಸ್ ಇರಬೇಕು, ಅದನ್ನ ಕೊಳ್ಳಲಿಕ್ಕೆ ಬಾರಿ ಹಣ ಬೇಕು. GIMP ಮುಕ್ತ ತಂತ್ರಾಂಶ, ನಿಮ್ಮ ಲಿನಕ್ಸ್ ನಲ್ಲಾಗಲೇ ಇನ್ಸ್ಟಾಲ್ ಆಗಿದೆ ನೋಡಿ. ಉಬುಂಟು ಇನ್ಸ್ತಾಲ್ ಮಾಡಿ ಕೊಂಡವರು, Applications - > Graphics -> GIMP Image Editor ಈ ಮೆನು ಆಫ್ಚನ್ ಉಪಯೋಗಿಸುವುದರಿಂದ GIMP ಉಪಯೋಗ ಪ್ರಾರಂಭಿಸ ಬಹುದು.
ನಿಮ್ಮ ಚಿತ್ರಗಳನ್ನ jpeg, png, gif ಮತ್ತಿತರ ಫಾರ್ಮ್ಯಾಟ್ ಗಳಿಗೆ ಕನ್ವರ್ಟ್ ಮಾಡಿಕೊಳ್ಳಲಿಕ್ಕೆ ನಾನಿದನ್ನ ತುಂಬಾನೇ ಉಪಯೋಗಿಸ್ತೇನೆ. ಮೊದಲ ಕೆಲಸ ಅದೇನೆ.
ನೋಡಿ ಗಿಂಪ್ ಎಷ್ಟು ಚೆನ್ನಾಗಿದೆ, ಅದರಲ್ಲಿರುವ ಕೆಲ ಸಲಕರಣೆಗಳನ್ನ ಕೆಳಗಿನ ಚಿತ್ರ ದಲ್ಲಿ ತೋರಿಸಲಾಗಿದೆ. ನಿಮಗೆ ಫೋಟೋಶಾಫ್ ಅನ್ನ ತಂದು ಮುಂದೆ ಇಟ್ಟಿರುವಂತಿದೆ ಅಲ್ವೇ?
(ಚಿತ್ರ ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಫೋಟೋ ಸ್ಟುಡಿಯೋದವರು, ಪ್ರಿಂಟಿಂಗ್ ಪ್ರೆಸ್ ನವರು ಮತ್ತಿತರರು ಈ ತಂತ್ರಾಂಶದ ಸ್ಯ್ವಾತಂತ್ರ್ಯವನ್ನ ಅರಾಮಾಗಿ, ಮುಕ್ತವಾಗಿ ಸವಿಯಬಹುದು. ವಿಂಡೋಸ್ ನಲ್ಲಿ ಮತ್ತೊಂದು ಸಾಫ್ತ್ವೇರ್ ನ ಪೈರಸಿ ಮಾಡಿ ನಡೆಸೋದ್ಯಾಕೆ? ಲಿನಕ್ಸ್ ಬಳಸ್ರಲ್ಲ ಮತ್ತೆ.
Comments
ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
ಉ: ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್