ವಂದೇ ಮಾತರಂ.....ಮತ್ತೊಮ್ಮೆ ಹಾಡೋಣ ಬನ್ನಿ.

ವಂದೇ ಮಾತರಂ.....ಮತ್ತೊಮ್ಮೆ ಹಾಡೋಣ ಬನ್ನಿ.

ವಂದೇ ಮಾತರಂ
ವಂದೇ................ಮಾತರಂ..........ವಂದೇ..........ಮಾತರಂ.
ಭಾವಭಾಷೆಗಳ ಬೇಧವಿಲ್ಲದೇ ಹಾಡೋಣ ಬನ್ನಿ
ಜೀವ ಜೀವಗಳ ಬೆಸೆಯುವಾ ಪ್ರೀತಿ ತನ್ನಿ
ಬನ್ನೀ ದೇಶ ಬಾಂಧವರೇ ಬನ್ನೀ ಭಾರತೀಯರೇ
ಮೊಳಗಲಿ ಒಂದೇ ಉಸಿರಲಿ
ವಂದೇ...............ಮಾತರಂ................ವಂದೇ.............ಮಾತರಂ.

ಭಾನು ಭೂಮಿಗೆ, ಸಸ್ಯ ಶ್ಯಾಮಲೆಗೆ ನಮನವೀಯುತಾ ನಡೆದು ಬನ್ನಿ
ಮೆಟ್ಟಿನಡೆಯುವಾ ತಾಯ ಮಡಿಲಿಗೆ ಭಾರವೀಯದೇ ಮೆತ್ತ ಬನ್ನಿ.
ಹೆಜ್ಜೆ ಹೆಜ್ಜೆಗಳು ಕೂಡಿ ನಡೆಯಲಿ ಹೊನ್ನ ಹೂಮಳೆ ಭುವಿಗೆ ಸುರಿಯಲಿ
ಧಮನಿ ಧಮನಿಗಳು ನಿಮಿರಿ ನಿಲ್ಲಲಿ.
ಮೊಳಗಲಿ ಒಂದೇ ಉಸಿರಲಿ
ವಂದೇ...........ಮಾತರಂ.............

ಹಸಿಯ ಮಣ್ಣಿನಲಿ ಹೊಸದು ಕನಸಿರಲಿ ರಕ್ತ ಕ್ರಾಂತಿಗಳ ಕನಸು ಬರದಿರಲಿ
ದೇಶ ಭಾಷೆಗಳು ಕೂಡಿ ಕಲೆತಿರಲಿ. ರಾಕ್ಷಸರ ಪೀಡೆ ತೊಲಗಿಸಲಿ
ಎತ್ತ ನೋಡಿದರೂ ಒಂದೇ ಬಾನು, ಎತ್ತ ಹಾಡಿದರೂ ಒಂದೇ ಭಾವ
ರಾಷ್ರದುನ್ನತಿಗೆ ಕೈ ಜೋಡಿಸುವ ನಾಡ ಕಟ್ಟುವ. ನಾವು
ಹಾಡ ಹಾಡುವ ವಂದೇ.....................ಮಾತರಂ...................

ಜಾತಿ ನೀತಿಗಳು ಉಸಿರಿಗಿಲ್ಲ. ಮಾತೆ ಮಮತೆಗೆ ಕರಗದವರಿಲ್ಲ.
ಹಸಿವು ಉಸಿರಿನ್ನಿತ್ತ ಜನ್ಮದಾತೆಗೆ ಮುಡಿಪಾಗಲಿ ಎಲ್ಲ ೆಲ್ಲ.
ಭಾರತೀಯ ನೀ ಬದ್ಧನಾಗಿರು ಭಾವದೀವಿಗೆ ಬೆಳಗಿಸುತ್ತಿರು
ಅರ್ಘ್ಯವಾಗಲೀ ನಿನ್ನ ುಸಿರೂ
ಗಾನವಾಗಲೀ ತಾನವಾಗಲೀ ಮೊಳಗಲೀ
ವಂದೇ ................ಮಾತರಂ...............

ನುಡಿಯ ನಮನವಿದು ಮಾತೃಭೂಮಿಗೆ
ಸುಜನ ವಂಧ್ಯೆಗೆ ರಾಷ್ಟ್ರಮಾತೆಗೆ
ಭರತ ಭೂಮಿಗೆ. ಜೀವದಾತೆಗೆ
ನುಡಿಯ ನಮನವಿದು ಜಗನ್ಮಾತೆಗೆ
ವಂದೇ.................ಮಾತರಂ...................

(ವಂದೇ ಮಾತರಂ ಬರೆದ,ಹಾಡಿದ, ಏಲ್ಲ ವ್ಯಕ್ತಿಗಳ ಗೌರವದಿಂದ ನಮಿಸುತ್ತ.)

Rating
No votes yet