ವಿಜಯದಾಸರು

ವಿಜಯದಾಸರು

ಪ್ರಿಯ ಸ್ನೇಹಿತರೆ, ವಿಜಯದಾಸರ ಬಗ್ಗೆ ಒಂದು ಲೇಖನ ಹರಿದಾಸ ಸಂಪದದಲ್ಲಿ ಹಾಕಿದ್ದೇನೆ. ಅವರು ಮಹಾನ್ ವಾಗ್ಗೇಯಕಾರರು, ಪವಾಡಪುರುಷರು. ತಮ್ಮ ಪವಾಡ ಶಕ್ತಿಯನ್ನು ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಿದರು. ಅವರ ರಚನೆಗಳೂ ಸಹಾ ದಿನನಿತ್ಯದ ಜನಜೀವನದ ಹಾದಿ ಉತ್ತಮವಾಗಿಸುವಂತಹಾ ವಿಚಾರಪೂರಿತವಾದವು. ರಾಮಾಯಣ ಮಹಾಭಾರತದ ವಿಚಾರಗಳೂ ಇವೆ. ಪುರಂದರ ದಾಸರ ಬಗ್ಗೆ ಈ ಲೋಕಕ್ಕೆ ಹೆಚ್ಚು ವಿಷಯಗಳು ತಿಳಿದಿರುವುದೂ ಅವರಿಂದಲೇ. ಇಷ್ಟೆಲ್ಲಾ ಇದ್ದರೂ ಅವರ ಬಗ್ಗೆ ಬರೆದಾಗ ನನಗೆ ಒಳಗೆ ಏನೋ ಒಂದು ರೀತಿಯ ನೋವು. ಅವರು ಸಾಂಸಾರಿಕ ಜೀವನದಿಂದ ನೊಂದು ಎಳೆಯ ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಬಿಟ್ಟು ಕಾಶಿಗೆ ಓಡಿ ಹೋದುದು ಸರಿಯೇ? ಆ ಎಳೆ ವಯಸ್ಸಿನ ತಾಯಿ ಯಾರ ಆಸರೆಯೂ ಇಲ್ಲದೇ ತನ್ನ ಎರಡು ಮಕ್ಕಳನ್ನು ಹೇಗೆ ಬೆಳೆಸಿದಳು? ಇದು ನನ್ನ ಚಿಂತೆ. ಪುರಂದರದಾಸರ ಅನುಗ್ರಹದಿಂದ ಅವರು ಉತ್ತಮ ವಾಗ್ಗೇಯಕಾರರಾಗಿ ಜೀವನ ಸುಗಮವಾದ ನಂತರ ಅವರ ಪತ್ನಿಯೂ ಸುಖವಾಗಿದ್ದಿರಬಹುದು. ಆದರೆ ಅವರ ಪತ್ನಿಯ ಬಗ್ಗೆ ನನಗೆ ಎಲ್ಲೂ ವಿಷಯಗಳು ಸಿಕ್ಕಿಲ್ಲ. ಯಾರಿಗಾದರೂ ಗೊತ್ತಿದ್ದರೆ ನನಗೂ ತಿಳಿಸುವಿರಾ? ವಿಜಯದಾಸರ ಬಗ್ಗೆ ನನ್ನ ಲೇಖನ ಓದಲು ಈ ಕೆಳಗಿನ ಲಿಂಕ್ ಉಪಯೋಗಿಸಿ.
http://haridasa.in/forum/103/%E0%B2%B5%E0%B2%BF%E0%B2%9C%E0%B2%AF%E0%B2%A6%E0%B2%BE%E0%B2%B8%E0%B2%B0%E0%B3%81

Rating
No votes yet