ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

ತಮ್ಮಲ್ಲನೇಕರು ಆಗಲೇ ಪತ್ರಿಕೆಗಳಲ್ಲಿ ವಿದ್ಯಾನಂದ ಶೆಣೈ ನಿಧನರಾದ ಸುದ್ದಿಯನ್ನು ಒದಿರಬಹುದು. ಕಳೆದ ಕೆಲ ದಿನಗಳಿಂದ ಮಿದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ೯:೦೫ ಕ್ಕೆ ನಮ್ಮೆಲ್ಲರನ್ನು ಅಗಲಿದರು.

ಕೆಲ ದಿನಗಳ ಹಿಂದೆ ಪ್ರತಾಪ ವಿಜಯ ಕರ್ನಾಟಕದ ಬೆತ್ತಲೆ ಜಗತ್ತು ಅಂಕಣದಲ್ಲಿ ಅವರ ಬಗ್ಗೆ ಬರೆದಿದ್ದರು. ಪುನಃ ಇವತ್ತು ಅದರ ಸಾರಾಂಶವನ್ನು ವಿಕದಲ್ಲಿ ಮುದ್ರಿಸಿದ್ದಾರೆ. ವಿದ್ಯಾನಂದರ ಕಣ್ಮರೆಯಿಂದ ನಮ್ಮ ಮುಂದಿನ ಪೀಳಿಗೆ ಅವರ ಭಾರತ ದರ್ಶನ ಉಪನ್ಯಾಸದಿಂದ ವಂಚಿತರಾಗಲಿದ್ದಾರೆ. ಒಬ್ಬ ವ್ಯಕ್ತಿ ಒಂದೆರಡು ಪೀಳಿಗೆಯ ಮೇಲೆ ಯಾವ ರೀತಿ ಪ್ರಭಾವ ಬೀರಬಲ್ಲರು ಎಂಬುದಕ್ಕೆ ಅವರು ಸಾಕ್ಷಿ. ಅವರ ವಾಗ್ಝರಿಯಿಂದ ಭವ್ಯ ಭಾರತದ ಇತಿಹಾಸವನ್ನು ಕೇಳುತ್ತಿದ್ರೆ ಎಂತಹ ವ್ಯಕ್ತಿಯಲ್ಲಿಯೂ ಕೂಡ ರೋಮಾಂಚನವುಂಟಾಗುವದು, ಒಂದು ಕ್ಷಣವಾದರೂ ಇಂತಹ ದೇಶದಲ್ಲಿ ಹುಟ್ಟಿದ ನಾವು ಧನ್ಯ ಎಂಬ ಭಾವನೆ ಬರುವದು.

೭೦ ರ ದಶಕದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೇ ನಗರಸಭೆಯ ಸದಸ್ಯರಾಗಿದ್ದ ಅವರು ಬಯಸಿದ್ದರೆ ರಾಜಕೀಯದಲ್ಲಿಯೆ ಮುಂದುವರಿದು ಏನೇನೋ ಆಗಬಹುದಿತ್ತು, ಬಹುಶಃ ಗೂಟದ ಕಾರಿನಲ್ಲಿಯೂ ತಿರುಗಬಹುದಿತ್ತು. ಆದರೆ ಅದೆಲ್ಲವನ್ನು ತ್ಯಾಗ ಮಾಡಿ ಸಂಘಕ್ಕಾಗಿ ತಮ್ಮ ಜೀವನವನ್ನು ಮುಡಿಪಿಟ್ಟರು. ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಹಗಲಿರುಳು ಶ್ರಮಿಸಿದರು. ಅವರಿನ್ನೂ ನಮ್ಮ ಮಧ್ಯೆ ಇರಬೇಕಾಗಿತ್ತು, ಇಂದಿನ ವಿಧ್ಯಭ್ಯಾಸ ಪದ್ಧತಿಯಲ್ಲಿ ಶಾಲೆ ಕಲಿತು ಹೊರಬರುವ ಯುವ ಪೀಳಿಗೆಗೆ ಭಾರತದ ಹಿರಿಮೆ ಗರಿಮೆಗಳನ್ನು ತಿಳಿಸಿಕೊಡುವದು ಅತ್ಯಂತ ಅವಶ್ಯಕವಾಗಿದೆ, ಅದಕ್ಕೆ ವಿದ್ಯಾನಂದರಕ್ಕಿಂತಲೂ ಸೂಕ್ತ ವ್ಯಕ್ತಿ ಬೇರಿಲ್ಲ.

ಅವರು ಬಿಟ್ಟುಹೋಗಿರುವ ಕಾರ್ಯವನ್ನು ಮುಂದುವರಿಸುವದೆ ನಾವೆಲ್ಲಾ ಅವರಿಗೆ ಸಲ್ಲಿಸಬಹುದಾದ ನಿಜವಾದ ಶೃದ್ಧಾಂಜಲಿ. ಅವರು ಭಾರತ ದರ್ಶನ ಕಾರ್ಯಕ್ರಮವನ್ನು ಆಧರಿಸಿ ಹೊರಬಂದಿರುವ ಪುಸ್ತಕ ಅನೇಕ ವಾರ ಟಾಪ್ ಟೆನ್ ನಲ್ಲಿ ಇತ್ತು. ನಾವೆಲ್ಲಾ ಅವರ ಪುಸ್ತಕ ಒದೋಣ, ಭಾರತ ದರ್ಶನ ಧ್ವನಿಮುದ್ರಿಕೆಯನ್ನು ಮತ್ತೆ ಮತ್ತೆ ಕೇಳೋಣ. ಸಾಧ್ಯವಾದರೆ ನಾವೂ ಕೂಡ ಭಾರತ ದರ್ಶನದಂತಹ ಕಾರ್ಯಕ್ರಮ ಮಾಡಲು ಪ್ರಯತ್ನಿಸೋಣ. ಇವತ್ತು ಮಧ್ಯಾಹ್ನ ೩ ಘಂಟೆಗೆ ಶೃದ್ಧಾಂಜಲಿ ಸಭೆ ಮತ್ತು ಅಂತಿಮ ದರ್ಶನವನ್ನು ಕೇಶವ ಶಿಲ್ಪದಲ್ಲಿ ಏರ್ಪಡಿಸಲಾಗಿದೆ.

ವಿಳಾಸ: ಕೇಶವ ಶಿಲ್ಪ, ರಾಷ್ಟ್ರೋತ್ಥಾನ ಪರಿಷತ್ , ಉಮಾ ಥೇಟರ್ ಹತ್ತಿರ, ಚಾಮರಾಜ ಪೇಟೆ, ಬೆಂಗಳೂರು.

Rating
No votes yet

Comments